Advertisement

ಮಹಿಳೆಯ ಅಶ್ಲೀಲ ಫೋಟೋ ಹೊಂದುವುದು ಶಿಕ್ಷಾರ್ಹ ಅಪರಾಧವಲ್ಲ : ಕೇರಳ ಹೈ ಕೋರ್ಟ್‌

02:41 PM Jun 11, 2019 | Sathish malya |

ಕೊಚ್ಚಿ : ಮಹಿಳೆಯರ ಅಸಭ್ಯ ಪ್ರದರ್ಶನ ತಡೆ ಕಾಯಿದೆಯಡಿ ಮಹಿಳೆಯ ಅಶ್ಲೀಲ ಫೋಟೋಗಳನ್ನು ಹೊಂದಿದ ಮಾತ್ರಕ್ಕೆ ಅದು ಶಿಕ್ಷಾರ್ಹ ಅಪರಾಧ ಎನಿಸುವುದಿಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

Advertisement

ಮಹಿಳೆಯ ಅಶ್ಲೀಲ ಫೋಟೋಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು ಕಾನೂನನಿನಡಿ ಶಿಕ್ಷಾರ್ಹವಾಗಿರುತ್ತದೆ ಎಂದು ಹೇಳಿರುವ ಹೈಕೋರ್ಟ್‌, ಓರ್ವ ಪುರುಷ ಮತ್ತು ಮಹಿಳೆಯ ವಿರುದ್ಧದ ಕ್ರಿಮಿನಲ್‌ ಕಾನೂನು ಕ್ರಮವನ್ನು ರದ್ದುಗೊಳಿಸಿತು.

ಕೊಲ್ಲಂ ಪೂರ್ವ ಪೊಲೀಸರು 2008ರಲ್ಲಿ ಓರ್ವ ಮಹಿಳೆ ಮತ್ತು ಪುರುಷನ ವಿರುದ್ಧ ದಾಖಲಿಸಿದ್ದ ಕೇಸನ್ನು ರದ್ದು ಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌, ಈ ತೀರ್ಪನ್ನು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next