Advertisement

ಎಪಿಎಂಸಿಗೆ ವ್ಯವಹಾರ ಸ್ಥಳಾಂತರಕ್ಕೆ ವ್ಯಾಪಾರಿಗಳ ಒಪ್ಪಿಗೆ

02:11 AM Apr 08, 2020 | Sriram |

ಬೈಕಂಪಾಡಿ: ಬೈಕಂಪಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ದಲ್ಲಿ ವ್ಯಾಪಾರ ವಹಿವಾಟು ನಡೆಸಲು ತರಕಾರಿ, ಹಣ್ಣುಹಂಪಲು ರಖಂ ವ್ಯಾಪಾರಸ್ಥರ ಸಂಘ ಒಪ್ಪಿದ್ದು ಬುಧವಾರದಿಂದ ಆರಂಭವಾಗಲಿದೆ.

Advertisement

ಮಂಗಳವಾರ ಎಪಿಎಂಸಿ ಕಚೇರಿ ಯಲ್ಲಿ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಿಗಳು ಭಾಗವಹಿಸಿ ವಿವಿಧ ಮೂಲಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ಶಾಸಕರು ಗೋದಾಮು ದುರಸ್ತಿ, ನೀರು, ಶೌಚಾಲಯ, ವಿದ್ಯುತ್‌ ದೀಪದ ವ್ಯವಸ್ಥೆ ಮಾಡಲಾಗುವುದು. ವ್ಯಾಪಾ ರಸ್ಥರ ಸುರಕ್ಷೆಗೆ ಕಾವಲುಗಾರರನ್ನೂ ನೇಮಿಸಲಾಗುವುದು. ಎಪಿಎಂಸಿ, ಪಾಲಿಕೆ ಅನುಮತಿ ಪಡೆದ ವ್ಯಾಪಾ ರಿಗಳಿಗೆ ಪ್ರಥಮ ಪ್ರಾಶಸ್ತ್ಯ ಹಾಗೂ ಉಳಿದ ಎರಡು ಹಂತದಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುವವರಿಗೆ ವ್ಯವಸ್ಥೆ, ಹೀಗೆಒಟ್ಟು ಮೂರು ಹಂತದಲ್ಲಿ ಮಾಡಲಾಗುವುದು ಎಂದರು.

ವ್ಯಾಪಾರಿಗಳಿಗೆ ಬೈಕಂಪಾಡಿಯಲ್ಲಿ ಮೂರು ತಿಂಗಳ ಬಾಡಿಗೆ, ಶುಲ್ಕ ವಿಧಿಸದೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ವ್ಯಾಪಾರಸ್ಥರ ಅನುಕೂ ಲಕ್ಕಾಗಿ ದೊಡ್ಡ ವ್ಯಾಪಾರಿಗಳಿಗೆ ದೊಡ್ಡ ಗೋದಾಮು ನೀಡಿ ಸಹಕರಿಸಲಾಗುವುದು. ಉಳಿದಂತೆ ನಗ ರದ ವಿವಿಧೆಡೆ ನಡೆಯುವ ಅನಧಿಕೃತ ವ್ಯವಹಾರವನ್ನು ನಿಲ್ಲಿಸ ಲಾಗುವುದು. ಯಾವುದೇ ರಖಂ ವ್ಯಾಪಾರಕ್ಕೆ ಎಪಿಎಂಸಿಯಲ್ಲಿ ಮಾತ್ರ ಅವಕಾಶ ಎಂದು ತಿಳಿಸಿದರು.

ಸಹಕಾರ ಅಗತ್ಯ
ಕೋವಿಡ್ 19 ಹಾವಳಿ ತಡೆಗೆ ಎಲ್ಲರ ಸಹಕಾರ ಅಗತ್ಯ. ತರಕಾರಿ, ಹಣ್ಣು ಹಂಪಲು ಅಗತ್ಯ ವಸ್ತುಗಳೆಂದು ಪರಿಗಣಿಸಿ ಹೆಚ್ಚಿನ ರಿಯಾಯಿತಿ ನೀಡಿದ್ದೇವೆ.ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ನಡೆಸಬೇಕು. ವ್ಯಾಪಾರ ಸಮಯವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಎಪಿಎಂಸಿ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಉಪಾಧ್ಯಕ್ಷ ಜೋಯಲ್‌ ಡಿ’ಸೋಜಾ, ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next