Advertisement
ಕಾಪು: ಕನಿಷ್ಠ ಪುರುಷ ಮತದಾರರು ಪುರುಷ ಮತದಾರರ ಪೈಕಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,13,758 ಮಂದಿ ಇದ್ದರೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿರುವವರ ಸಂಖ್ಯೆ 89,444 ಮಾತ್ರ. ಮಹಿಳಾ ಮತದಾರರಲ್ಲಿಯೂ ಬೈಂದೂರು ಕ್ಷೇತ್ರದಲ್ಲಿ 1,18,962 ಮಂದಿ ಮತದಾರರಿದ್ದಾರೆ. ಕನಿಷ್ಠ ಮತದಾರರಿರುವುದು ಕಾಪು ಕ್ಷೇತ್ರದಲ್ಲಿ 97,233.
ಜಿಲ್ಲೆಯಲ್ಲಿ ಒಟ್ಟು 10 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ. ಗರಿಷ್ಠ ಮತದಾರರಿರುವುದು ಕಾಪು ಕ್ಷೇತ್ರದಲ್ಲಿ 4, ಕಾರ್ಕಳ ಕ್ಷೇತ್ರದಲ್ಲಿ ಯಾರೂ ಇಲ್ಲ, ಬೈಂದೂರು 3, ಕುಂದಾಪುರ 2, ಉಡುಪಿಯಲ್ಲಿ 1 ಮಂದಿ ಮತಹಾಕಲು ಅರ್ಹತೆ ಪಡೆದಿದ್ದಾರೆ.
Related Articles
80 ವರ್ಷ ಮೇಲ್ಪಟ್ಟ ಮತದಾರರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 7,827 ಮಂದಿ ಮತದಾರರಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ 5,589 ಮಂದಿ ಇದ್ದಾರೆ.
Advertisement
1,111 ಮತಗಟ್ಟೆಜಿಲ್ಲೆಯಲ್ಲಿ ಒಟ್ಟು 1,111 ಕಡೆಗಳಲ್ಲಿ ಮತಗಟ್ಟೆ ಇದ್ದು ಬೈಂದೂರಿನಲ್ಲಿ 246, ಉಡುಪಿ 226, ಕುಂದಾಪುರ 222, ಕಾರ್ಕಳ 209, ಕಾಪು 208 ಮತಗಟ್ಟೆಗಳಿವೆ. 17,927 ಯುವ ಮತದಾರರು: ಕಾರ್ಕಳದಲ್ಲಿ ಗರಿಷ್ಠ
ಉಡುಪಿ ಜಿಲ್ಲೆಯಲ್ಲಿ ಒಟ್ಟು 17,927 ಮಂದಿ ಯುವ ಮತದಾರರು ಇದುವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 3,981 ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದರೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 3,277 ಮಂದಿ ಯುವ ಮತದಾರರಿದ್ದಾರೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ 3 ಸಾವಿರಕ್ಕೂ ಅಧಿಕ ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿರುವುದು ವಿಶೇಷವಾಗಿದೆ. ಎ.10ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.