Advertisement
ಈ ಸಲ ರಾಷ್ಟ್ರವಾದಿ ಕಾಂಗ್ರೆಸ್ (ಎನ್‌ಸಿಪಿ)ನ ಇಬ್ಬರು ನಾಯಕರು ಪ್ರಮುಖ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ, ಮಾಜಿ ಸಚಿವ ಜಯವಂತ ದಳವಿ, ಸಂಸದ ಧನಂಜಯ ಮಹಾಡಿಕಗೆ ಮೇಳಾವ್‌ಕ್ಕೆ ಹೋಗುವಂತೆ ಎನ್‌ಸಿಪಿ ಪರಮೋಚ್ಚ ನಾಯಕ ಶರದ ಪವಾರ ಖಡಕ್ ಸೂಚನೆ ನೀಡಿದ್ದಾರೆ.
1986ರಲ್ಲಿ ಕನ್ನಡ ವಿರೋಧಿ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆಗ ಶರದ ಪವಾರ ಹಾಗೂ ಛಗನ್ ಭುಜಬಲ ವೇಷ ಬದಲಿಸಿಕೊಂಡು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಲವೂ ಅನುಮತಿ ಸಿಗದಿದ್ದರೆ ಎನ್‌ಸಿಪಿ ಮುಖಂಡರು ಹೇಗಾದರೂ ಮಾಡಿ ಭಾಗವಹಿಸುವಂತೆ ಪವಾರ ಸೂಚನೆ ನೀಡಿದ್ದಾರೆ ಎಂದು ಎಂಇಎಸ್ ನಾಯಕರು
ತಿಳಿಸಿದ್ದಾರೆ. ಜೊತೆಗೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಹಾಗೂ ಖಾನಾಪುರ ಶಾಸಕ ಅರವಿಂದ ಪಾಟೀಲ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿ ನಂತರ ಮೇಳಾವ್‌ದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ವರ್ಷದಂತೆ ಈ ಸಲವೂ ಮಹಾರಾಷ್ಟ್ರ ಪರ ಘೋಷಣೆ ಕೂಗಿ ಕಲಾಪದಿಂದ ಹೊರ ನಡೆದು ಮೇಳಾವ್‌ದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
Related Articles
Advertisement
ಭೈರೋಬಾ ಕಾಂಬಳೆ