Advertisement

ಮೆಂತ್ಯೆ ಬಾಯಿಗೆ ಕಹಿ Bodyಗೆ ಸಿಹಿ

06:24 PM Jul 09, 2019 | mahesh |

ಮೆಂತ್ಯೆ, ಬಾಯಿಗೆ ಕಹಿ ಎನಿಸಿದರೂ, ದೇಹದ ಆರೋಗ್ಯಕ್ಕೆ ಸಿಹಿಯಾಗುವ ಕಾಳು. ಕಾಳಷ್ಟೇ ಅಲ್ಲ, ಮೆಂತ್ಯೆ ಸೊಪ್ಪಿನಲ್ಲಿಯೂ ಕ್ಯಾಲ್ಸಿಯಂ, ಪಾಸ್ಪರಸ್‌, ಐರನ್‌ ಮತ್ತು ವಿಟಮಿನ್‌ ಸಿ ಸಮೃದ್ಧವಾಗಿದೆ. ಅಡುಗೆಮನೆಯಲ್ಲಿ ಸದಾಕಾಲ ಇರುವ ಮೆಂತ್ಯೆಯ ಉಪಯೋಗ ಅರಿತವನೇ ಜಾಣ.

Advertisement

-ಮೆಂತ್ಯೆ ಸೊಪ್ಪನ್ನು ಅರೆದು, ತಲೆಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲು ನಯವಾಗಿ, ಕಪ್ಪಾಗಿ ಬೆಳೆಯುತ್ತದೆ.

-ಮೆಂತ್ಯೆ ಕಾಳನ್ನು ಹುರಿದು ಪುಡಿ ಮಾಡಿ, ಗೋಧಿ ಹಿಟ್ಟಿನಲ್ಲಿ ಸೇರಿಸಿ ಹಲ್ವಾ ತಯಾರಿಸಿ ಅದನ್ನು ಬಾಣಂತಿಯರಿಗೆ ಕೊಟ್ಟರೆ, ಎದೆ ಹಾಲು ವರ್ಧಿಸುತ್ತದೆ.

-ಮೆಂತ್ಯೆ ಸೊಪ್ಪು ಸೇವನೆಯಿಂದ ರಕ್ತವರ್ಧನೆಯಾಗುತ್ತದೆ.

-ನಾಲಗೆ ರುಚಿ ಕಳೆದುಕೊಂಡಾಗ, ಅಜೀರ್ಣವಾಗಿದ್ದಾಗ ಮೆಂತ್ಯೆಯ ತಂಬುಳಿ ಸೇವಿಸಬಹುದು.

Advertisement

-ಮೆಂತ್ಯೆಕಾಳನ್ನು ರಾತ್ರಿ ನೆನೆಸಿ, ಬೆಳಗ್ಗೆ ಅದರ ಪೇÓr… ತಯಾರಿಸಿ ತಲೆಕೂದಲಿಗೆ ಹಚ್ಚಿ, ಅರ್ಧ ಗಂಟೆಯ ನಂತರ ಸೀಗೇಕಾಯಿ ಹಾಕಿ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

-ಮೆಂತ್ಯೆ ಕಾಳಿನ ಕಷಾಯ ಸೇವನೆಯಿಂದ ಹೊಟ್ಟೆಯುರಿ, ಜಠರದ ಹುಣ್ಣು, ಜಠರದ ಬಾವು ಗುಣವಾಗುತ್ತವೆ.

-ಹೊಟ್ಟೆ, ಮಲದ್ವಾರ, ಮೂತ್ರಕೋಶ, ಉಸಿರಾಟದ ಮಾರ್ಗವನ್ನು ಮೆಂತ್ಯೆ ಕಷಾಯ ಸ್ವತ್ಛಗೊಳಿಸುತ್ತದೆ.

-ಬಿಸಿನೀರಿನಲ್ಲಿ ಮೆಂತ್ಯೆ ಕಾಳನ್ನು ಕುದಿಸಿ, ತಣ್ಣಗಾದ ಮೇಲೆ ಆ ನೀರಿನಲ್ಲಿ ಗಾರ್ಗಲ್‌ ಮಾಡುವುದರಿಂದ ಗಂಟಲುನೋವು, ಉಸಿರಿನ ದುರ್ನಾತ ದೂರವಾಗುತ್ತದೆ.

-ಪ್ರತಿದಿನ ನೂರು ಗ್ರಾಂ ಮೆಂತ್ಯೆಬೀಜವನ್ನು ನೀರಿನಲ್ಲಿ ನೆನೆಸಿ, ಸೇವಿಸುತ್ತಿದ್ದರೆ ಮಧುಮೇಹ ಹತೋಟಿಗೆ ಬರುತ್ತದೆ.

-ವೇದಾವತಿ ಎಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next