Advertisement
ನಿನ್ನ ನೆನಪುಗಳೇ ಒಮ್ಮೊಮ್ಮೆ ನನ್ನನ್ನು ಬಡಿದೆಬ್ಬಿಸುವುದಾದರರೂ ಅವೇ ಒಮ್ಮೊಮ್ಮೆ ನನ್ನನ್ನು ಜಡವಾಗಿಸುತ್ತದೆ. ನೀನಿಗಿಲ್ಲ ಎಂಬ ಒಂದು ಕಹಿ ವಾಸ್ತವ ನನ್ನ ಬದುಕನ್ನ ನೀರಸಗೊಳಿಸಿಬಿಡುತ್ತದೆ.
Related Articles
Advertisement
ಹೋಗಲಿ ಬಿಡು. ಹೇಳುವುದೇ ಮರೆತಿದ್ದೆ ನೀನು ನನ್ನೊಂದಿಗೆ ಇದ್ದಾಗ ಯಾವಾಗಲು ಒಂದು ಕವನ ಬರೆಯೋ ನನಗಾಗಿ ಎನ್ನುತ್ತಿದೆ. ಗೊತ್ತಾ ನಿನಗೆ, ನೀನು ಹೋದ ಮೆಲೆ ಡೈರಿಯ ಪುಟದಲೆಲ್ಲಾ ಸಾಲುಗಳು. ಸಾಲು ಸಾಲು ಭಾವಗಳು…..ಆದರೆ ಎಲ್ಲ ಅರ್ಧ ಬರೆದವು. ಅದಕ್ಕೊಂದು ಪೂರ್ಣ ವಿರಾಮ ಕೊಡೋಣವೆಂದರೆ ಹಾಳಾದ ಪದಗಳೇ ನೆನಪಾಗೋಲ್ಲ.
ಒಮ್ಮೊಮ್ಮೆ ಅನಿಸುತ್ತದೆ ನೀನಿಲ್ಲದೆ ಇರಬೇಕೆಂದು. ಬಂದಾಗ ಒಂಟಿ ಹೋಗುವಾಗ ಒಂಟಿ ಎಂಬ ಯಾರೋ ಹೇಳಿದ ಹಾಳಾದ ತತ್ವಗಳು ನೆನಪಾಗಿ ಸಮಾಧಾನ ಹೇಳುತ್ತದೆ. ಆದರೆ ಮಧ್ಯದಲ್ಲಿ ಒಂಟಿಯಾಗೇ ಇದ್ದರೆ ಮನಸ್ಸೆಲ್ಲಾ ಖಾಲಿಯಲ್ಲವೇ. ಒಂದಷ್ಟಾದರೂ ಇಲ್ಲಿಂದ ಹೊತ್ತು ಹೋಗಬೇಕೆಂದರೆ ಒಬ್ಬರಾದರೂ ನಮಗಾಗಿ ಬೇಕಲ್ಲವೇ ಎನಿಸುತ್ತದೆ. ಮನಸ್ಸು ಮರ್ಕಟ ಎಂಬುದು ಮಾತ್ರ ಸತ್ಯ. ನೀನಿದ್ದ ಜೀವನಕ್ಕೆ ಹೊಂದಿಕೊಂಡಷ್ಟು ಬೇಗ ಹಾಳಾದ ಮನಸ್ಸು ನೀನಿಲ್ಲದ ಜೀವನಕ್ಕೆ ಹೊಂದಿಕೊಳ್ಳುತಿಲ್ಲ.
ಮತ್ತೂಮ್ಮೆ ಹೇಳುತ್ತೀನಿ ಗೆಳತಿ, ಸಿಗುವುದಾದರೆ ಸಿಗು ಕತ್ತಲು ಕಳೆಯುವ ಮುನ್ನ… ನಕ್ಷತ್ರಗಳು ಮಾಯವಾಗುವ ಮುನ್ನ…. ರಾತ್ರಿಯ ಕಡುಗಪ್ಪು ಮಾಸುವ ಮುನ್ನ ಇರುಳಿನ ಸವಿ ತಂಪು ಇಬ್ಬನಿಯಾಗಿ ಕರಗುವ ಮುನ್ನ… ಬೆಳಗೊಂದು ಅರಳಿ, ತಂಗಾಳಿ ಬೀಸಿ ಮತ್ತೂಂದು ವಿರಹದ ಹಗಲು ಜೀವ ತಾಳುವ ಮುನ್ನ.ರೋಹಿತ್ ಬಾಸ್ರಿ , ಜೈನ್ ಕಾಲೇಜು, ಬೆಂಗಳೂರು