Advertisement
ಪಾಟ್ನಾದಲ್ಲಿ ನಡೆದ ಮಹಾಮೈತ್ರಿಕೂಟದ ರ‍್ಯಾಲಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಮೋದಿಯವರು ಅದಿಲಾಬಾದ್ ನಲ್ಲಿ ನಡೆದ ರ‍್ಯಾಲಿಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿ” ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಲ್ಲಿ ಆಳವಾಗಿ ಮುಳುಗಿರುವ ಇಂಡಿಯಾ ಮೈತ್ರಿಕೂಟದ ನಾಯಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ.ಇದೀಗ 2024ರ ಚುನಾವಣೆಗೆ ತಮ್ಮ ನೈಜ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ನಾನು ಅವರ ಪರಿವಾರವನ್ನು ಪ್ರಶ್ನಿಸಿದ ನಂತರ ಅವರು ಮೋದಿಗೆ ಕುಟುಂಬವಿಲ್ಲ ಎಂದು ಹೇಳಲು ಪ್ರಾರಂಭಿಸಿದ್ದಾರೆ”ಎಂದರು.
Related Articles
Advertisement
ಬಿಆರ್‌ಎಸ್ ತನ್ನ ಅಧಿಕಾರಾವಧಿಯಲ್ಲಿ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯಂತಹ ಹಗರಣಗಳನ್ನು ಮಾಡಿದೆ ಎಂದು ಅವರು ಆರೋಪಿಸಿದರು ಮತ್ತು ಆಡಳಿತಾರೂಢ ಕಾಂಗ್ರೆಸ್ ಕ್ರಮ ಕೈಗೊಳ್ಳುವ ಬದಲು ಕಡತಗಳ ಮೇಲೆ ಕುಳಿತಿದೆ ಎಂದು ಆರೋಪಿಸಿದರು.
ಲಾಲು ಹೇಳಿದ್ದೇನು?
“ನರೇಂದ್ರ ಮೋದಿ ಅವರಿಗೆ ಸ್ವಂತ ಕುಟುಂಬವಿಲ್ಲದಿದ್ದರೆ ನಾವು ಏನು ಮಾಡಬೇಕು? ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ಆತ ನಿಜವಾದ ಹಿಂದೂ ಕೂಡ ಅಲ್ಲ. ಹಿಂದೂ ಸಂಪ್ರದಾಯದಲ್ಲಿ, ಮಗನು ತನ್ನ ಹೆತ್ತವರ ಮರಣದ ನಂತರ ತನ್ನ ತಲೆ ಮತ್ತು ಗಡ್ಡವನ್ನು ಬೋಳಿಸಬೇಕು. ತಾಯಿ ಸತ್ತಾಗ ಮೋದಿ ಹಾಗೆ ಮಾಡಲಿಲ್ಲ” ಎಂದು ಲಾಲು ಕಟು ಟೀಕೆ ಮಾಡಿದ್ದರು.
ಮೋದಿ ಕಾ ಪರಿವಾರ್ಪ್ರಧಾನಿ ವಿರುದ್ಧ ಟೀಕೆ ಮಾಡಿದುದ್ದಕ್ಕಾಗಿ ಲಾಲು ಪ್ರಸಾದ್ ಯಾದವ್ ವಿರುದ್ಧ ಹಲವು ಪ್ರಮುಖ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಮೋದಿಯವರ ಹೇಳಿಕೆಯ ನಂತರ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಅನುರಾಗ್ ಠಾಕೂರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಿಗೆ ‘ಮೋದಿ ಕಾ ಪರಿವಾರ್’ ಅನ್ನು ಸೇರಿಸಿದ್ದಾರೆ.