Advertisement
ಆರಂಭಕಾರ ಬೆನ್ ಡಕೆಟ್ ಅವರ 107 ರನ್ ಸಾಹಸದಿಂದ ಇಂಗ್ಲೆಂಡ್ 49.2 ಓವರ್‌ಗಳಲ್ಲಿ 309 ರನ್ನುಗಳ ಸವಾಲಿನ ಮೊತ್ತವನ್ನೇ ಪೇರಿಸಿತ್ತು. ಆದರೆ ಮಳೆಯ ಮುನ್ಸೂಚನೆ ಅರಿತ ಆಸ್ಟ್ರೇಲಿಯ ಬಿರುಸಿನ ಆಟಕ್ಕೆ ಮುಂದಾ ಯಿತು. 20.4 ಓವರ್ ವೇಳೆ ಮಳೆ ಸುರಿದ ಪರಿಣಾಮ ಆಟ ಮುಂದು ವರಿಯ ಲಿಲ್ಲ. ಆಗ ಆಸೀಸ್ 2 ವಿಕೆಟಿಗೆ 165 ರನ್ ಗಳಿಸಿತ್ತು. ಡಿಎಲ್‌ಎಸ್ ನಿಯಮ ದಂತೆ 49 ರನ್ ಮುನ್ನಡೆಯಲ್ಲಿತ್ತು.
ಪಾರ್ಟ್‌ಟೈಮ್ ಬೌಲರ್ ರೂಪದಲ್ಲಿ ದಾಳಿಗಿಳಿದ ಟ್ರ್ಯಾವಿಸ್ ಹೆಡ್ 28 ರನ್ ವೆಚ್ಚದಲ್ಲಿ 4 ವಿಕೆಟ್ ಕೂಡ ಉಡಾ ಯಿಸಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಸರಣಿಶ್ರೇಷ್ಠ ಪ್ರಶಸ್ತಿ ಕೂಡ ಹೆಡ್ ಪಾಲಾಯಿತು.