Advertisement

ಮೆಥಡ್‌ ಆ್ಯಕ್ಟಿಂಗ್‌ ಕಲಿಕೆ

09:11 PM Apr 12, 2019 | Lakshmi GovindaRaju |

ಥಿಯೇಟರ್‌ ಆರ್ಟಿಸ್ಟ್ರಿ ತಂಡದಿಂದ “ಸಮ್ಮರ್‌ ಆರ್ಟಿಸ್ಟ್ರಿ’ ಮಕ್ಕಳ ರಂಗಶಿಬಿರ ನಡೆಯುತ್ತಿದೆ. ಬೆನಕ ರಂಗ ತಂಡದಲ್ಲಿ ಸದಸ್ಯರಾಗಿದ್ದ ಚಂದ್ರಕೀರ್ತಿಯವರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಚಿಕ್ಕಂದಿನಲ್ಲಿ ಮಕ್ಕಳ ರಂಗತಂಡದಲ್ಲಿಯೂ ತೊಡಗಿಕೊಂಡಿದ್ದರಿಂದ ಮಕ್ಕಳಿಗೆ ರುಚಿಸುವ ಹಾಗೆ ಕಲಿಸುವ ಕಲೆ ಕರಗತವಾಗಿದೆ ಎನ್ನುತ್ತಾರೆ ಅವರು.

Advertisement

ಶಿಬಿರದ ವಿಶೇಷತೆಯೆಂದರೆ ಪೋಸ್ಟ್‌ಆಫೀಸ್‌, ಮಾರ್ಕೆಟ್‌, ಆಡಿಟೋರಿಯಂ ಮುಂತಾದ ಜಾಗಗಳಿಗೆ ಕರೆದೊಯ್ದು ಆ ಜಾಗಗಳ ಸ್ಥೂಲ ಚಿತ್ರಣವನ್ನು ಗಮನಿಸುವಂತೆ ಮಾಡುವುದು. ನಂತರ ಅಲ್ಲಿ ತಾವು ಕಂಡ ವ್ಯಕ್ತಿಗಳ ಹಾವಭಾವವನ್ನು ನಾಟಕದ ಪಾತ್ರಗಳ ಮೂಲಕ ಮರುಸೃಷ್ಟಿಸುವುದು ಈ ಚಟುವಟಿಕೆಯ ಉದ್ದೇಶ.

ಇಂಥಾ ಹಲವು ಸೃಜನಶೀಲ ಪ್ರಯೋಗಗಳನ್ನು ಶಿಬಿರ ಒಳಗೊಂಡಿದೆ. ನಾಟಕ ಮಾತ್ರವಲ್ಲದೆ ದೇಶೀಯ ಸೊಬಗಿನ ಆಟಗಳು ಮತ್ತು ಹತ್ತು ಹಲವು ಚಟುವಟಿಕೆಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ.

ವೈಶಿಷ್ಟ್ಯ
-ರಂಗಭೂಮಿ
-ಸಂಗೀತ
-ನೃತ್ಯ
-ಕಥಾವಾಚನ
-ಬೊಂಬೆಯಾಟ

ಇವು ಜತೆಗಿರಲಿ
-ನೀರಿನ ಬಾಟಲಿ
-ತಿಂಡಿ ಡಬ್ಬ

Advertisement

ವಯೋಮಿತಿ: 7-12
ಎಲ್ಲಿ?: ಧೀಮಹಿ ಡ್ಯಾನ್ಸ್ ಸ್ಟುಡಿಯೊ, ಇಸ್ರೋ ಲೇಔಟ್‌
ಯಾವಾಗ?: ಏ.13- 28, ಬೆಳಗ್ಗೆ 9.30- ಮಧ್ಯಾಹ್ನ 1
ಸಂಪರ್ಕ: 9480303340

Advertisement

Udayavani is now on Telegram. Click here to join our channel and stay updated with the latest news.

Next