Advertisement

ಸವಣೂರು :ಬಾಲಕಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಪೊಲೀಸರ ವಶಕ್ಕೆ

06:54 PM Dec 22, 2020 | sudhir |

ಸವಣೂರು : ಸವಣೂರಿನ ಪೆರಿಯಡ್ಕ ಸಮೀಪದ‌ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಆರೋಪದ ಮೇರೆಗೆ ಸವಣೂರಿನ‌ ಮೆಸ್ಕಾಂ ಸಿಬ್ಬಂದಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

Advertisement

ಮೆಸ್ಕಾಂ ಉದ್ಯೋಗಿಯಾಗಿರುವ ಸೊಯೂಬ್ ಕೊತ್ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ, ಅಲ್ಲದೇ ಅಸಭ್ಯವಾಗಿ ಸಂದೇಶ ರವಾನಿಸುತ್ತಿದ್ದ, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ.

ಈ ವಿಚಾರ ಸವಣೂರಿನ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ಬಂದಾಗ ಕೂಡಲೇ ಈ ಕುರಿತು ಕಾರ್ಯಪ್ರವೃತರಾಗಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.

ಇದನ್ನೂ ಓದಿ:ಚಿತ್ರದುರ್ಗ: ಮತದಾನದ ವೇಳೆ ಅಭ್ಯರ್ಥಿಗಳ ಬೆಂಬಲಿಗರ ಹೊಡೆದಾಟ: ನಾಲ್ವರು ಆಸ್ಪತ್ರೆಗೆ ದಾಖಲು

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಯುವತಿಯ ಮನೆಗೆ ತೆರಳಿ ಈ ವಿಚಾರದ ಸತ್ಯಾಸತ್ಯತೆಯನ್ನು ತಿಳಿ ಹೇಳಿದ ಬಳಿಕ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು.ಸೋಯೂಬ್ ಯುವತಿಗೆ ಮೆಸೆಜ್ ಮೂಲಕ ಕಿರುಕುಳ ಹಾಗೂ ಉಡುಗೊರೆ ಪಡೆಯುವಂತೆ ಒತ್ತಾಯಿಸುತ್ತಿದ್ದ ಎಂಬುದು ಮೊಬೈಲ್ ಸಂದೇಶಗಳಲ್ಲಿ ತಿಳಿದುಬಂದಿದೆ.

ದೂರದ ಜಿಲ್ಲೆಯಿಂದ ಉದ್ಯೋಗ ನಿಮಿತ್ತ ಬಂದಿರುವ ಸೋಯೂಬ್ ಯುವತಿಯನ್ನು ಯಾಮಾರಿಸಿ ಲವ್‌ಜೆಹಾದ್ ಖೆಡ್ಡಾಗೆ ಉರುಳಿಸಲು ಪ್ರಯತ್ನಿಸಿದ್ದ ಎನ್ನಲಾಗಿದ್ದು,ಹಿಂದೂ ಯುವತಿಯರನ್ನು ಉಪಾಯವಾಗಿ ಮತಾಂತರಗೊಳಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದ್ದು, ಈ ಕುರಿತು ಯುವತಿಯರು ಜಾಗರೂಕರಾಗಿರುವಂತೆ ಹಿಂದೂ ಜಾಗರಣ ವೇದಿಕೆ ವಿನಂತಿಸಿದೆ‌.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next