ಚೆನ್ನೈ: ಸಮಕಾಲೀನ ಕ್ರಿಕೆಟಿನ “ಬಿಗ್ ಫೋರ್’ ಗಳಲ್ಲಿ ಒಬ್ಬರಾಗಿರುವ ಜೋ ರೂಟ್ ಅವರಿಗೆ ಶುಕ್ರವಾರ ವಿಶೇಷ ಸಂಭ್ರಮದ ದಿನ. ಚೆನ್ನೈ ಟೆಸ್ಟ್ ಪಂದ್ಯವನ್ನು ಆಡಲಿಳಿಯುವ ಮೂಲಕ ಅವರು “ಟೆಸ್ಟ್ ಶತಕ’ವನ್ನು ಪೂರೈಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರೂಟ್, ಮೊದಲ ಸಲ ಇಂಗ್ಲೆಂಡ್ ತಂಡದ ಜೆರ್ಸಿ ಧರಿಸಿ ಕಣಕ್ಕಿಳಿದದ್ದು ತನ್ನ ಪಾಲಿನ ಹೆಮ್ಮೆಯ ಕ್ಷಣ ಎಂಬುದಾಗಿ ಹೇಳಿದರು.
“ಅದು ಎಂಟು ವರ್ಷಗಳ ಹಿಂದಿನ ಭಾರತ ಪ್ರವಾಸದ ನಾಗ್ಪುರ ಟೆಸ್ಟ್. ಮೊದಲ ಸಲ ಬ್ಯಾಟ್ ಹಿಡಿದು ಕ್ರೀಸಿನತ್ತ ಹೆಜ್ಜೆ ಹಾಕುತ್ತಿದ್ದಾಗ ಅವ್ಯಕ್ತ ರೋಮಾಂಚನ. ಇನ್ನೊಂದು ತುದಿಯಲ್ಲಿ ಕೆವಿನ್ ಪೀಟರ್‌ಸನ್ ಬ್ಯಾಟ್ ಹಿಡಿದು ನಿಂತಿದ್ದರು. ನಾನು ಬಾಲ್ಯದಿಂದಲೂ ಕೆಪಿ ಬ್ಯಾಟಿಂಗ್ ನೋಡಿ ಬೆಳೆದವ. ಕನಸೊಂದು ನನಸಾದ ಕ್ಷಣ ಇದಾಗಿತ್ತು’ ಎಂದರು.
ಇದನ್ನೂ ಓದಿ:ಮೆಲ್ಬರ್ನ್: ಟೆನಿಸ್ ಅಭ್ಯಾಸ ಪಂದ್ಯಗಳಿಗೆ ಕೋವಿಡ್ ಕಂಟಕ
ಜೋ ರೂಟ್ ಅವರ ಟೆಸ್ಟ್ ಆರಂಭ ಅಮೋಘವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 73 ರನ್ ಬಾರಿಸಿದರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ 20 ರನ್ ಮಾಡಿ ಅಜೇಯರಾಗಿ ಉಳಿದಿದ್ದರು.
ಈ ಬಾರಿ ನಾಯಕರಾಗಿ ಮೊದಲ ಸಲ ಭಾರತದಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಸರಣಿಯ ಮೊದಲ ಪಂದ್ಯವೇ ರೂಟ್ ಪಾಲಿನ 100ನೇ ಟೆಸ್ಟ್ ಆಗಿರುವುದು ವಿಶೇಷ.