ಲಂಡನ್: ರೋಹನ್ ಬೋಪಣ್ಣ ಪುರುಷರ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಏರಿದ್ದಾರೆ. ಇದು 2013ರ ಬಳಿಕ ಬೋಪಣ್ಣ ಕಂಡ ಅತ್ಯುನ್ನತ ರ್‍ಯಾಂಕಿಂಗ್ ಆಗಿದೆ. ಅವರು ವಿಂಬಲ್ಡನ್‌ನಲ್ಲಿ ಮ್ಯಾಥ್ಯೂ ಎಬ್ಡೆನ್ ಜತೆಗೂಡಿ ಸೆಮಿಫೈನಲ್ ತನಕ ಸಾಗಿದ್ದರು. ಇದರಿಂದ ಬೋಪಣ್ಣ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನಗಳ ಪ್ರಗತಿಯಾಯಿತು.
ವನಿತಾ ಡಬಲ್ಸ್ ಪ್ರಶಸ್ತಿ
ತೈವಾನ್‌ನ ಶೀ ಸುವೀ ಮತ್ತು ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರೈಕೋವಾ ಸೇರಿಕೊಂಡು ವಿಂಬಲ್ಡನ್ ವನಿತಾ ಡಬಲ್ಸ್ ಪ್ರಶಸ್ತಿಯನ್ನೆತ್ತಿದರು. ಫೈನಲ್‌ನಲ್ಲಿ ಇವರು ಎಲಿಸ್ ಮಾರ್ಟೆನ್ಸ್ (ಬೆಲ್ಜಿಯಂ)-ಸ್ಟಾರ್ಮ್ ಹಂಟರ್ (ಆಸ್ಟ್ರೇಲಿಯ) ವಿರುದ್ಧ 7-5, 6-4 ಅಂತರದಿಂದ ಗೆದ್ದು ಬಂದರು.
ಬಾರ್ಬೊರಾ ಸ್ಟ್ರೈಕೋವಾ ತಾಯಿಯಾದ ಬಳಿಕ ಇದೇ ವರ್ಷ ನಿವೃತ್ತಿಯಿಂದ ಹೊರಬಂದು ಆಡಲಿಳಿದಿದ್ದರು. “ಗ್ರ್ಯಾನ್‌ಸ್ಲಾಮ್ ಅಭಿಯಾನವನ್ನು ಇದಕ್ಕಿಂತ ಉತ್ತಮ ರೀತಿಯಲ್ಲಿ ಕೊನೆಗೊಳಿಸಲು ಸಾಧ್ಯವಿಲ್ಲ’ ಎನ್ನುವ ಮೂಲಕ ಸ್ಟ್ರೈಕೋವಾ ಮತ್ತೆ ನೇಪಥ್ಯಕ್ಕೆ ಸರಿಯುವ ಸೂಚನೆಯಿತ್ತರು.
ಇದು ಸ್ಟ್ರೈಕೋವಾ-ಸು ವೀ ಜೋಡಿಗೆ ಒಲಿದ 2ನೇ ವಿಂಬಲ್ಡನ್ ಪ್ರಶಸ್ತಿ.