Advertisement
ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ ಅಧ್ಯಕ್ಷ ತಯ್ಯಬ್ ಇಕ್ರಮ್ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಕೂಟದಲ್ಲಿ ಭಾಗವಹಿಸುವ 16 ತಂಡಗಳ ಸದಸ್ಯರನ್ನು ಸ್ವಾಗತಿಸಿದರು.ಸತತ ಎರಡನೇ ಬಾರಿ ಈ ಮಹಾನ್ ಕೂಟವನ್ನು ಆಯೋಜಿಸಿದ ಒಡಿಶಾ ರಾಜ್ಯವನ್ನು ಮುಕ್ತಕಂಠದಿಂದ ಹೊಗಳಿದ ಇಕ್ರಮ್ ಅವರು ರಾಜ್ಯವು ಹಾಕಿಯ ಭೂಮಿ ಎಂದು ಬಣ್ಣಿಸಿದರು. ರಾಜ್ಯವು 2018ರಲ್ಲಿಯೂ ಹಾಕಿ ವಿಶ್ವಕಪ್ ಕೂಟವನ್ನು ಆಯೋಜಿಸಿತ್ತು.
ಒಡಿಶಾ ತನ್ನ ಆತಿಥ್ಯಕ್ಕೆ ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದೆ ಮತ್ತು ಪ್ರತಿಯೊಬ್ಬ ಸಂದರ್ಶಕರು ರಾಜ್ಯದಲ್ಲಿ ತಮ್ಮ ವಾಸ್ತವ್ಯದ ಉತ್ತಮ ನೆನಪುಗಳನ್ನು ಮರಳಿ ಪಡೆಯುತ್ತಾರೆ ಎಂದು ಪಟ್ನಾಯಕ್ ಹೇಳಿದರು. ಸತತ ಎರಡು ಬಾರಿ ಪುರುಷರ ಹಾಕಿ ವಿಶ್ವಕಪ್ ಆತಿಥ್ಯ ವಹಿಸಲು ಒಡಿಶಾಗೆ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
Related Articles
Advertisement
16 ಕಡೆ ಫ್ಯಾನ್ ಪಾರ್ಕ್ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ 16 ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಸಾವಿರಾರು ಹಾಕಿ ಪ್ರೇಮಿಗಳು ಮತ್ತು ಉತ್ಸಾಹಿಗಳು ದೈತ್ಯ ಪರದೆಯ ಮೇಲೆ ಉದ್ಘಾಟನ ಸಮಾರಂಭವನ್ನು ವೀಕ್ಷಿಸಿದರು. ಬಾಲಿವುಡ್‌ನ ನೂರಾರು ಗಾಯಕರು ಮತ್ತು ಸ್ಥಳೀಯ ಕಲಾವಿದರು ಹಾಕಿ ವಿಶ್ವಕಪ್ ಥೀಮ್ ಹಾಡನ್ನು ಹಾಡಿದರು, ಇದನ್ನು ಸಂಗೀತ ನಿರ್ದೇಶಕ ಪ್ರೀತಮ್ ಸಂಯೋಜಿಸಿದ್ದರು. ಅವರು ಇತರ ಕೆಲವು ಗಾಯಕರೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಿದರು.