Advertisement

ಕೋರ್ಟ್‌ ನಿರ್ದೇಶನ ಉಲ್ಲಂಘಿಸಿದ್ದರೆ ಕ್ರಮ: ಎಚ್ಕೆ

08:15 AM Feb 24, 2018 | |

ವಿಧಾನ ಪರಿಷತ್ತು: ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್‌ ಅಭಿಯಾನ ಹಾಗೂ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ
ನೇಮಕಗೊಂಡಿರುವ ಬ್ಲಾಕ್‌ ಮಟ್ಟದ ಸಮಾಲೋಚಕರು (ಬಿಆರ್‌ಸಿ) ಮತ್ತು ಕ್ಲಸ್ಟರ್‌ ಮಟ್ಟದ ಸಮಾಲೋಚಕರು (ಸಿಆರ್‌ಸಿ) ಸೇವೆಯನ್ನು ಮುಂದುವರಿಸುವ ಸಂಬಂಧ ನ್ಯಾಯಾಲಯದ ನಿರ್ದೇಶನ ಮತ್ತು ಇಲಾಖೆಯ ಆದೇಶ ಉಲ್ಲಂಘನೆ ಆಗಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ 48 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ಭರವಸೆ ನೀಡಿದರು.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ, ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಬಿಆರ್‌ಸಿ, ಸಿಆರ್‌ಸಿಗಳ
ಸೇವೆ ಮುಂದುವರಿಸುವ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನ ಮತ್ತು ಸರ್ಕಾರದ ಸುತ್ತೋಲೆಯ ಉಲ್ಲಂಘನೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್‌, ಈ ಬಗ್ಗೆ ಲಿಖಿತ ಮಾಹಿತಿ ಕೊಟ್ಟರೆ, 48 ಗಂಟೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು.

44 ಬಿಆರ್‌ಸಿ ಮತ್ತು 122 ಸಿಆರ್‌ಸಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ. ಆದರೆ, ಈಗಾಗಲೇ ಸೇವೆಯಲ್ಲಿದ್ದ ಯಾರನ್ನೂ ಮುಂದುವರಿಸಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಬೇರೆಯವರನ್ನು ಅಧಿಕಾರಿಗಳು ನೇಮಕ
ಮಾಡಿಕೊಂಡಿದ್ದಾರೆ. ಇದರಿಂದ 950ಕ್ಕೂ ಹೆಚ್ಚು ಪದವೀಧರರಿಗೆ ಅನ್ಯಾಯವಾಗಿದೆ ಎಂದು ತೂಪಲ್ಲಿ ಹೇಳಿದರು. ಈಗಿರುವ ಸಿಆರ್‌ಸಿ ಮತ್ತು ಬಿಆರ್‌ಸಿಗಳ ಸೇವೆ ಮುಂದುವರಿಸುವ ವಿಚಾರವೇ ಬೇರೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ವಿಚಾರವೇ ಬೇರೆ. ಸದ್ಯ ನನ್ನ ಬಳಿ ಇರುವ ಮಾಹಿತಿಯಂತೆ 44 ಬಿಆರ್‌ಸಿ ಮತ್ತು 122 ಸಿಆರ್‌ಸಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. 

ಗ್ರಾಪಂ ಕಟ್ಟಡಗಳಿಗೆ ನಿವೇಶನ ವಿಧಾನ 
ವಿಧಾನ ಪರಿಷತ್ತು: ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 462 ಗ್ರಾಮ ಪಂಚಾಯಿತಿಗಳ ಪೈಕಿ ಕಚೇರಿ ಕಟ್ಟಡಕ್ಕೆ ನಿವೇಶನ ಲಭ್ಯವಿಲ್ಲದ 132 ಗ್ರಾಪಂಗಳಿಗೆ ಮಾರ್ಚ್‌ 31ರೊಳಗೆ ನಿವೇಶನ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದಿಟಛಿ ಸಚಿವ ಎಚ್‌.
ಕೆ.ಪಾಟೀಲ್‌ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಜಮೀನು ಲಭ್ಯವಿರುವ ಕಡೆ ನಿವೇಶನ ಒದಗಿಸಲಾಗುವುದು. ಅಗತ್ಯ ಬಿದ್ದರೆ ಜಮೀನು ಖರೀದಿಸಿ ಕಚೇರಿ ಕಟ್ಟಡಕ್ಕೆ ನಿವೇಶನ
ಒದಗಿಸಲಾಗುವುದು ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಒಟ್ಟು 462 ಗ್ರಾಪಂಗಳು ಹೊಸದಾಗಿ ರಚನೆಯಾಗಿವೆ. ಇದರಲ್ಲಿ ಕೇವಲ 18 ಗ್ರಾಪಂಗಳಿಗೆ ಮಾತ್ರ ಸ್ವಂತ ಕಟ್ಟಡಗಳಿದ್ದು, 151 ಗ್ರಾಪಂಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 293 ಗ್ರಾಪಂಗಳು
ಇತರೆ ಕಟ್ಟಡಗಳಲ್ಲಿ ನಡೆಯುತ್ತಿವೆ. 330 ಗ್ರಾಪಂಗಳಿಗೆ ನಿವೇಶನ ಲಭ್ಯವಿದ್ದು ಕಚೇರಿ ಕಟ್ಟಡ ನಿರ್ಮಿಸಬೇಕಾಗಿದೆ. ನಿವೇಶನ ಲಭ್ಯವಿಲ್ಲದ 132 ಗ್ರಾಪಂಗಳಿಗೆ ಮಾ.31ರೊಳಗೆ ನಿವೇಶನ ಒದಗಿಸಲಾಗುವುದು ಎಂದು ಸಚಿವ ಪಾಟೀಲ್‌ ತಿಳಿಸಿದರು. 

ಕಲಬುರಗಿ ಜಿಲ್ಲೆಯಲ್ಲಿ ಅತಿಹೆಚ್ಚು 44, ಬೆಂಗಳೂರು ನಗರ, ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ತಲಾ 15, ಮೈಸೂರು 9, ವಿಜಯಪುರ 5, ಯಾದಗಿರಿ, ಬೆಳಗಾವಿ, ಚಾಮರಾಜನಗರ, ಹಾವೇರಿ ತಲಾ 4, ದಕ್ಷಿಣ ಕನ್ನಡ, ಕೊಡಗು ತಲಾ 3, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ರಾಯಚೂರು, ಉಡುಪಿ, ಕೊಪ್ಪಳ ಜಿಲ್ಲೆಯ ತಲಾ 1 ಗ್ರಾಪಂಗಳಿಗೆ ನಿವೇಶನ ಲಭ್ಯವಿಲ್ಲ ಎಂದು ಸಚಿವರು ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next