Advertisement
ಆದರೆ ಜೈಸ್ವಾಲ್‌ಗೆ ಮಿಸ್ ಆದದ್ದು ಒಂದೇ, ಅದು ಸೆಂಚುರಿ. ಇದು ಕೇವಲ 2 ರನ್ನಿನಿಂದ ಕೈತಪ್ಪಿತು. ರಾಜಸ್ಥಾನ್ ತಂಡದ 9 ವಿಕೆಟ್ ಜಯಭೇರಿಯ ವೇಳೆ ಜೈಸ್ವಾಲ್ 98 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. 47 ಎಸೆತಗಳ ಈ ಸ್ಫೋಟಕ ಇನ್ನಿಂಗ್ಸ್ ವೇಳೆ 13 ಫೋರ್ ಹಾಗೂ 5 ಸಿಕ್ಸರ್ ಸಿಡಿಯಲ್ಪಟ್ಟಿತು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
“ಇದು ಬಹಳ ಕಾಲದ ತನಕ ನೆನಪಿನಲ್ಲಿ ಉಳಿಯುವ ಇನ್ನಿಂಗ್ಸ್. ಹೀಗಾಗಿ ಇದೇ ರೀತಿಯ ಆಟವನ್ನು ನಾನು ಮುಂದುವರಿಸಲು ಬಯಸುತ್ತೇನೆ. ಪ್ರತಿಯೊಂದು ಇನ್ನಿಂಗ್ಸ್ ಕೂಡ ಒಂದು ಪಾಠ…” ಎಂಬುದಾಗಿ 21 ವರ್ಷದ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ. “ನನ್ನ ಸುತ್ತ ಲೆಜೆಂಡ್ರಿ ಕ್ರಿಕೆಟಿಗರ ಒಂದು ತಂಡವೇ ಇದೆ. ಬಟ್ಲರ್, ಧೋನಿ, ಕೊಹ್ಲಿ, ಸ್ಯಾಮ್ಸನ್… ಹೀಗೆ. ಇವರೆಲ್ಲರಿಂದಲೂ ನಾನು ಕಲಿಯಲು ಸಾಕಷ್ಟಿದೆ. ಎಲ್ಲದಕ್ಕೂ ಮೊದಲು ಮಾನಸಿಕವಾಗಿ ಸಜ್ಜುಗೊಳ್ಳಬೇಕು” ಎಂದರು.