Advertisement

ದುರವಸ್ಥೆ! ಕುಡುಕನಿಗೆ ಆಶ್ರಯತಾಣವಾದ ಎಟಿಎಂ

09:46 AM Nov 08, 2019 | Team Udayavani |

ಸುರತ್ಕಲ್: ಜನರು ತ್ವರಿತವಾಗಿ ಹಣ ಪಡೆಯಲು ಎಟಿಎಂ ಹುಡುಕಿಕೊಂಡು ಹೋಗುವುದು ಮಾಮೂಲಿ. ಆದರೆ ನೀವು ಮಂಗಳೂರಿನ ಸುರತ್ಕಲ್ ಭಾಗದವರಾಗಿದ್ದು, ತುರ್ತಾಗಿ ಹಣ ಬೇಕೆಂದು ಕಾನಾ ಬಳಿಯ ಎಟಿಎಂ ಹೋದರೆ ನಿಮಗೆ ಅಕ್ಷರಃ ದುರ್ನಾತದ ಮೋರಿಗೆ ಇಳಿಗೆ ಅನುಭವ. ಹಾಗಾದರೆ ಏನಾಗಿದೆ ಅಲ್ಲಿ? ಮುಂದೆ ಓದಿ.

Advertisement

ಕಾನಾದ ಎಂಆರ್ ಪಿಎಲ್ ಕಾರ್ಗೋ ಗೇಟ್ ನ ಬಳಿಯ ಎಟಿಎಂ ಕೋಣೆ ಇಂತಹ ದುರ್ನಾತ ಬೀರುವ ಸ್ಥಳ. ಇದಕ್ಕೆ ಕಾರಣ ಸಾರ್ವಜನಿಕರ ಉಪಯೋಗಕ್ಕೆ ಇರುವ ಎಟಿಎಂನ್ನು ಮಾನಸಿಕ ಅಸ್ವಸ್ಥನಂತಿರುವ ಕುಡುಕನೋರ್ವ ತನ್ನ ವಾಸಸ್ಥಳವಾಗಿ ಮಾರ್ಪಟ್ಟಿರುವುದು.

ಸ್ಥಳೀಯರ ಪ್ರಕಾರ ಈತ ಕಳೆದ ಕೆಲವು ದಿನಗಳಿಂದ ಇಲ್ಲಿಯೇ ವಾಸವಾಗಿದ್ದು, ಅಲ್ಲೇ ಮೂತ್ರ ಮಾಡಿ ಅಲ್ಲೇ ಮಲಗಿರುತ್ತಾನೆ. ಯಾರ ಮಾತನ್ನೂ ಕೇಳದ ಈತ ಸದಾ ಕುಡಿದಿರುತ್ತಾನೆ ಎನ್ನುತ್ತಾರೆ ಸ್ಥಳೀಯರು.

 

Advertisement

ಈತನ ಕಾರಣದಿಂದ ಎಟಿಎಂ ಕೇಂದ್ರ ಗಬ್ಬು ನಾರುತ್ತಿದ್ದು, ಕಳೆದೆರಡು ದಿನಗಳಿಂದ ಯಾರಿಗೂ ಉಪಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಇಲ್ಲಿ ಯಾವುದೇ ಗಾರ್ಡ್ ಕೂಡಾ ಇಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು, ಸಾರ್ವಜನಿಕರ ಮುಕ್ತ ಬಳಕೆಗೆ ಎಟಿಎಂ ಅನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next