Advertisement
ಅಂತಿಮವಾಗಿ ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, “ಸದ್ಯ ಯಾವುದೇ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಿಲ್ಲ’ ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದರು.
Related Articles
Advertisement
ಯಾವ ಆಟೋ ಟಿಪ್ಪರ್ ಯಾವ ಬ್ಲಾಕ್‌ಗೆ ಹೋಗಬೇಕು? ಎಂಬುದನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಇದು ಜಾರಿಯಾಗಲು ಒಂದು ವಾರ ಬೇಕಾಗಿದ್ದು, ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗುವವರೆಗೆ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಅನುಷ್ಠಾನದ ಕೊರತೆ: ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ರೂಪಿಸಿದ ಯೋಜನೆಗಳನ್ನೇ ಮಾದರಿಯಾಗಿಸಿಕೊಂಡು ಅನುಷ್ಠಾನಗೊಳಿಸಿದ ಇಂದೋರ್ ನಗರ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಮೊದಲ ಸ್ಥಾನ ಪಡೆದಿದೆ. ಆದರೆ, ನಾವೇ ರೂಪಿಸಿದ ಯೋಜನೆಗಳು ಅನುಷ್ಠಾನವಾಗದ ಹಿನ್ನೆಲೆಯಲ್ಲಿ ನಾವು ಹಿಂದಿದ್ದೇವೆ.
ಇಂದೋರ್‌ನಲ್ಲಿ ಸ್ವಚ್ಛತೆ ಹಾಳು ಮಾಡುವವರು, ಮೂರು ಬಾರಿಗಿಂತಲೂ ಹೆಚ್ಚು ಬಾರಿ ಪ್ಲಾಸ್ಟಿಕ್ ಬಳಕೆ ಮಾಡಿ ಸಿಕ್ಕಿಬೀಳುವವರಿಗೆ ಭಾರೀ ದಂಡ ಹಾಗೂ ಜೈಲು ಶಿಕ್ಷೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಅದೇ ಮಾದರಿಯ ಶಿಕ್ಷೆಯನ್ನು ನಮ್ಮಲ್ಲಿಯೂ ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿದೆ ಎಂದು ಮಂಜುನಾಥ ಪ್ರಸಾದ್ ಅಭಿಪ್ರಾಯಪಟ್ಟರು.
ಆಯುಕ್ತರು ಪ್ರಸ್ತಾಪಿಸಿದ ಪ್ರಮುಖ ಅಂಶಗಳು: ನಗರದಲ್ಲಿ 14 ಸಾವಿರ ಕಿ.ಮೀ. ಉದ್ದದ 93 ಸಾವಿರ ರಸ್ತೆಗಳಿದ್ದು, ಪ್ರತಿಯೊಂದು ರಸ್ತೆಯನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಆ ಪೈಕಿ 2 ಸಾವಿರ ಕಿ.ಮೀ. ಉದ್ದದ ಪ್ರಮುಖ ರಸ್ತೆಗಳಿವೆ. ಐಐಎಂಬಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನದಿಂದ ದಿನದಲ್ಲಿ ಒಬ್ಬ ಪೌರಕಾರ್ಮಿಕರು ಅರ್ಧ ಕಿ.ಮೀ. ಉದ್ದದ ವಾರ್ಡ್ ರಸ್ತೆ ಅಥವಾ 0.35 ಕಿ.ಮೀ. ಉದ್ದದ ಪ್ರಮುಖ ರಸ್ತೆ ಗುಡಿಸಲು ಸಾಧ್ಯ.
ವರದಿಯಂತೆ 750 ಮನೆಗಳಿಗೆ ಒಂದು ಆಟೋ ಟಿಪ್ಪರ್ ನಿಯೋಜಿಸಲಾಗುತ್ತಿದ್ದು, ಒಟ್ಟು 4 ಸಾವಿರ ಆಟೋಗಳು ಅಗತ್ಯವಿದೆ. ಟೆಂಡರ್ ಕರೆಯುವ ವೇಳೆ ಗುತ್ತಿಗೆದಾರರು ಹೊಸ ಆಟೋಗಳನ್ನು ಹೊಂದಿರಬೇಕು ಹಾಗೂ ಜಿಪಿಎಸ್ ಅಳವಡಿಸಿಕೊಳ್ಳಬೇಕೆಂಬ ಷರತ್ತು ವಿಧಿಸಲಾಗುವುದು.
ಮ್ಯಾಪಿಂಗ್ ವ್ಯವಸ್ಥೆ ಜಾರಿಯಾದ ಬಳಿಕ ಪಾಲಿಕೆ ಸದಸ್ಯರೇ ತಮ್ಮ ವಾರ್ಡ್ ರಸ್ತೆಗಳಿಗೆ ಅನುಗುಣವಾಗಿ ಎಷ್ಟು ಜನ ಪೌರಕಾರ್ಮಿಕರು ಬೇಕು ಎಂಬುದನ್ನು ನಿರ್ಧರಿಸಬಹುದು.
ಮುಂದಿನ ದಿನಗಳಲ್ಲಿ ಕ್ಯಾಂಪ್ಯಾಕ್ಟರ್‌ಗಳ ಬದಲಿಗೆ ಎರಡು ವಾರ್ಡ್‌ಗಳಿಗೆ ಒಂದರಂತೆ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಲಾಗುವುದು. ಇದರಿಂದ ಎಲ್ಲೆಂದರಲ್ಲಿ ತ್ಯಾಜ್ಯ ಬೀಳುವುದು ತಪ್ಪಲಿದೆ.
ದೇವರು ಕೊಟ್ಟರೂ, ಪೂಜಾರಿ ಕೊಡದ ಸ್ಥಿತಿ: ಕೇಂದ್ರ ಕಚೇರಿಯಿಂದ ಪ್ರತಿ ತಿಂಗಳು ಪೌರಕಾರ್ಮಿಕರಿಗೆ 27 ಕೋಟಿ ರೂ. ವೇತನ ಬಿಡುಗಡೆಯಾಗುತ್ತಿದೆ. ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬ ಪರಿಸ್ಥಿತಿ ಪಾಲಿಕೆಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತ ಮಂಜುನಾಥ ಪ್ರಸಾದ್, ಇನ್ನು ಮುಂದೆ ಪೌರಕಾರ್ಮಿಕರಿಗೆ ವೇತನ ಪಾವತಿಸದಿದ್ದರೆ ಜಂಟಿ ಆಯುಕ್ತರನ್ನೇ ನೇರ ಹೊಣೆ ಮಾಡಲಾಗುವುದು. ಜತೆಗೆ ಈ ಹಿಂದೆ ವೇತನ ಪಾವತಿಸದಿರುವ ಕುರಿತು ಸ್ಪಷ್ಟನೆ ಕೋರಿ ಎಲ್ಲ 8 ಜಂಟಿ ಆಯುಕ್ತರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗುವುದು ಎಂದರು.
“ಸಾವಿಗೆ ಬಿಜೆಪಿ ಕಾರಣ’ ಹೇಳಿಕೆ ಗದ್ದಲ: ಪೌರಕಾರ್ಮಿಕ ಸುಬ್ರಹ್ಮಣ್ಯ ಸಾವಿಗೆ ಬಿಜೆಪಿಯೇ ಕಾರಣವಾಗಿದ್ದು, ಸಾವಿನಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಯಶವಂತಪುರ ಸದಸ್ಯ ಜಿ.ಕೆ.ವೆಂಕಟೇಶ್ ಆರೋಪಿಸಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಮೇಯರ್ ಪೀಠದ ಎದುರಿನ ಬಾವಿಗಿಳಿದು ಪ್ರತಿಭಟಿಸಿದರು. ಜತೆಗೆ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಮಧ್ಯಪ್ರವೇಶಿಸಿದ ಮೇಯರ್, ಆ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು. ಕೊನೆಗೆ ವೆಂಕಟೇಶ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದರು.
ನಕಲಿ ಕಾರ್ಮಿಕರಿಗೆ ಕಡಿವಾಣ ಹಾಕಿ: ಜನಪ್ರತಿನಿಧಿಗಳ ಮನೆಯವರು, ಕಾರು ಚಾಲಕರು, ಹಿಂಬಾಲಕರು ಬಯೋಮೆಟ್ರಿಕ್ ನೀಡಿ ಸಂಬಳ ಪಡೆಯುತ್ತಿದ್ದಾರೆಂಬ ದೂರುಗಳಿವೆ. ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ನಕಲಿ ಪೌರಕಾರ್ಮಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಅಧೀಕಾರಿಗಳು ಕೂಡಲೇ ಅಂತಹ ಪೌರಕಾರ್ಮಿಕರಿಗೆ ಕಡಿವಾಣ ಹಾಕಬೇಕು ಎಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಸಲಹೆ ನೀಡಿದರು.
ಉತ್ತರಿಸಲು ತಡಬಡಾಯಿಸಿದ ಅಧಿಕಾರಿಗಳು: 700 ಜನರಿಗೆ ಒಬ್ಬ ಪೌರಕಾರ್ಮಿಕರನ್ನು ಬಯೋಮೆಟ್ರಿಕ್ ಮೂಲಕ ನೇಮಿಸಿಕೊಳ್ಳಲಾಗಿದ್ದರೂ ಪೌರಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು ಹೇಗೆ? ಲೋಪ ಪತ್ತೆಯಾಗಿ ಒಂದು ತಿಂಗಳ ಬಳಿಕವಾದರೂ ಅವರನ್ನು ಏಕೆ ಕೆಲಸದಿಂದ ತೆಗೆದಿಲ್ಲ? ಹೆಚ್ಚುವರಿ ಪೌರಕಾರ್ಮಿಕರಿಂದ ಏಕೆ ಕೆಲಸ ಮಾಡಿಸಿಕೊಂಡಿರಿ? ಬಯೋಮೆಟ್ರಿಕ್ ಪಡೆದಿದ್ದು ಏಕೆ?
ಹೆಚ್ಚಿನ ಪೌರಕಾರ್ಮಿಕರನ್ನು ಮುಂದೆ ಉಳಿಸಿಕೊಳ್ಳುತ್ತೀರೋ, ಇಲ್ಲವೋ? ಎಂದು ಮೇಯರ್ ಸಂಪತ್‌ರಾಜ್ ಪ್ರಶ್ನೆಗಳ ಸುರಿಮಳೆಗೈದರು. ಈ ಪ್ರಶ್ನೆಗಳಿಗೆ ವಲಯ ಜಂಟಿ ಆಯುಕ್ತರು ಉತ್ತರಿಸಲಾಗದೆ ತಡಬಡಾಯಿಸಿದರು. ಕೊನೆಗೆ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದರು.
ಪಾಲಿಕೆ ಸದಸ್ಯರಿಗೂ ವೇತನ ನೀಡಿಲ್ಲ: ಪೌರಕಾರ್ಮಿಕರಿಗೆ ವೇತನ ಬಿಡುಗಡೆಯಾಗದಿರುವ ಬಗ್ಗೆ ಮಾತನಾಡುವಾಗ ಬಿಜೆಪಿ ಸದಸ್ಯ ಗುರುಮೂರ್ತಿ ರೆಡ್ಡಿ, ಪಾಲಿಕೆ ಸದಸ್ಯರಿಗೂ ವೇತನ ಪಾವತಿಯಾಗಿಲ್ಲ ಎಂದರು. ಅದಕ್ಕೆ ಎಲ್ಲ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿದಾಗ, ಎಚ್ಚೆತ್ತ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಅವರಿಗೆ ಕುಳಿತುಕೊಳ್ಳುವಂತೆ ಸೂಚಿಸಿ, ಪೌರಕಾರ್ಮಿಕರಿಗೆ ವೇತನ ಪಾವತಿಯಾಗುವವರೆಗೆ ನಮಗೆ ವೇತನ ಕೊಡಬೇಡಿ ಎಂದರು.
ತಜ್ಞರ ಅಧೀನದಲ್ಲಿ ಒಣ ತ್ಯಾಜ್ಯ ಕೇಂದ್ರಗಳು: ತಜ್ಞರನ್ನು ಕರೆದು ಅಧಿಕಾರಿಗಳು ಸಭೆ ನಡೆಸುತ್ತಾರೆ. ಆದರೆ, ಪಾಲಿಕೆ ಸದಸ್ಯರನ್ನು ಏಕೆ ಸಭೆಗಳಿಗೆ ಕರೆದು ಸಲಹೆ ಪಡೆಯುವುದಿಲ್ಲ ಎಂದು ಪ್ರಶ್ನಿಸಿದ ಸದಸ್ಯರಾದ ಮಹಮದ್ ರಿಜ್ವಾನ್ ಮತ್ತು ಮಂಜುನಾಥ ರಾಜು, ತಜ್ಞರು ಎನಿಸಿಕೊಂಡಿರುವವರೇ ಪಾಲಿಕೆಯ ಹಲವಾರು ಒಣ ತ್ಯಾಜ್ಯ ಕೇಂದ್ರಗಳನ್ನು ನಿರ್ವಹಣೆ ಮಾಡಿ ಲಾಭಗಳಿಸುತ್ತಿದ್ದು, ಅವುಗಳನ್ನು ವಾಪಸ್ ಪಡೆದು ಪೌರಕಾರ್ಮಿಕರ ಮಕ್ಕಳಿಗೆ ನೀಡಬೇಕು ಎಂದು ಕೋರಿದರು.
ಎಸಿಬಿ ತನಿಖೆಗೆ ಸುಬ್ರಹ್ಮಣ್ಯ ಪ್ರಕರಣ: ಪಾಲಿಕೆಯಿಂದ ವೇತನ ನೀಡಿದ ಹಿನ್ನೆಲೆಯಲ್ಲಿ ಗುತ್ತಿಗೆ ಪೌರಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಕಟಣವನ್ನು ಎಸಿಬಿ ತನಿಖೆಗೆ ವಹಿಸಲು ನಿರ್ಧರಿಸಿದ್ದಾರೆ ಎಂದು ಮೇಯರ್ ಸಂಪತ್‌ರಾಜ್ ಮಾಹಿತಿ ನೀಡಿದರು.
ವಾದ-ಪ್ರತಿವಾದಪದ್ಮನಾಭರೆಡ್ಡಿ: ವೇತನ ದೊರೆಯದ ಹಿನ್ನೆಲೆಯಲ್ಲಿ ಗುತ್ತಿಗೆ ಪೌರಕಾರ್ಮಿಕರೊಬ್ಬರು ಆತ್ಮಹತ್ಯೆಗೆ ಶರಣಾದರೂ ಪಾಲಿಕೆಯ ಅಧಿಕಾರಿಗಳು ಈವರೆಗೆ ಒಂದು ವರ್ಷದೊಳಗಿನ ಸೇವಾವಧಿ ಹೊಂದಿರುವ 3,341 ಪೌರಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಿಲ್ಲ. ಅವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು. ಶಿವರಾಜ್: ಸದ್ಯ ಇರುವ 3,341 ಪೌರಕಾರ್ಮಿಕರನ್ನು ನೇಮಿಸಿಕೊಂಡರೆ ಮುಂದೊಂದು ದಿನ 10 ಸಾವಿರ ಮಂದಿ ಬಂದು ಸೇರಿಕೊಳ್ಳಬಹುದು. ಹೀಗಾದರೆ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರುವುದು ಹೇಗೆ? ಪೌರಕಾರ್ಮಿಕರನ್ನು ಮುಂದುವರೆಸಬೇಕೇ ಅಥವಾ ಬಿಡುಗಡೆಗೊಳಿಸಬೇಕೇ ಎಂಬ ಕುರಿತು ಆಯುಕ್ತರು ತೀರ್ಮಾನ ಕೈಗೊಳ್ಳಬೇಕು. ಪದ್ಮನಾಭರೆಡ್ಡಿ: ಪಾಲಿಕೆಯ ಆಡಳಿತ ದಾರಿ ತಪ್ಪಿರುವುದರಿಂದ ಪೌರಕಾರ್ಮಿಕ ಸಾವನ್ನಪ್ಪಿದ್ದಾರೆ. ಸುಬ್ರಮಣ್ಯ ಅವರದು ಆತ್ಮಹತ್ಯೆಯಲ್ಲ ನಿಮ್ಮ ಆಡಳಿತ ವೈಫಲ್ಯದಿಂದ ಆಗಿರುವ ಕೊಲೆ. ಶಿವರಾಜ್: ಪೌರಕಾರ್ಮಿಕರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಆಡಳಿತ ಪಕ್ಷ ಟೀಕೆಗಳಿಗೆ ಗುರಿಯಾಗಬೇಕಿದೆ. ಕೊಲೆ ಎಂಬ ಪದವನ್ನು ಕಡತದಿಂದ ತೆಗೆಯಬೇಕು. ಇಂತಹ ಘಟನೆಗಳು ನಡೆಯದಂತೆ ಕೆಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಮೂಲಕ ಬಿಸಿ ಮುಟ್ಟಿಸಬೇಕಿದೆ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೆ ವೇತನ ದೊರೆಯದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೂ ಅದಕ್ಕೆ ಜಂಟಿ ಆಯುಕ್ತರನ್ನೇ ನೇರ ಹೊಣೆಯಾಗಿಸಲಾಗುವುದು. ಜತೆಗೆ ತಾವು ಘೋಷಿಸಿದ ಪರಿಹಾರ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
-ಆರ್.ಸಂಪತ್‌ರಾಜ್, ಮೇಯರ್ ನಿಮ್ಮ ಪೂಜಾರಿಗಳನ್ನು ನೀವೇ ತಿದ್ದುತ್ತೀರಾ, ಇಲ್ಲ ನಾವು ತಿದ್ದಬೇಕಾ ಎಂಬುದನ್ನು ಹೇಳಿ. ಈ ಹಿಂದೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪಾಲಿಕೆಯಲ್ಲಿ ನಿಲ್ಲಿಸಿ ಛೀಮಾರಿ ಹಾಕುವಂತಹ ಪರಿಸ್ಥಿತಿಯಿತ್ತು. ಮತ್ತೆ ಅಂತಹ ಪರಿಸ್ಥಿತಿ ಬರಬೇಕಿದೆ. ಆಗ ಮಾತ್ರ ಅಧಿಕಾರಿಗಳು ಬುದ್ದಿ ಕಲಿಯಲು ಸಾಧ್ಯ.
-ಮಂಜುನಾಥ ರೆಡ್ಡಿ, ಮಾಜಿ ಮೇಯರ್