Advertisement

ಕಲೆಯಿಂದ ಮಾನಸಿಕ ಪ್ರಬುದ್ಧತೆ

04:47 PM Apr 16, 2018 | |

ಹುಬ್ಬಳ್ಳಿ: ಕಲೆ ಮಕ್ಕಳಲ್ಲಿ ಮಾನಸಿಕ ಪ್ರಬುದ್ಧತೆ ಹೆಚ್ಚಿಸುತ್ತದೆ. ಜೊತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಯುವ ಕಲಾವಿದ ಶ್ರೀನಿವಾಸ ಶಾಸ್ತ್ರಿ ಅಭಿಪ್ರಾಯಪಟ್ಟರು. ಇಲ್ಲಿನ ಸರ್‌ ಸಿದ್ದಪ್ಪ ಕಂಬಳಿ ಮಾರ್ಗದ ಚಿಟಗುಪ್ಪಿ ಆಸ್ಪತ್ರೆ ಆವರಣದ ಎಸ್‌ಜೆಎಂವಿಎಸ್‌ನ ಶ್ರೀ ವಿಜಯ ಮಹಾಂತೇಶ
ಲಲಿತಕಲಾ ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬೇಸಿಗೆ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭ ಹಾಗೂ ವರ್ಲ್ಡ್ ಆರ್ಟ್‌ ಡೇ (ವಿಶ್ವ ಕಲಾ ದಿನ) ನಿಮಿತ್ತ ಚಿತ್ರಕಲಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

Advertisement

ಮಗು ಭಾಷೆ ಕಲಿಯುವುದಕ್ಕಿಂತ ಮೊದಲು ಚಿತ್ರಗಳ ಮೂಲಕ ತನ್ನ ಭಾವನೆ, ಚಿಂತನೆಗಳನ್ನು ವ್ಯಕ್ತಪಡಿಸುತ್ತದೆ. ಮಕ್ಕಳ ಚಿತ್ರಕಲಾ ಆಸಕ್ತಿಯನ್ನು ಪಾಲಕರು ಪ್ರೋತ್ಸಾಹಿಸಬೇಕು. ಹುಬ್ಬಳ್ಳಿಯಲ್ಲಿ ಆರ್ಟ್‌ ಗ್ಯಾಲರಿ ಆಗಬೇಕೆಂದರು. ಎಸ್‌ಜೆಎಂವಿಎಸ್‌ನ ಗೌರವ ನಿರ್ದೇಶಕ ಲಿಂಗರಾಜ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಆರ್ಟ್‌ ಗ್ಯಾಲರಿ ಸ್ಥಾಪಿಸಲು ಎಸ್‌ ಜೆಎಂವಿಎಸ್‌ ಸಿದ್ಧವಿದೆ. ಅದಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಶ್ರೀಮಠದಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು. 

ವಿವಿಧ ವಿಭಾಗಗಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ, ಪಾರಿತೋಷಕ ವಿತರಿಸಲಾಯಿತು. ಯುವ ಕಲಾವಿದ ಜಿ.ಆರ್‌. ಮಲ್ಲಾಪುರ ಇದ್ದರು. ಪ್ರಭಾರ ಪ್ರಾಚಾರ್ಯ ಬಿ.ವೈ. ನಾಗನಗೌಡರ ಸ್ವಾಗತಿಸಿದರು. ಪ್ರತಾಪ ಬಹುರೂಪಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next