Advertisement

ಎಂಇಎಸ್‌ ಅಭ್ಯರ್ಥಿಗೆ ಮರಾಠಿಗರಿಂದ ತರಾಟೆ

07:40 AM May 03, 2018 | |

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮತ ಯಾಚಿಸಲು ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಯನ್ನು ಮರಾಠಿ ಭಾಷಿಕರೇ ತರಾಟೆಗೆ ತೆಗೆದುಕೊಂಡು ವಾಪಸ್‌ ಕಳುಹಿಸಿದ ಘಟನೆ ಬುಧವಾರ ನಡೆದಿದೆ.

Advertisement

ಉತ್ತರ ಕ್ಷೇತ್ರದ ಶಿವಾಜಿ ನಗರದಲ್ಲಿ ಬುಧವಾರ ಮಧ್ಯಾಹ್ನ ಮತ ಕೇಳಲು ಬಂದ ಎಂಇಎಸ್‌ ಅಭ್ಯರ್ಥಿ ಬಾಳಾ ಸಾಹೇಬ ಕಾಕತಕರಗೆ ಭಾರೀ ಮುಖ ಭಂಗವಾಗಿದೆ. ಮರಾಠಿ ಭಾಷಿಕರೇ ಹೆಚ್ಚಾಗಿ ಇರುವ ಶಿವಾಜಿ ನಗರಕ್ಕೆ ಬಂದ ಅಭ್ಯರ್ಥಿಯನ್ನು ಜನ ತಡೆದು ಪ್ರಚಾರಕ್ಕೆ ಬರದಂತೆ ತರಾಟೆಗೆ ತೆಗೆದುಕೊಂಡು ಅಲ್ಲಿಂದ ಚಲೇಜಾವ್‌, ಚಲೇಜಾವ್‌ ಎಂದು ಘೋಷಣೆ ಕೂಗಿ ವಾಪಸ್‌ ಕಳುಹಿಸಿದರು.

ಎಂಇಎಸ್‌ ಅಭ್ಯರ್ಥಿ ಎಂದು ಗಡಿ ವಿಷಯ ತೆಗೆದುಕೊಂಡು ಬಂದು ಜನ ರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ಬೆಳಗಾವಿ ನಗರದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಾಗ ನೀವು ಮಲಗಿಕೊಂಡಿ ದ್ದೀರಾ? ಆ ಶಾಸಕ ಸಂಭಾಜಿ ಪಾಟೀಲ ಒಂದು ಸಲವೂ ಹಿಂದೂ ಯುವಕರ ಪರ ಬಂದು ನಿಂತಿಲ್ಲ. ಈಗ ಓಟ್‌ ಕೇಳ್ಳೋಕೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಬೆಳಗಾವಿಯ ಶಿವಾಜಿ ನಗರಕ್ಕೆ ಮತಯಾಚಿಸಲು ಬಂದ ಎಂಇಎಸ್‌ ಅಭ್ಯರ್ಥಿಯನ್ನು ಮರಾಠಿ ಭಾಷಿಕರು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next