Advertisement

ಋತುಚಕ್ರ ಶುಚಿತ್ವ ದಿನಾಚರಣೆ-ಸಪ್ತಾಹ

10:07 AM Jun 02, 2020 | Suhan S |

ಬಾಗಲಕೋಟೆ: ಮಹಿಳೆಯರಲ್ಲಿ ಋತು ಚಕ್ರದ ಬಗ್ಗೆ ಕೀಳರಿಮೆ ಇರಬಾರದು. ಪ್ರತಿಯೊಂದು ಮನೆಯಲ್ಲಿಯೂ ಮಹಿಳೆಯರಿದ್ದಾರೆ. ಋತು ಚಕ್ರದ ಸಂದರ್ಭದಲ್ಲಿ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಈಶ್ವರ ಗಾಣಗೇರ ಹೇಳಿದರು.

Advertisement

ಕಟಗೇರಿ ಗ್ರಾಪಂ ಸಭಾಭವನದಲ್ಲಿ ಋತುಚಕ್ರ ಶುಚಿತ್ವ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಗಂಗಮ್ಮ ಪಾಟೀಲ ಮಾತನಾಡಿ, ಹಿಂದೆ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇರದಿರುವ ಕೊರತೆಯಿಂದ ಶುಚಿತ್ವದ ಅರಿವು ಇರಲಿಲ್ಲ. ಆದರೆ, ಈಗ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಮೂಲಕ ಮಾಹಿತಿ ಸಿಗುತ್ತಿರುವುದರಿಂದ ಜಾಗೃತಿ ಉಂಟಾಗಿದೆ. ಋತು ಚಕ್ರದ ಅವಧಿಯಲ್ಲಿ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳಬೇಕು. ಋತು ಚಕ್ರದ ಅವಧಿಯಲ್ಲಿ ಭಾರವಾದ ಕೆಲಸ ಮಾಡಬಾರದು ಎಂದರು.

ಆರಂಭದಲ್ಲಿ ಋತುಚಕ್ರ ಶುಚಿತ್ವ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮ ಬಗ್ಗೆ ಸ್ವತ್ಛ ಭಾರತ ಮಷೀನ್‌ ಜಿಲ್ಲಾ ಐಇಸಿ ಸಮಾಲೋಚಕಿ ಕಾವೇರಿ ಝೆಂಡೆ ಮಾಹಿತಿ ನೀಡಿದರು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಋತು ಚಕ್ರದ ಕುರಿತು ಹೊರ ತಂದ ಕಿರು ಚಿತ್ರ ಪ್ರದರ್ಶಿಸಲಾಯಿತು. ಸ್ವಚ್ಛ ಭಾರತ ಮಷೀನ್‌ ಎಸ್‌.ಎಚ್‌. ಜಿಲ್ಲಾ ಸಮಾಲೋಚಕ ಎಂ.ಜಿ ಮಂಗೋಜಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆರತಿ ವಂದಿಸಿದರು. ಆರ್‌.ಪಿ.ಪೂಜಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next