Advertisement

MESCOM ದೂರು ಸ್ವೀಕರಿಸಲು 56 ಮಂದಿಯ ವಿಶೇಷ ಪಡೆ

01:16 AM Jul 01, 2024 | Team Udayavani |

ಮಂಗಳೂರು: ಮೆಸ್ಕಾಂನಲ್ಲಿ ದೂರುಗಳನ್ನು ಸ್ವೀಕರಿಸಲು ಹೆಚ್ಚುವರಿಯಾಗಿ 56 ಮಂದಿಯ ವಿಶೇಷ ಪಡೆ ಮಂಜೂರು ಮಾಡಲಾಗಿದೆ.

Advertisement

ಮಳೆಗಾಲದ ಸಂಭವನೀಯ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ಈಗಾಲೇ 800 ಗ್ಯಾಂಗ್‌ಮೆನ್‌ ಮತ್ತು 56 ವಿಶೇಷ ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ಈಗ ಹೆಚ್ಚುವರಿಯಾಗಿ 56 ಮಂದಿಯ ವಿಶೇಷ ಪಡೆ ಮಂಜೂರು ಮಾಡಲಾಗಿದೆ. ವಿಶೇಷ ಪಡೆ ಅತ್ತಾವರ 4, ಕಾವೂರು 10, ಪುತ್ತೂರು 10, ಬಂಟ್ವಾಳ 7, ಉಡುಪಿ 2, ಕಾರ್ಕಳ 4, ಕುಂದಾಪುರ 8, ಶಿವಮೊಗ್ಗ 8, ಶಿಕಾರಿಪುರ 3 ಮಂದಿಯನ್ನು ಒಳಗೊಂಡಿದೆ.

ಮೆಸ್ಕಾಂ ವ್ಯಾಪ್ತಿಯ ಅಪಾಯಕಾರಿ ಸ್ಥಳಗಳನ್ನು ಪತ್ತೆಮಾಡಿ ಕ್ರಮಬದ್ಧಗೊಳಿಸಲು ವಿಶೇಷ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ವಿಧಾನಸಭಾ ಅಧ್ಯಕ್ಷರ ಸೂಚನೆ ಮೇರೆಗೆ, ಅಪಾಯಕಾರಿ ಸನ್ನಿವೇಶಗಳ ಮಾಹಿತಿ ಸ್ವೀಕರಿಸುವುದಕ್ಕಾಗಿ ಎರಡು ಮೀಸಲಾದ ದೂರವಾಣಿಗಳನ್ನು ಸ್ಥಾಪಿಸಲಾಗುವುದು. ಅವು ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ.

ಇದಲ್ಲದೆ 64 ಉಪವಿಭಾಗಗಳಲ್ಲಿಯೂ 24×7 ಸೇವಕೇಂದ್ರಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸಿ, ಸರಿಪಡಿಸಲು ಕಾರ್ಯಾಚರಿಸುತ್ತಿವೆ. ಗ್ರಾಹಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಬಹುದಾಗಿದೆ. ಅಲ್ಲದೆ ಮೆಸ್ಕಾಂ ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್‌ ಸಂಖ್ಯೆ-9483041912, ವೆಬ್‌ಸೈಟ್‌ ಹಾಗೂ ಸೇವಾ ಸಿಂಧು ಮೂಲಕವೂ ಮೆಸ್ಕಾಂ ಅನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Advertisement

ವಾಟ್ಸಾಪ್‌ನಲ್ಲೂ ಪ್ರಾಕೃತಿಕ ವಿಕೋಪ ದೂರು
ಬಂಟ್ವಾಳ: ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತೆರೆದಿರುವ 24×7 ಕಂಟ್ರೋಲ್‌ ರೂಮ್‌ನಲ್ಲಿ ವಾಟ್ಸಾಪ್‌ ಮೂಲಕವೂ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಇದ್ದು, ಜನರು 7337669102 ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಮಾಡಬಹುದು. ಕರೆ ಮಾಡುವುದಕ್ಕೆ ಹಿಂದಿನ 08255-232500 ಸ್ಥಿರ ದೂರವಾಣಿ ಸಂಖ್ಯೆ ಕೂಡ ಚಾಲ್ತಿಯಲ್ಲಿರುತ್ತದೆ ಎಂದು ಬಂಟ್ವಾಳ ತಹಶೀಲ್ದಾರ್‌ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next