Advertisement
ಎಲ್ಲಿದೆ ಊರು:ಭಾರತ – ಪಾಕಿಸ್ತಾನ ಗಡಿಯ ಸಮೀಪದಲ್ಲಿರುವ ರಾಜಸ್ಥಾನದ ಬರ್ಮೇಧ್ ಜಿಲ್ಲೆಯಲ್ಲಿ ದೇರಸರ್ ಎಂಬ ಪುಟ್ಟ ಹಳ್ಳಿ ಇದೆ ಇದಕ್ಕೆ ರಾಮದೇವ್ ಕಿ ಬಸ್ತಿ ಎಂದೂ ಕೂಡ ಕರೆಯುತ್ತಾರೆ. ಈ ಹಳ್ಳಿ ಸುಮಾರು ಆರು ನೂರು ಮಂದಿಯನ್ನು ಹೊಂದಿದ 70 ಕುಟುಂಬಗಳು ವಾಸವಾಗಿದೆ. ಇಲ್ಲಿ ವಾಸಿಸುವ ಹಿರಿಯರು ಪ್ರತಿಯೊಬ್ಬರೂ ಎರಡೆರಡು ಮದುವೆಯಾಗಿದ್ದರಂತೆ. ಪ್ರತಿ ಕುಟುಂಬವೂ ಸಾಂಪ್ರದಾಯಿಕವಾಗಿ ಮದುವೆ ಮಾಡುವ ಮೂಲಕ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ ಇದರ ಹಿಂದೆ ವಿಶೇಷವಾದ ಕಾರಣವೂ ಇದೆಯಂತೆ.
ರಾಮದೇವರ ಕಾಲೋನಿಯಲ್ಲಿರುವ ಪ್ರತಿಯೊಬ್ಬ ಪುರುಷನೂ ಎರಡು ಬಾರಿ ಮದುವೆಯಾಗಿರುತ್ತಾನೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಮದುವೆಯಾದ ಇಬ್ಬರೂ ಪತ್ನಿಯರು ಪರಸ್ಪರ ಸಹೋದರಿಯರಂತೆ ಅನ್ಯೋನ್ಯವಾಗಿ ಬಾಳುತ್ತಾರಂತೆ.
Related Articles
Advertisement
ಮದುವೆಯ ಹಿಂದಿನ ನಂಬಿಕೆ:ಈ ಊರಿನಲ್ಲಿ ಪುರುಷರು ಎರಡು ಮದುವೆಯಾಗಲು ಕಾರಣವೂ ಇದೆ ಎಂದು ಈ ಊರಿನ ಜನ ಹೇಳುತ್ತಾರೆ ಅದೇನೆಂದರೆ ಮೊದಲು ಮದುವೆಯಾದ ಹೆಂಡತಿ ಗರ್ಭಿಣಿಯಾಗುವುದಿಲ್ಲ, ಸಂತಾನ ಭಾಗ್ಯ ಸಿಗಬೇಕಾದರೆ ಎರಡನೇ ಮದುವೆ ಆಗಬೇಕು ಎಂಬುದು ಇಲ್ಲಿನ ಜನರ ನಂಬಿಕೆ ಹಾಗಾಗಿ ಮೊದಲ ಮದುವೆಯಾದ ಕೆಲವೇ ಸಮಯದಲ್ಲಿ ಪುರುಷ ಎರಡನೇ ಮದುವೆಯಾಗುತ್ತಾನಂತೆ. ಇದಕ್ಕೆ ಇಂಬು ನೀಡುವಂತೆ ಹಿಂದೆ ಓರ್ವ ಪುರುಷನಿಗೆ ಮದುವೆ ಮಾಡಿ ಕೊಡಲಾಗಿತ್ತಂತೆ ಆದರೆ ಕೆಲ ವರ್ಷಗಳ ವರೆಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿಲ್ಲವಂತೆ ಇದಾದ ಬಳಿಕ ಕುಟುಂಬ ಸದಸ್ಯರು ಇನ್ನೊಂದು ಮದುವೆಯಾಗುವಂತೆ ಹೇಳಿದ್ದಾರೆ ಅದರಂತೆ ಪುರುಷ ಇನ್ನೊಂದು ಮದುವೆಯಾಗಿದ್ದಾನೆ ಇದಾದ ಬಳಿಕ ಕುಟುಂಬಕ್ಕೆ ಸಂತಾನ ಭಾಗ್ಯ ದೊರಕಿದೆ, ಅಂದಿನಿಂದ ಊರಿನ ಜನರಿಗೆ ಈ ನಂಬಿಕೆ ಬಂದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಇಂತದ್ದೇ ಎರಡು ಸಂಗತಿಗಳು ಹಿಂದೆ ನಡೆದಿತ್ತಂತೆ ಹಾಗಾಗಿ ಅನಾದಿ ಕಾಲದಿಂದಲೂ ಈ ಊರಿನ ಜನ ಎರಡು ಮದುವೆಯಾದರೆ ‘ಮಂಗಳಕರ’ ಇದರಿಂದ ಕುಟುಂಬಕ್ಕೆ ಸಂತಾನ ಭಾಗ್ಯ ದೊರಕುತ್ತದೆ ಎಂಬುದು ಅವರ ನಂಬಿಕೆಯಾಗಿದೆ.
ಎರಡು ಮದುವೆಯಾಗುವ ವಿಷಯದಲ್ಲಿ ಈ ಊರಿನ ಜನರು ನಂಬಿರುವ ನಂಬಿಕೆಯ ಹಿಂದೆ ಇನ್ನೊಂದು ಕಾರಣವೂ ಇದೆಯಂತೆ, ಅದೇನೆಂದರೆ ಈ ಊರಿನಲ್ಲಿ ಮೊದಲಿನಿಂದಲೂ ನೀರಿನ ಸಮಸ್ಯೆ ಇದೆಯಂತೆ ಅಲ್ಲದೆ ನೀರಿಗಾಗಿ ಇಲ್ಲಿಯ ಜನ ಸುಮಾರು ಐದರಿಂದ ಆರು ಕಿಲೋಮೀಟರ್ ದೂರದವರೆಗೆ ನಡೆದು ಹೋಗಬೇಕಿತ್ತಂತೆ, ಇಷ್ಟು ದೂರದಿಂದ ನೀರು ತರುವುದು ಗರ್ಭಿಣಿಯರಿಗೆ ಕಷ್ಟ ಸಾಧ್ಯ ಹಾಗಾಗಿ ಇದೇ ಕಾರಣಕ್ಕೆ ಪುರುಷರು ಮತ್ತೊಂದು ಮದುವೆಯಾಗುತ್ತಿದ್ದರು ಎಂದೂ ಕೂಡ ಹೇಳಲಾಗುತ್ತಿದೆ.