ಕಾಸರಗೋಡು: ಕೇರಳದ ನದಿಗಳಲ್ಲಿ ಲೋಹಾಂಶ ವಿಷಕಾರಿ ತ್ಯಾಜ್ಯ ಇರುವುದಾಗಿ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ ಎಂದು ಜಲ ಸಂಪನ್ಮೂಲ ಇಲಾಖೆ ಬಯಲುಪಡಿಸಿದೆ. ಕೇಂದ್ರ ಜಲ ಆಯೋಗ ದೇಶದ ನದಿಗಳಲ್ಲಿ ಲೋಹಾಂಶ ವಿಷ ತ್ಯಾಜ್ಯದ ಕುರಿತ ಅಧ್ಯಯನ ವರದಿ ಯಲ್ಲಿ ಗಂಭೀರ ಸ್ವರೂಪದ ವಿಷಕಾರಿ ತ್ಯಾಜ್ಯ ಭೀತಿ ಎದುರಿಸುತ್ತಿವೆ ಎಂದು ಸಚಿವ ಕೆ. ಕೃಷ್ಣನ್ ಕುಟ್ಟಿ ಹೇಳಿದ್ದಾರೆ.
2014ರ ಮೇ ತಿಂಗಳಲ್ಲಿ ಅಂತಿಮವಾಗಿ ಕೇಂದ್ರ ಜಲ ಆಯೋಗ ಸ್ಟೇಟ್ಸ್ ಆಫ್ ಟ್ರೇಡ್ ಆ್ಯಂಡ್ ಕೋಕ್ಸಿಕ್ ಮೆಟಲ್ಸ್ ಇನ್ ಇಂಡಿಯನ್ ರಿವರ್ಸ್ ಎಂಬ ಬಗ್ಗೆ ಅಧ್ಯಯನ ವರದಿಯನ್ನು ಪ್ರಕಟಿಸಿದೆ.
2011 ಸೆಪ್ಟಂಬರ್, 2012 ಫೆಬ್ರವರಿ, ಜೂನ್, ಅಕ್ಟೋಬರ್, 2013 ಮಾರ್ಚ್, ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತವಾಗಿ 387 ವಾಟರ್ ಕ್ವಾಲಿಟಿ ಮೋನಿಟರಿಂಗ್ ಸ್ಟೇಶನ್‌ಗಳಲ್ಲಾಗಿ ಒಟ್ಟು 1921 ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಪಾಯಕಾರಿಯಾದ ವಿವಿಧ ಲೋಹ ವಿಷಕಾರಿ ತ್ಯಾಜ್ಯ ಇರುವ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಆರ್ಸನಿಕ್, ಕಾಡ್ಮಿಯ, ಕ್ರೋಮಿಯಂ, ಕಾಪರ್, ಮರ್ಕ್ನೂರಿ, ಅಯರ್ನ್(ಕಬ್ಬಿಣ) ಮೊದ ಲಾದ ಲೋಹಗಳು ಇರುವ ಬಗೆಗಿನ ಅಧ್ಯಯನ ನಡೆಸಲಾಗಿತ್ತು.
ಕೇರಳದ 13 ನದಿಗಳ 21 ಮೋನಿಟರಿಂಗ್ ಸ್ಟೇಷನ್‌ಗಳಲ್ಲಿ ಪರಿಶೋಧನೆ ನಡೆಸಲಾಗಿತ್ತು. ಕಾಸರಗೋಡು ಜಿಲ್ಲೆಯ ಪಯಸ್ವಿನಿ, ಪೆರಿಯಾರ್, ವಾಮನಪೂರಂ, ಮೂವಾಟ್ಟುಪ್ಪುಲ, ಪಂಪಾ, ಕಡಲುಂಡಿ, ಮಿನಚ್ಚಿಲ್, ಭರತಪ್ಪುಳ, ಚಾಲಿಯಾರ್, ಕುಟ್ಯಾಡಿ, ಕಲ್ಲಡ, ವಳಪಟ್ಟಣಂ, ಕಬನಿ ಎಂಬಿ ನದಿಗಳ ಜಲವನ್ನು ಅಧ್ಯಯನಕ್ಕೆತ್ತಿ ಕೊಳ್ಳಲಾಗಿತ್ತು. ಈ ವರದಿಯಲ್ಲಿ ಕೇರಳದ 7 ನದಿಗಳಲ್ಲಿ ಕಾಪರ್, ಕಬ್ಬಿಣ ಎಂಬಿ ವುಗಳ ತ್ಯಾಜ್ಯ ಇರುವ ಬಗ್ಗೆ ಹಾಗೂ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನದಲ್ಲಿ ತಿಳಿಯಲಾಯಿತು. ನದಿಗಳಲ್ಲಿರುವ ನೀರಿನ ಲಭ್ಯತೆಗನುಣವಾಗಿ ಇಂತಹ ಲೋಹಾಂಶಗಳ ಅಳತೆಯಲ್ಲಿ ಬದಲಾವಣೆ ಬರುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯಲ್ಲಿ ಸೂಚಿಸಿದೆ.
ನದಿಯ ನೀರಿನಲ್ಲಿ ಲೋಹಾಂಶ ವಿಷಕಾರಿ ತ್ಯಾಜ್ಯ ಸ್ವಾಭಾವಿಕವಾಗಿ ಉಂಟಾ ಗಲು ಸಾಧ್ಯತೆಯಿದೆ. ಪ್ರಕೃತಿಯಲ್ಲಿ ವಿವಿಧ ಲೋಹಾಂಶಗಳು ಇರುವುದರಿಂದ ಅದು ನದಿಗಳಲ್ಲೂ ಕಾಣಬಹುದಾಗಿದೆ. ಆದರೆ ಅದು ಅಪಾಯಕಾರಿ ಮಟ್ಟಕ್ಕೆ ತಲುಪಲು ಲೋಹ ಖನನ, ಕೈಗಾರಿಕಾ ಕೇಂದ್ರಗಳಿಂದ ಹರಿಯ ಬಿಡುವ ತ್ಯಾಜ್ಯ ನದಿಗಳಲ್ಲಿ ಇಂತಹ ಸಮಸ್ಯೆಗೆ ಕಾರಣವಾಗುತ್ತಿದೆ. ಅಲ್ಲದೆ ಕೃಷಿಗೆ ಅಧಿಕ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ ಬಳಸುವುದೂ ಕೂಡಾ ನದಿಗಳಲ್ಲಿ ಲೋಹಾಂಶ ತ್ಯಾಜ್ಯಕ್ಕೆ ಕಾರಣವಾಗುವುದಿದೆ.
ಜಲಾಶಯಗಳಲ್ಲಿ ತ್ಯಾಜ್ಯ ರಾಶಿ ತುಂಬಿರುವುದು. ಇಲೆಕ್ಟ್ರೋ ಪ್ಲೇಟಿಂಗ್ ಕೈಗಾರಿಕಾ ತ್ಯಾಜ್ಯ ನದಿಗೆ ಹರಿಬಿಡುವುದರಿಂದಾಗಿ ಲೋಹಾಂಶ ವಿಷಕಾರಿ ತ್ಯಾಜ್ಯಕ್ಕೆ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ನದಿಯಲ್ಲಿ ಹರಿಯುವ ನೀರಿನ ಗುಣಮಟ್ಟ ಉತ್ತಮಗೊಳಿಸಲು ಸಾಧ್ಯವಾಗಲಿದೆ.
ಭಾರೀ ಪ್ರಮಾಣದಲ್ಲಿ ಮಾಲಿನ್ಯ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕೇರಳದ 21 ನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಮಲಿ ನಗೊಂಡಿರುವುದನ್ನು ಪತ್ತೆಹಚ್ಚಿತ್ತು. ನದಿಗಳ ಮಾಲಿನ್ಯ ನಿಯಂತ್ರಣ ಯೋಜನೆಯನ್ನು ತಯಾರಿಸಲು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್‌ನ ಆದೇಶದಂñ ೆ ರಿವರ್ ರಿಜ್ಯುವನೇಶನ್ ಕಮಿಟಿಯನ್ನು ರೂಪಿಸಲಾಗಿದೆ.
ವರ್ಷವೂ ವರದಿ
ಕೇರಳದ ಎಲ್ಲ ನದಿಗಳ ನೀರಿನ ಗುಣಮಟ್ಟದ ಬಗ್ಗೆ ಕಲ್ಲಿಕೋಟೆಯಲ್ಲಿ ರುವ ಜಲ ಸಂಪನ್ಮೂಲ ಅಭಿವೃದ್ಧಿ ವಿನಿಯೋಗ ಕೇಂದ್ರ (ಸೆಂಟರ್ ಫಾರ್ ವಾಟರ್ ರಿಸೋರ್ಸ್ ಡೆವ ಲಪ್‌ಮೆಂಟ್ ಆ್ಯಂಡ್ ಮ್ಯಾನೇಜ್‌ಮೆಂಟ್) ಎಂಬ ಸಂಸ್ಥೆ ಅಧ್ಯಯನ ನಡೆಸಿ ನಿರ್ಣಯಿಸುತ್ತದೆ. ಇದಲ್ಲದೆ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಪ್ರತಿ ವರ್ಷವೂ ವರದಿಯನ್ನು ಪ್ರಕಟಿಸುತ್ತದೆ.