Advertisement

Menstrual leave: ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆ

08:26 PM Sep 30, 2023 | Team Udayavani |

ಭೋಪಾಲ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಧರ್ಮಶಾಸ್ತ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ವಿವಿಯ ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆಗಳನ್ನು ಅನುಮೋದಿಸಿದೆ. ಪ್ರಸಕ್ತ ಸೆಮಿಸ್ಟರ್‌ನಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Advertisement

ವಿದ್ಯಾರ್ಥಿನಿಯರಿಗೆ ಋತುಸ್ರಾವದ ರಜೆ ನೀಡಬೇಕು ಎಂಬುದು ಬಹು ಸಮಯದ ಬೇಡಿಕೆಯಾಗಿದ್ದು, ವಿದ್ಯಾರ್ಥಿನಿಯರ ಒಕ್ಕೂಟವೂ ಇದಕ್ಕೆ ಕಳೆದ ವರ್ಷದಿಂದಲೂ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ಸೆಮಿಸ್ಟರ್‌ಗೆ 6 ರಜೆಗಳನ್ನು ನೀಡುತ್ತಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಋತುಸ್ರಾವದ ರಜೆಯನ್ನಾಗಿ ಬಳಸಿಕೊಳ್ಳಲು ವಿವಿಯ ಡೀನ್‌ ಸಮ್ಮತಿ ನೀಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next