Advertisement

ಗಂಗಾವತಿ ಪೊಲೀಸರಿಗೆ ಬಟ್ಟೆ ಅಂಗಡಿಗಳದ್ದೇ ತಲೆ ಬಿಸಿ!

12:08 PM May 06, 2021 | Team Udayavani |

ಗಂಗಾವತಿ: ಹೆಚ್ಚು ಜನ ಸೇರಿದಂತೆ ಸರಕಾರ ಕೋವಿಡ್ ಕರ್ಪ್ಯೂ ಜಾರಿ ಮಾಡಿದ್ದು ಪ್ರಮುಖವಾಗಿ ಹೆಚ್ಚು ಜನ ಸೇರುವ ಬಟ್ಟೆ, ಚಿನ್ನದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.

Advertisement

ಆದರೆ ನಗರದ ಓಎಸ್ ಬಿ ರೋಡ್ ಹಾಗೂ ಮುಚಿಗೇರ್ ಓಣಿಯ ರಸ್ತೆಯುದ್ದಕ್ಕೂ ಇರುವ ಬಟ್ಟೆ ಅಂಗಡಿಯವರು ಪ್ರತಿ‌ನಿತ್ಯ ಬೆಳಗಿನ ಜಾವದಲ್ಲಿ ಅಂಗಡಿಗಳನ್ನು ತೆರೆದು‌ ಹೆಚ್ಚು ಜನರ ಮಧ್ಯೆ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಇಡೀ ದಿನ‌ ಕರ್ತವ್ಯ ಮುಗಿಸಿ ಪೊಲೀಸರು ಮನೆಗೆ ತೆರಳಿದ ಮೇಲೆ ಅಂಗಡಿ ಒಂದು ಶೆಟರ್ ತೆರೆದು ಮುಂಗಡವಾಗಿ ತಿಳಿಸಿದ ಗ್ರಾಹಕರಿಗೆ ಅಗತ್ಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮತ್ತೆ ಏರಿದ ಕೋವಿಡ್ ಸೋಂಕಿತರ ಸಂಖ್ಯೆ: ದೇಶದಲ್ಲಿ ಒಂದೇ ದಿನ 4.12 ಲಕ್ಷ ಹೊಸ ಸೋಂಕಿತರು!

ನಗರದ ಇನ್ನುಳಿದ ಕಡೆ ಇರುವ ಬಟ್ಟೆ ಅಂಗಡಿಯವರು ಕೋವಿಡ್ ಕರ್ಪ್ಯೂ ಆರಂಭದ ದಿನದಿಂದ ಅಂಗಡಿ ಬಂದ್ ಮಾಡಿ ತಾಲೂಕು ಆಡಳಿತ ಸಹಕಾರ‌ ನೀಡುತ್ತಿದ್ದು, ಓಎಸ್ ಬಿ ರಸ್ತೆ ಹಾಗೂ ಮುಚಿಗೇರ್ ಗಲ್ಲಿ ಮೂಲಕ ಹೊಂದಿಕೊಂಡಿರುವ ಬಟ್ಟೆ ಅಂಗಡಿಗಳಿಗೆ ಮುಂದೆ ಹಿಂದೆ ಎರಡು‌ ಕಡೆ ಶಟರ್ ಇದ್ದು ಹಿಂಭಾಗದಲ್ಲಿ ಶಟರ್ ತೆರೆದು ಮಾಡಿ ವ್ಯಾಪಾರ ಮಾಡುತ್ತಿದ್ದಾರೆ.

Advertisement

ಈ‌ ಕುರಿತು‌ ಪೊಲೀಸ್ ಅಧಿಕಾರಿಗಳಿಗೆ ಸ್ಥಳೀಯರು ವಿಡಿಯೋ -ಪೊಟೋ ಹಾಕಿ‌ ವಿಷಯ ತಿಳಿಸಿ ಎಚ್ಚರಿಸುತ್ತಿದ್ದಾರೆ. ಪೊಲೀಸರು ಅಂಗಡಿ ಬಳಿ ಪರಿಶೀಲಿಸಲು ತೆರಳಿದ ತಕ್ಷಣ ರಾಜಕೀಯ ನಾಯಕರಿಗೆ ಮೊಬೈಲ್ ಮೂಲಕ ತಿಳಿಸಿ ಪೊಲೀಸರ ಬಂದ್ ಮಾಡಿಸುವ ಕಾರ್ಯವನ್ನು ತಡೆಯಲು ಯತ್ನಿಸುತ್ತಿರುವ ಪ್ರಕರಣ ಕಂಡು ಬರುತ್ತಿವೆ.

ಕಾನೂನು ಕ್ರಮ: ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಓಎಸ್ ಬಿ ರಸ್ತೆಯಲ್ಲಿರುವ ಕೆಲ ಬಟ್ಟೆ ಅಂಗಡಿ ಮಾಲೀಕರು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವ ಬಗ್ಗೆ ದೂರು ಬಂದಿದೆ ಪೊಲೀಸ್ ಇಲಾಖೆಯ ನೆರವಿನಿಂದ ಇದನ್ನು ತಡೆದು ಕೃತ್ಯವೆಸಗುವವರ ವಿರುದ್ದ ಕೇಸ್ ದಾಖಲಿಸಲಾಗುತ್ತದೆ ಎಂದು‌ ಪೌರಾಯುಕ್ತ ಅರವಿಂದ ಜಮಖಂಡಿ ‌ಉದಯವಾಣಿಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next