ಬಿಲ್ ನೀಡಿದ 1ರಿಂದ 5 ದಿನಗಳೊಳಗೆ ಪಾವತಿಸಿದವರಿಗೆ ಬಿಲ್ ಮೊತ್ತದಲ್ಲಿ ಶೇ. 1 ರಿಯಾಯಿತಿ ಹಾಗೂ 6ರಿಂದ 15 ದಿನಗಳೊಳಗೆ ಪಾವತಿ ಮಾಡಿದವರಿಗೆ ಶೇ. 0.5ರಷ್ಟು ರಿಯಾಯಿತಿ ಕೊಡಲಾಗುತ್ತದೆ. ಎಲ್‌ಟಿ ಗ್ರಾಹಕರು ಗರಿಷ್ಠ 10,000 ರೂ. ವರೆಗೆ ಹಾಗೂ ಎಚ್‌ಟಿ ಗ್ರಾಹಕರು ಗರಿಷ್ಠ 1 ಲಕ್ಷ ರೂ. ವರೆಗೆ ಪ್ರೋತ್ಸಾಹ ಧನ/ ರಿಯಾಯಿತಿಗೆ ಅರ್ಹರಾಗುತ್ತಾರೆ.
Advertisement
ಈ ರಿಯಾಯಿತಿ/ ಪ್ರೋತ್ಸಾಹ ಧನ ಮೊತ್ತವನ್ನು ಮುಂದಿನ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಇದು ಕೋವಿಡ್ ಸಂಕಷ್ಟದ ಪ್ರಯುಕ್ತ 2020 ಎಪ್ರಿಲ್, ಮೇ ಹಾಗೂ ಜೂನ್ ತಿಂಗಳ ವಿದ್ಯುತ್ ಬಿಲ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. ಮುಂಗಡ ಪಾವತಿಗೂ ರಿಯಾಯಿತಿ ಇದಲ್ಲದೆ 12 ತಿಂಗಳುಗಳ ವಿದ್ಯುತ್ ಬಿಲ್ ಮೊತ್ತವನ್ನು ಚೆಕ್/ ಡಿಮಾಂಡ್ ಡ್ರಾಫ್ಟ್/ ಯಾವುದೇ ಡಿಜಿಟಲ್ ವಿಧಾನದಲ್ಲಿ ಮುಂಗಡವಾಗಿ ಪಾವತಿ ಮಾಡಿದರೆ ಬಿಲ್ ಮೊತ್ತದ ಶೇ. 0.50ರಷ್ಟು ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ಗ್ರಾಹಕರ ಖಾತೆಗೆ ಹೊಂದಾಣಿಕೆ ಮೂಲಕ ಜಮೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇ 7ರಂದು ಪ್ರಕಟಿಸಿದ ಕೋವಿಡ್ ಪರಿಹಾರ ಪ್ಯಾಕೇಜ್‌ನಲ್ಲಿ ಈ ವಿಷಯವನ್ನು ಉಲ್ಲೇಖೀಸಿದ್ದು, ಅದರಂತೆ ಮೆಸ್ಕಾಂ ಪ್ರಕಟನೆ ಹೊರಡಿಸಿದೆ.