Advertisement

ತೆನೆ- ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

02:24 PM May 11, 2023 | Team Udayavani |

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಲವೆಡೆ ಅಹಿತಕರ ಘಟನೆ ಹೊರತುಪಡಿಸಿ, ಬಹುತೇಕ ಶಾಂತಿಯುವ ಮತದಾನ ವಾಗಿದ್ದು, ಶೇ..24ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,13,187 ಮತದಾರರಿದ್ದು, (ಪುರುಷರು- 1,04,656, ಮಹಿಳೆಯರು- 1,08,492, ಇತರೆ- 39) ಪುರುಷರು- 90,963, ಮಹಿಳೆಯರು- 92,906, ಇತರರು- 3 ಸೇರಿ ಒಟ್ಟು 1,83,852 ಮಂದಿ ಮತದಾನ ಮಾಡಿದ್ದಾರೆ.

Advertisement

ತಾಲೂಕಿನ ಅರಕೆರೆ, ಗಂಜಾಂ ಮತಗಟ್ಟೆ ಬಳಿ ಮತಯಾಚಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಹಾಗೂ ಅರೆಸೇನಾ ತುಕಡಿ ಮಧ್ಯ ಪ್ರವೇಶಿಸಿ, ಶಾಂತಿಗೊಳಿಸಿದರು.

ಕ್ಷೇತ್ರದಲ್ಲಿ 249 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಅವುಗಳ ಪೈಕಿ 125 ಮತೆಗಟ್ಟೆಗಳನ್ನು ಸೂಕ್ಷ್ಮ , ಅತಿ ಸೂಕ್ಷ್ಮ ಎಂದು ಪರಿಗಣಿಸಿ, ಸಿಸಿ ಟೀವಿ ಕಣ್ಗಾವಲು ಜೊತೆಗೆ ಅರೆಸೇನೆ ಹಾಗೂ ಪೊಲೀಸರನ್ನು ನಿಯೋಜಿಸಿ, ಮತದಾನ ಪ್ರಕ್ರಿಯೆ ನಡೆಸಲಾಯಿತು.

ಉತ್ಸಾಹದಿಂದ ಮತದಾನ: ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ, ಯುವತಿಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಮಹಿಳೆಯರು ಬಿಸಿಲನ್ನು ಲೆಕ್ಕಿಸದೆ, ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅಲ್ಲದೆ, ಕೆಲ ಗ್ರಾಮಗಳಲ್ಲಿ ಮತದಾರರನ್ನು ಕರೆತರಲು ಪಕ್ಷಗಳ ಮುಖಂಡರು, ಪ್ರತ್ಯೇಕವಾಗಿ ವಾಹನದ ವ್ಯವಸ್ಥೆ ಮಾಡಿದ್ದಲ್ಲದೆ, ಅಂತಿಮ ಕ್ಷಣದವರೆವಿಗೂ ಮತಯಾಚಿಸುತ್ತಿದ್ದ ದೃಶ್ಯ ಕಂಡು ಬಂತು.

ವೃದ್ಧರು ಹಾಗೂ ದಿವ್ಯಾಂಗರನ್ನು ವೀಲ್‌ಚೇರ್‌ ಮೂಲಕ ಮತಗಟ್ಟೆಗೆ ಕರೆತಂದು ಮತಚಲಾಯಿಸಿಲು ಸಹಾಯ ಮಾಡಿದರು. 8 ಗಂಟೆಯಾದರೂ ನಡೆದ ಮತದಾನ: ಕ್ಷೇತ್ರದ ಗಂಜಾಂ ಸೇರಿದಂತೆ ಒಟ್ಟು 6 ಮತಗಟ್ಟೆಗಳಲ್ಲಿ ರಾತ್ರಿ 7 ಗಂಟೆ ಹಾಗೂ ಕೊತ್ತತ್ತಿ ಹೋಬಳಿಯ 53 ಮತಗಟ್ಟೆಯಲ್ಲಿ ರಾತ್ರಿ 8ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

Advertisement

ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಚುನಾವಣಾ ಆಯೋಗ ಸಮಯ ನಿಗದಿಪಡಿಸಿ ದ್ದಾದರೂ, ಹೆಚ್ಚು ಮತದಾರರು ಜಮಾಯಿಸಿದ್ದರಿಂದ ರಾತ್ರಿ 8 ಗಂಟೆ ವರೆವಿಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಗಂಜಾಂನ 181ರ ಮತಗಟ್ಟೆಯಲ್ಲಿ ಮತಯಂತ್ರಗಳ ಅದಲು ಬದಲು ಮಾಡಲಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣಾ ಸಿಬ್ಬಂದಿ ವಿರುದ್ಧ ಆರೋಪ ಮಾಡಿ, ಮಾತಿನ ಚಕಮಕಿ ನಡೆಯಿತು. ನಂತರ ಚುನಾವಣಾ ಧಿಕಾರಿಗಳು, ಪೊಲೀಸರು ಮಧ್ಯ ಪ್ರವೇಶಿಸಿ ಸಮಾ ಧಾನ ಪಡಿಸಿದರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next