ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
Advertisement
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಜರಗಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ- 2017 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನು ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಅದರಲ್ಲೂ ಪ್ರಕೃತಿದತ್ತವಾಗಿ ಲಭಿಸುವ ಆಹಾರ ಪದ್ಧತಿಯನ್ನು ಬಳಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ವಯಸ್ಸು ಹೆಚ್ಚಾಗುತ್ತದೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಕಿರಿಯರು ಮಾಡುತ್ತಿದ್ದಾರೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಈ ಪದ್ಧತಿ ಇಲ್ಲ. ವಯಸ್ಸಾದ ಬಳಿಕ ಅವರನ್ನು ಮಾನಸಿಕವಾಗಿ ಕುಬ್ಜರನ್ನಾಗಿ ಮಾಡಲಾಗುತ್ತದೆ. ಸರಕಾರ ಹಿರಿಯ ನಾಗರಿಕರಿಗೆಂದು ಅನೇಕ ಸವಲತ್ತು ನೀಡಿದೆ ಎಂದು ವಿವರಿಸಿದರು. ಸಮ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ| ಚಂದ್ರಶೇಖರ ದಾಮ್ಲೆ (ಶಿಕ್ಷಣ), ಡಾ| ಪ್ರಭಾ ಅಧಿಕಾರಿ ಎಂ.ಆರ್.,
ನಿವೃತ್ತ ಯೋಧ ಮೇಜರ್ ಲೋಹಿತ್‌ಸುವರ್ಣ ಬಜಪೆ (ಹಿರಿಯನಾಗರಿಕ ಕ್ಷೇತ್ರ), ಆದಂ ಹೇಂತರ್ (ಸಾಹಿತ್ಯ), ಟಿ.
ಪ್ರೇಮಲತಾ ರಾವ್ (ಕಲೆ), ವಾಸುದೇವ ರೈ (ಕೃಷಿ), ಕೆ. ಮೋನಪ್ಪ ವಿಟ್ಲ (ಸಮಾಜ ಸೇವೆ), ಓಬಯ್ಯ (ಕ್ರೀಡೆ) , ಮಾಯಿಲ ಕುತ್ತಾರು (ಜಾನಪದ), ನಿವೃತ್ತ ಸರಕಾರಿ ಅಧಿಕಾರಿ ಕೆ.ಜಿ. ಬಂಗೇರ ಅವರನ್ನು ಸಮ್ಮಾನಿಸಲಾಯಿತು.
Related Articles
ಸದಸ್ಯ ಕಾರ್ಯದರ್ಶಿ ಮಲ್ಲನಗೌಡ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ
ಸಹಿತ ಗಣ್ಯರು ವೇದಿಕೆಯಲ್ಲಿದ್ದರು.
Advertisement
ಕಾದು ಕುಳಿತ ಹಿರಿಯರುಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದು, ಸಚಿವರು ಮಧ್ಯಾಹ್ನ 12 ಗಂಟೆಗೆ ಬಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳಗ್ಗೆ 9.30ಗೆ ಆಗಮಿಸಿದ್ದ ನೂರಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಸಚಿವರ ಆಗಮನಕ್ಕಾಗಿ
ಕಾದು ಕಾದು ಸುಸ್ತಾದರು. ಸಮಯ ಕಳೆಯಲು ಅನೇಕ ಹಿರಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.