Advertisement
ಪ್ರಸಂಗ 2- ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಮೊದಲ ಬಾರಿಗೆ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡಾಗ 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿದ್ದರು. ಅಪರೂಪದ ಕ್ಯಾನ್ಸರ್ ಜತೆಗೆ ಎದುರಾಳಿ ತಂಡಗಳನ್ನು ಸೋಲಿಸುವ ಸವಾಲು ಅವರ ಮುಂದಿತ್ತು. ಇದೆಲ್ಲವನ್ನೂ ಗೆದ್ದ ಯುವರಾಜ್, ಇಡೀ ಪಂದ್ಯಾವಳಿಯ ಕೇಂದ್ರಬಿಂದು ಆದರು. ಮ್ಯಾನ್ ಆಫ್ ದಿ ಸಿರೀಸ್ ಮುಡಿಗೇರಿಸಿಕೊಂಡರು. ನಿದ್ರಾಹೀನ ರಾತ್ರಿಗಳನ್ನು ಕಳೆದು ಜಯಿಸಿದ ವ್ಯಕ್ತಿಯ ಆ ಧೃಢ ಮನಸ್ಸು ಎಷ್ಟು ಬಲಶಾಲಿಯಾಗಿರಬಹುದು?
Related Articles
“ಈ ಪರಿಕಲ್ಪನೆಯು ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದೆಯೇ? ಇಲ್ಲ. ಕ್ರೀಡೆ ಮತ್ತು ಕ್ರೀಡಾ-ಅನುಭವಗಳನ್ನು ಆಧರಿಸಿ ಸಮಾಜದ ಹಲವು ತೊಡಕುಗಳ ನಿವಾರಿಸಲು ಮತ್ತು ಜಾಗೃತಿ ಮೂಡಿಸಲು ಸಾಧನವಾಗಿ ಬಳಸುವುದು ಇದರ ಉದ್ದೇಶ. ಮುಂದಿನ ದಿನಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಯು ಶೈಕ್ಷಣಿಕ ಪಠ್ಯಕ್ರಮದಲ್ಲಿ ಒಂದು ಅಧ್ಯಾಯವಾಗಿರಲಿದೆ. ಈ ಯೋಜನೆಯ ವಿಸ್ತಾರ ಈಗ ಕೇವಲ ಸಾಗರದಲ್ಲಿನ ಒಂದು ಹನಿ ಅಷ್ಟೇ. ಆದರೆ ಜನರ ಸಮಸ್ಯೆಗಳನ್ನು ಹೋಗಲಾಡಿಸುವ ಗುರಿಯ ಸಾಧನೆಯಲ್ಲಿ ಒಂದು ಸದೃಢ ಹೆಜ್ಜೆಯಾಗಿರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
Advertisement
ಗ್ರಾಮೀಣದಲ್ಲಿ ಜಾಗೃತಿ ಗುರಿನಮ್ಮಲ್ಲಿ ನಿಜವಾದ ಪ್ರತಿಭೆ ಗ್ರಾಮೀಣ ಭಾಗಗಳಲ್ಲಿದೆ. ಆದರೆ, ಅವುಗಳು ಸಾಕ್ಷಿ ಮಲಿಕ್, ಮಿಥಾಲಿ ಅವರಂತೆಯೇ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಆ ಪೈಕಿ ಬಹುತೇಕ ಮಾನಸಿಕ ಸ್ಥೈರ್ಯದ ಕೊರತೆಯಿಂದ ಸ್ಥಳೀಯವಾಗಿಯೇ ಕಳೆದುಹೋಗುತ್ತವೆ. “ಮೆಂಟಲ್ ಸ್ಟ್ರೆಂತ್ ಮ್ಯಾಟರ್ಸ್’ ಆ ಪ್ರತಿಭೆಗಳಲ್ಲಿ ಮಾನಸಿಕ ಸ್ಥೈರ್ಯವನ್ನು ಜಾಗೃತಗೊಳಿಸಲು ಹೊರಟಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕೋಚ್‌ಗಳು, ಕ್ರೀಡಾ ಪ್ರಾಧಿಕಾರಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲಾಗುವುದು. ಅಲ್ಲದೆ, ಮುಂದಿನ ದಿನಗಳಲ್ಲಿ ರಾಜ್ಯ ಶಿಕ್ಷಣ ಮಂಡಳಿ, ಶಿಕ್ಷಣ ಇಲಾಖೆಗೂ ಇದರ ಮಹತ್ವದ ಬಗ್ಗೆ ಮನವರಿಕೆ ಮಾಡಿ, ಪ್ರತಿ ಶಾಲೆಯನ್ನು ತಲುಪುವ ಗುರಿ ಇದೆ’ ಎಂದು ಹೇಳಿದರು.