Advertisement

ಸದಸ್ಯತ್ವ ನೋಂದಣಿ ಅಗತ್ಯ

03:19 PM May 02, 2017 | Team Udayavani |

ಧಾರವಾಡ: ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಪ್ಪ ಹೊಸಮನಿ ಹೇಳಿದರು. 

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಆದರ್ಶ ಕಟ್ಟಡ ಕಾರ್ಮಿಕ ಸಂಘ ಹಾಗೂ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಕವಿಸಂನಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕಾರ್ಮಿಕರು ಸದಸ್ಯತ್ವ ಹೊಂದುವುದರಿಂದ ಅವರ ಮಕ್ಕಳ ಶಿಕ್ಷಣಕ್ಕಾಗಿ, ಕುಟುಂಬ ಹೆರಿಗೆ, ಆರೋಗ್ಯ, ನಿವೃತ್ತಿ ಮುಂತಾದ ಸೌಲಭ್ಯಗಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಅದರಿಂದ ಕಾರ್ಮಿಕ ಕುಟುಂಬಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರು. 

ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯನ್ನು 2007ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪನೆ ಮಾಡಿದೆ. ರಾಜ್ಯದಲ್ಲಿ 20 ಲಕ್ಷ ಕಾರ್ಮಿಕರ ನೋಂದಣಿ ನಿರೀಕ್ಷಿಸಲಾಗಿತ್ತು. ಆದರೆ ಇದುವರೆಗೆ 11.5 ಲಕ್ಷ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. 

ನಗರ ಹಾಗೂ ಗ್ರಾಮ ಪಂಚಾಯತಗಳಲ್ಲಿರುವ ಸಂಘಟಿತ, ಅಸಂಗಟಿತ ಕಾರ್ಮಿಕರು, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತ ಎಸ್‌. ರೇವಣ್ಣ ಮಾತನಾಡಿ, ಮಾನವನ ಬದುಕಿಗೆ ಮೂರು (ಹಂತ) ಭಾಗಗಳಿವೆ,

Advertisement

ಅದರಂತೆ ಕಾರ್ಮಿಕನ ದುಡಿಮೆ ಅವಧಿ ನಿಗದಿಯಾಗಿದೆ. ಒಂದನೇ ಹಂತದಲ್ಲಿ ಶಿಕ್ಷಣ ಮತ್ತು ಅನುಭವಕ್ಕಾಗಿ 20-30 ವರ್ಷಗಳು ಬೇಕು, ಎರಡನೇ ಹಂತದಲ್ಲಿ 30-60 ರವರೆಗೆ ದುಡಿಮೆ, ಮೂರನೇ ಹಂತ 60 ವರ್ಷಗಳ ನಂತರ ಜೀವನದ ವಿಶ್ರಾಂತ ಸಮಯಗಳಾಗಿವೆ, ಅದರಂತೆ ದಿನದ 24 ಗಂಟೆಗಳನ್ನು 3 ಭಾಗಗಳನ್ನಾಗಿ ಮಾಡಿ 8 ಗಂಟೆ ಕಾಲ ಕುಟುಂಬ ನಿರ್ವಹಣೆ,

8ಗಂಟೆ ಕಾಲ ವಿಶ್ರಾಂತಿ ಸಮಯ, 8 ಗಂಟೆ ಕಾಲ ದುಡಿಮೆ ಅವಧಿಯನ್ನಾಗಿ 130 ವರ್ಷಗಳ ಹಿಂದೆ ನಿಗದಿ ಮಾಡಿದೆ. ಅಂದಿನಿಂದ ಕಾರ್ಮಿಕ ದಿನಾಚರಣೆ ಜಾರಿಗೆ ಬಂದಿದೆ ಎಂದರು. ನಿವೃತ್ತ ಜಿಲ್ಲಾ ಸರ್ಜನ್‌ ಡಾ|ವಿ.ಡಿ.ಕರ್ಪೂರಮಠ ಮಾತನಾಡಿ, ಕಾರ್ಮಿಕರಿಗಾಗಿ ಬ್ಲಿಡ್‌ ಬ್ಯಾಂಕಿನಿಂದ ಉಚಿತ ಬ್ಲಿಡ್‌,

ಉಚಿತ ಕ್ಯಾನ್ಸರ್‌ ಚಿಕಿತ್ಸೆ ಹಾಗೂ ಮಕ್ಕಳಿಲ್ಲದವರು ದತ್ತು ಮಕ್ಕಳನ್ನು ಪಡೆಯುವ ವ್ಯವಸ್ಥೆ ಉಚಿತವಾಗಿ ಮಾಡಲಾಗುತ್ತಿದೆ. ಅದರ ಸದುಪಯೋಗ ಪಡೆಯಬೇಕೆಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಎಸ್‌.ಎನ್‌.ಹೆಗಡೆ ಸ್ವಾಗತಿಸಿದರು. ಆರ್‌.ಬಿ.ಪತ್ತಾರ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next