Advertisement

ಟಿ 20 ಬ್ಯಾಟಿಂಗ್ ರ‍್ಯಾಂಕಿಂಗ್ : 27 ಸ್ಥಾನ ಜಿಗಿದ ಶ್ರೇಯಸ್ ಅಯ್ಯರ್!

04:59 PM Mar 02, 2022 | Team Udayavani |

ನವದೆಹಲಿ : ಐಸಿಸಿ ಪುರುಷರ ಟಿ 20 ಪ್ಲೇಯರ್ ರ‍್ಯಾಂಕಿಂಗ್ಸ್ ಇತ್ತೀಚಿನ ಪ್ರಕಟಣೆಯಲ್ಲಿ ಭಾರತದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ 27 ಸ್ಥಾನಗಳನ್ನು ಜಿಗಿದು 18 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Advertisement

ಶ್ರೀಲಂಕಾ ವಿರುದ್ಧದ ಭಾರತದ ಇತ್ತೀಚಿನ ಸರಣಿಯ ತವರಿನ ಗೆಲುವು ಐಸಿಸಿ ಪುರುಷರ ಟಿ 20 ಆಟಗಾರರ ಶ್ರೇಯಾಂಕದಲ್ಲಿ ಪ್ರಮುಖ ಪರಿಣಾಮಗಳನ್ನು ಬೀರಿದೆ. ಆಕ್ರಮಣಕಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ಉತ್ತಮ ಸ್ಥಾನಗಳಿಸಲು ಸಹಾಯ ಮಾಡಿದೆ.

ಶ್ರೀಲಂಕಾ ವಿರುದ್ಧ ಭಾರತ 3-0 ಗೆಲುವಿನಲ್ಲಿ ಅಯ್ಯರ್ ಮೂರು ಅಜೇಯ ಅರ್ಧಶತಕಗಳನ್ನು ಗಳಿಸಿ ಪ್ರಮುಖ ಪಾತ್ರ ವಹಿಸಿದರು, 27 ವರ್ಷದ ಆಟಗಾರ ಪ್ರಭಾವಶಾಲಿ 174 ಸ್ಟ್ರೈಕ್ ರೇಟ್‌ನಲ್ಲಿ 204 ರನ್‌ಗಳನ್ನು ಗಳಿಸಿದ್ದರು. ಅವರ ಅಮೋಘ ಆಟ 27 ಸ್ಥಾನಗಳನ್ನು ಜಿಗಿಯಲು ಸಹಾಯ ಮಾಡಿದೆ.

ಸರಣಿಗಾಗಿ ವಿಶ್ರಾಂತಿ ಪಡೆದಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಐದು ಸ್ಥಾನ ಕುಸಿದು 15 ನೇ ಸ್ಥಾನಕ್ಕೆ ತಲುಪಿದ್ದಾರೆ. ಕೆಎಲ್ ರಾಹುಲ್ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭುವನೇಶ್ವರ್ ಕುಮಾರ್ ಬೌಲರ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳನ್ನು ಮೇಲಕ್ಕೇರಿ 17 ನೇ ಸ್ಥಾನಕ್ಕೆ ತಲುಪಿದ್ದಾರೆ.

ಶ್ರೀಲಂಕಾದ ಪಥುಮ್ ನಿಸ್ಸಾಂಕಾ ಸರಣಿಯ ಎರಡನೇ ಪಂದ್ಯದಲ್ಲಿ ಪ್ರಭಾವಿ 75 ರನ್ ಗಳಿಸಿದರು ಮತ್ತು ಅವರು ಶ್ರೇಯಾಂಕದಲ್ಲಿ ಆರು ಸ್ಥಾನಗಳ ಏರಿಕೆಯೊಂದಿಗೆ ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ.

Advertisement

ಈ ವಾರದ ಟಿ 20 ಕ್ರಿಕೆಟ್‌ನ ಗಮನಾರ್ಹ ಬೆಳವಣಿಗೆಯಲ್ಲಿ ಯುಎಇಯ ಮುಹಮ್ಮದ್ ವಸೀಮ್ ಐಸಿಸಿ ಪುರುಷರ ಟಿ 20 ವಿಶ್ವಕಪ್ ಕ್ವಾಲಿಫೈಯರ್ ಎ ವಿಭಾಗದ ಫೈನಲ್‌ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ ಶತಕ ಸಿಡಿಸಿ 12 ನೇ ಸ್ಥಾನವನ್ನು ತಲುಪಿದ್ದಾರೆ. ಇದು ಯುಎಇ ಬ್ಯಾಟ್ಸ್ ಮ್ಯಾನ್ ಒಬ್ಬನ ಅತ್ಯುನ್ನತ ಶ್ರೇಯಾಂಕವಾಗಿದೆ. 2017 ರಲ್ಲಿ ಶೈಮನ್ ಅನ್ವರ್ ಸಾಧಿಸಿದ 13 ನೇ ಸ್ಥಾನವನ್ನು ಮೀರಿಸಿದೆ.

ಭಾರತದ ಎದುರಿನ ಸರಣಿಯಲ್ಲಿ ಶ್ರೀಲಂಕಾದ ಲಹಿರು ಕುಮಾರ ಅವರು ಪಡೆದ ಐದು ವಿಕೆಟ್‌ಗಳು ಅವರನ್ನು ಮೊದಲ ಬಾರಿಗೆ ಟಾಪ್ 40 ಬೌಲರ್‌ಗಳ ಯಾದಿಯಲ್ಲಿ ಕಾಣಿಸುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next