ರಾಮನಗರ: ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ವತಿಯಿಂದ ಮಾನಸಿಕ ಆರೋಗ್ಯ ಕುರಿತು ತರ ಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ತಾಲೂಕಿನ ಪಾದರಹಳ್ಳಿ ಬಳಿ ಇರುವ ಶಿಲಾಂದ್ರ ರೆಸಾರ್ಟ್‌ನಲ್ಲಿ ನಡೆದ ಕಾರ್ಯಾ ಗಾರಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ಮಾತನಾಡಿ, ಕೋವಿಡ್ ನಿರ್ವಹಣೆಯಲ್ಲಿ ವೈದ್ಯರು ಹಾಗೂ ಆರೋಗ್ಯಸಿಬ್ಬಂದಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಮಾನಸಿಕ ಆರೋಗ್ಯ ಕುರಿತು ನುರಿತ ತಜ್ಞರಿಂದ ಕಾರ್ಯಾಗಾರ ಆಯೋಜಿಸಿದ್ದು, ಎಲ್ಲರೂ ಒತ್ತಡ ಕಡಿಮೆ ಮಾಡಿಕೊಂಡು ನಾಗರಿಕರ ಸೇವೆಯನ್ನು ಮುಂದುವರೆಸಿ ಎಂದುಕರೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ್, ವೈದ್ಯರು ಮಾನಸಿಕ ಒತ್ತಡದಿಂದ ಹೊರಬನ್ನಿ ಎಂದು ಹಾರೈಸಿದರು.
ಬೆಂಗಳೂರು ನಿಮಾನ್ಸ್‌ನ ಮನೋ ತಜ್ಞ ಹಾಗೂ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ. ಚಂದ್ರಶೇಖರ್, ಮಾನಸಿಕ ಆರೋಗ್ಯ ನಿರ್ವಹಣೆ ಮತ್ತು ಮಾನಸಿಕ ಒತ್ತಡಕ್ಕೆ ಕಾರಣಗಳು ಹಾಗೂ ಮಾರ್ಗೋಪಾಯಗಳ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಭಾಗದ ಮನೋತಜ್ಞ ಡಾ. ಆದರ್ಶ್, ಆರ್‌ಸಿಎಚ್ ಅಧಿಕಾರಿ ಡಾ. ಪದ್ಮಾ, ನಿಮ್ಹಾನ್ಸ್ ಯೋಗ ಥೆರಪಿಸ್ಟ್ ಅಶ್ವಿನಿ ಮಾತನಾಡಿದರು. ಆರೋಗ್ಯ ಇಲಾಖೆಯ ಡಿಎಲ್‌ಒ ಡಾ. ಮಂಜುನಾಥ್, ಡಿಟಿಒ ಡಾ. ಕುಮಾರ್, ಡಿಎಸ್‌ಒ ಡಾ. ಕಿರಣ್ ಶಂಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾ ಧರ್, ತಾಲೂಕು ಆರೋಗ್ಯ ಅಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು, ಪ್ರಾಥುಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.