Advertisement
ಮಂಗಳೂರು: ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಮತದಾರರ ನಾಡಿಮಿಡಿತ ಅರಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಸಮೀಕ್ಷೆಯ ಮೊರೆ ಹೋಗಿದ್ದು, ಅದರ ತಾಜಾ ವರದಿಗಾಗಿ ಕಾಯುತ್ತಿವೆ.
Related Articles
Advertisement
ಬಿಜೆಪಿಬಿಜೆಪಿಯಲ್ಲಿ ಹಾಲಿ ಶಾಸಕರ ಬದಲಾವಣೆ ಮಾಡಬೇಕಾ? ಎಂಬ ಬಗ್ಗೆ ಒಂದು ಸುತ್ತಿನ ಸಮೀಕ್ಷೆ ನಡೆದು ವರದಿ ಹೈಕಮಾಂಡ್ ಕೈಯಲ್ಲಿದೆ. ಒಂದು ವೇಳೆ ಅವರಿಗೆ ಮತ್ತೆ ಸೀಟು ನೀಡಿದರೆ ಗೆಲ್ಲುವ ಪ್ರಮಾಣ ಎಷ್ಟು?ಎದುರಾಳಿಗಳ ಲೆಕ್ಕಾಚಾರ, ಜಾತಿವಾರು ತಂತ್ರ ಎಲ್ಲವನ್ನೂ ಚರ್ಚಿಸಲಾಗುತ್ತಿದೆ. ಟಿಕೆಟ್ ಹಂಚಿಕೆ ಸಂದರ್ಭ ಸಮೀಕ್ಷೆಯ ಅಂಶಗಳು ಪರಿಗಣಿತವಾಗು ವುದರಿಂದ ಆಕಾಂಕ್ಷಿಗಳಲ್ಲಿ ತಳಮಳ ಆರಂಭವಾಗಿದೆ. ಕಾಂಗ್ರೆಸ್
ವಿಧಾನಸಭಾವಾರು ಟ್ರೆಂಡ್ ಅರಿಯಲು ಹಾಗೂ ಸಂಭವನೀಯ ಅಭ್ಯರ್ಥಿಗಳ ಪರ ಇರಬಹುದಾದ ಧನಾತ್ಮಕ ಅಂಶಗಳನ್ನು ತಿಳಿಯಲು ಕಾಂಗ್ರೆಸ್ ಸಹ ಒಂದು ಸಮೀಕ್ಷೆ ನಡೆಸಿತ್ತು. ಇತರ ಲಾಭ-ನಷ್ಟಗಳು ಯಾವುವು? ಎಂಬ ಬಗ್ಗೆಯೂ ಪಟ್ಟಿ ಮಾಡಲಾಗಿದೆ. ಈ ಆಧಾರದಲ್ಲೇ ಬೆಳ್ತಂಗಡಿ ಮತ್ತು ಕುಂದಾಪುರದಲ್ಲಿ ಹೊಸಬರಿಗೆ ಅವಕಾಶ ನೀಡಲಾಯಿತು. ಮಂಗಳೂರು ದಕ್ಷಿಣದಲ್ಲಿ ಹೊಸ ಮುಖದ ಸಾಧ್ಯತೆಯ ಬಗ್ಗೆಯೂ ಸಮೀಕ್ಷೆ ಉಲ್ಲೇಖೀಸಿದೆ ಎನ್ನಲಾಗಿದೆ. ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಯಾಗಿದ್ದು, ಇನ್ನೊಂದು ವಾರದೊಳಗೆ ಕಣ ಚಿತ್ರಣ ಇನ್ನಷ್ಟು ಸ್ಪಷ್ಟವಾಗಲಿದೆ. ಯಾರಿಗೂ ಗೊತ್ತಿಲ್ಲ!
ಆಂತರಿಕ ಸಮೀಕ್ಷೆ ಮಾಡುವಾಗ ಪಕ್ಷದ ಪ್ರಮುಖರಿಗೂ ಮಾಹಿತಿ ಇರದು. ಸಮೀಕ್ಷಕರೂ ಸಹ ಜನ ಸಾಮಾನ್ಯರು, ಸಾಮಾನ್ಯ ಕಾರ್ಯಕರ್ತರನ್ನು ಮಾತನಾಡಿಸು ತ್ತಾರೆಯೇ ಹೊರತು ನಾಯಕರು ಮತ್ತು ಅವರ ಆಪ್ತರ ಬಳಿ ಸುಳಿಯು ವುದೇ ಇಲ್ಲ. ಈ ಮಧ್ಯೆ ಜಿಲ್ಲೆಯೊಳಗೇ ಮತ್ತೂಂದೂ ಸಮೀಕ್ಷೆ ನಡೆಸುವ ಪದ್ಧತಿಯೂ ಇದೆ. ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು, “ಅವುಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ನಮ್ಮ ಗೆಲುವಿಗೆ ಪೂರಕವಾದ ವಾತಾವರಣವಿದೆ” ಎನ್ನಲು ಮರೆಯುವುದಿಲ್ಲ. ಖಾಸಗಿ ಏಜೆನ್ಸಿಗಳ ಮೂಲಕ ಕ್ಷೇತ್ರಗಳಲ್ಲಿನ ಸದ್ಯದ ಸ್ಥಿತಿಗತಿ, ಮತದಾರರ ಮನಃಸ್ಥಿತಿ, ಆಡಳಿತ ವಿರೋಧಿ ಅಲೆಯ ಲಾಭ-ನಷ್ಟ, ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರ ಸಾಮರ್ಥ್ಯ ಮತ್ತು ದೌರ್ಬಲ್ಯ, ಜಾತಿ ಲೆಕ್ಕಾಚಾರ, ಮುಂಬರುವ ದಿನಗಳಲ್ಲಿ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತೂ ಸಮೀಕ್ಷೆಯಲ್ಲಿ ಪ್ರಸ್ತಾಪವಾಗಲಿವೆ. ಖಾಸಗಿ ಏಜೆನ್ಸಿಗಳು ರಾಜಕೀಯ ಆಳ-ಆಗಲವನ್ನು ಬಲ್ಲ ಮಾಧ್ಯಮ ಹಾಗೂ ರಾಜಕೀಯದ ಅನುಭವಿಗಳನ್ನು ಬಳಸಿ ತಮ್ಮದೇ ತಂಡಗಳನ್ನು ಈ ಕಾರ್ಯಕ್ಕೆ ಬಳಸುತ್ತಿವೆ. ಇದರಂತೆ ಕರಾವಳಿಯಾದ್ಯಂತ ಹಲವು ಮಂದಿಯನ್ನು ಭೇಟಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ, ಕಾಂಗ್ರೆಸ್ ಎರಡು ಹಂತದ ಸಮೀಕ್ಷೆ ಮುಗಿಸಿವೆ. ಎರಡೂ ಹಂತದಲ್ಲಿ ಸಂಗ್ರಹಿಸಲಾದ ಮಾಹಿತಿಗಳು ರಹಸ್ಯವಾಗಿ ವರಿಷ್ಠರಿಗೆ ಸಲ್ಲಿಕೆಯಾಗಿದೆ. ಜತೆಗೆ ಜೆಡಿಎಸ್ ಕೂಡ ಒಂದು ಸುತ್ತಿನ ಆಂತರಿಕ ಸಮೀಕ್ಷೆ ಮುಗಿಸಿದೆ. ಗುಪ್ತ ಸರ್ವೇಯೇ ಆಧಾರ
ಈ ಖಾಸಗಿ ಏಜೆನ್ಸಿಗಳ ಗುಪ್ತ ಸಮೀಕ್ಷೆಗಳಿಗೆ ಭಾರೀ ಬೇಡಿಕೆ ಇದೆ. ಪಕ್ಷದ ಪರ ವಾತಾವರಣ ಅನುಕೂಲವೋ, ಪ್ರತಿಕೂಲವೋ ಎಂಬುದನ್ನು ಅರಿಯಲು, ಟಿಕೆಟ್ ಆಕಾಂಕ್ಷಿಗಳ ಪ್ರಭಾವ ಅರಿಯಲೂ ಈ ಸರ್ವೆ ಅನುಕೂಲ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಬೆಳ್ತಂಗಡಿಯಲ್ಲಿ ಹೊಸಬ ರಿಗೆ ಅವಕಾಶ ನೀಡಲಿಕ್ಕೂ ಇಂಥ ದೊಂದು ಗುಪ್ತ ಸರ್ವೆ ವರದಿ ಕಾರಣವಾಗಿತ್ತಂತೆ. ~ ದಿನೇಶ್ ಇರಾ