Advertisement

ಪಾಕಿಸ್ಥಾನ: ಹಿಂದೂಗಳ ಮತಾಂತರ ಖಂಡಿಸಿ ಪ್ರತಿಭಟನೆ

12:50 AM Apr 01, 2023 | Team Udayavani |

ಕರಾಚಿ: ಪಾಕಿಸ್ಥಾನದಲ್ಲಿ ಹಿಂದೂ ಬಾಲಕಿಯರು ಹಾಗೂ ಮಹಿಳೆಯರ ಅಪ ಹರಣ, ಬಲವಂತದ ಮತಾಂತರ ಮತ್ತು ಮದುವೆ ಖಂಡಿಸಿ ಅಲ್ಪಸಂಖ್ಯಾಕ‌ ಹಿಂದೂ ಸಮುದಾಯುವು ಕರಾಚಿಯಲ್ಲಿ ಬೃಹತ್‌ ಪ್ರತಿ ಭಟನೆ ನಡೆಸಿತು.

Advertisement

ಹಿಂದೂ ಸಂಘಟನೆ ಯಾದ ಪಾಕಿಸ್ಥಾನ್‌ ದಾರಾವರ್‌ ಇತ್ತೇ  ಹಾದ್‌(ಪಿಡಿಐ) ವತಿಯಿಂದ ಕರಾಚಿ ಪ್ರಸ್‌ ಕ್ಲಬ್‌ ಮತ್ತು ಸಿಂಧ್‌ ವಿಧಾನಸಭೆ ಎದುರು ಗುರುವಾರ ಪ್ರತಿ ಭಟನೆ ನಡೆಯಿತು. ಈ ವೇಳೆ ಮಾತ ನಾಡಿದ ಪಿಡಿಐ ನಾಯಕ, “ಹಾಡಹಗಲೇ 12, 13 ವರ್ಷದ ಹಿಂದೂ ಬಾಲಕಿ ಯರನ್ನು ಅಪಹರಣ ಮಾಡಲಾಗುತ್ತಿದೆ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಅನಂತರ ವಯಸ್ಸಾದ ಪುರುಷನೊಂದಿಗೆ ಮದುವೆ ಮಾಡಲಾಗುತ್ತದೆ. ಹಿಂದೂ ಬಾಲಕಿಯರು, ಮಹಿಳೆಯರ ರಕ್ಷಣೆಗೆ ಪಾಕ್‌ ಸರಕಾರ ಕಠಿನ ಕಾನೂನು ಜಾರಿಗೆ ತರಬೇಕು,’ ಎಂದು ಆಗ್ರಹಿಸಿದ್ದಾರೆ.

ಹಿಂದೂ ವೈದ್ಯನ ಕೊಲೆ: ಹಿಂದೂಗಳನ್ನು ಗುರಿಯಾಗಿಸಿ ಕೊಂಡು ಪಾಕಿಸ್ಥಾನದಲ್ಲಿ ನಡೆಯುತ್ತಿ ರುವ ಹತ್ಯೆಗಳ ಸಂಖ್ಯೆ ಅಧಿಕವಾ ಗುತ್ತಿದೆ. ಆಸ್ಪತ್ರೆ ಯಿಂದ ಮನೆಗೆ ಮರಳು ತ್ತಿದ್ದ ಹಿಂದೂ ವೈದ್ಯರೊಬ್ಬ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಗುರು ವಾರ ರಾತ್ರಿ ನಡೆದಿದೆ.

ಕರಾಚಿ ಮೆಟ್ರೋಪಾಲಿಟನ್‌ ಕಾರ್ಪೊರೇಶನ್‌(ಕೆಎಂಸಿ)ನ ಹಿರಿಯ ಆರೋಗ್ಯ ನಿರ್ದೇಶಕ ಹಾಗೂ ಕಣ್ಣಿನ ತಜ್ಞರಾಗಿರುವ ಡಾ| ಬೀರ್ಬಲ್‌ ಗೆನಾನಿ ಗುಲಾÏನ್‌ ಅವರನ್ನು ದುಷ್ಕರ್ಮಿ ಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next