“ರಗಡ್’ ಚಿತ್ರತಂಡ ಮತ್ತೂಂದು ಹಾಡು “ಅವನದೆ ಯೋಚನೆ, ಶುರುವಾಗಿದೆ ಸುಮ್ಮನೆ’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಬಿಡುಗಡೆಗೊಂಡ ಎರಡನೇ ದಿನಕ್ಕೆ ಲಕ್ಷಾಂತರ ವೀವ್ಸ್ ಆಗಿದೆ. ಅಷ್ಟೇ ಅಲ್ಲ, ಸಾಕಷ್ಟು ಮೆಚ್ಚುಗೆಯ ಸಂದೇಶಗಳೂ ಯುಟ್ಯೂಬ್‌ನಲ್ಲಿ ಹರಿದಾಡುತ್ತಿವೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿಕೊಟ್ಟಿದೆ.
Advertisement
ಅಭಿಮನ್ ರಾಯ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹಾಡುಗಳು ಹಿಟ್ ಆಗಿರುವ ಕುರಿತು ಹೇಳುವ ನಿರ್ದೇಶಕ ಶ್ರೀಮಹೇಶ್‌ಗೌಡ, “ಸಂಗೀತ ನಿರ್ದೇಶಕ ಅಭಿಮನ್‌ರಾಯ್ ಅವರಿಗೆ ಒಳ್ಳೆಯ ರಾಗ ಸಂಯೋಜನೆ ಬೇಕು ಅಂತ ಹಠ ಹಿಡಿದು, ಹೊಸ ಬಗೆಯ ಮೆಲೋಡಿ ಹಾಡುಗಳನ್ನು ಪಡೆದಿದ್ದೇವೆ. ವಿನೋದ್ ಪ್ರಭಾಕರ್ ಸಿನಿಮಾದಲ್ಲಿ ಮೊದಲ ಹಿಟ್ ಆಲ್ಬಂ ಇದಾಗಲಿದೆ ಎಂಬ ವಿಶ್ವಾಸ ನನ್ನದು. ಈಗಾಗಲೇ ಹಾಡುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ.