Advertisement

ಕೃಷಿಕ ಮೇಲ್ದೊಡ್ಡಿ ರೈತರಿಗೆ ಮಾದರಿ

12:18 PM Nov 06, 2021 | Team Udayavani |

ಬೀದರ: ಕೃಷಿ ಕ್ಷೇತ್ರದಲ್ಲಿ ಸಾಧಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿರುವ ಮೂಲಕ ಗುರುಲಿಂಗಪ್ಪ ಮೇಲ್ದೊಡ್ಡಿ ಗಡಿ ಜಿಲ್ಲೆ ಬೀದರಗೆ ಕೀರ್ತಿ ತಂದಿದ್ದಾರೆ ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ-ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ಗೃಹ ಕಚೇರಿಯಲ್ಲಿ ಗುರುಲಿಂಗಪ್ಪ ಮೇಲ್ದೊಡ್ಡಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಾವಯುವ ಕೃಷಿಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ರೈತರಿಗೆ ಮಾದರಿಯಾಗಿದ್ದಾರೆ. ರಸಾಯನಿಕ ಕೀಟನಾಶಕ ಬಳಸದೇ ಗೋ ಆಧಾರಿತ ಕೃಷಿ ಮೂಲಕ ಯಶಸ್ಸು ಸಾಧಿಸಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬೀದರ ಜಿಲ್ಲೆಯ ರೈತರು ಕೃಷಿಯಲ್ಲಿ ಎಂದಿಗೂ ಮುಂದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ರಸಾಯನಿಕ ಮುಕ್ತ ಕೃಷಿ ಮಾಡಿ, ಯಶಸ್ಸು ಕಂಡ ಶ್ರೀ. ಗುರುಲಿಂಗಪ್ಪಾರವರಿಗೆ ಅಭಿನಂದಿಸಿ, ನಮ್ಮ ಜಿಲ್ಲೆಯ ಎಲ್ಲಾ ಸಾವಯವ ಕೃಷಿಯಲ್ಲಿ ಉತ್ತಮ ಆದಾಯ ಪಡೆದು ಫಲವತ್ತಾದ ಭೂಮಿಯನ್ನು ಸಂರಕ್ಷಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಮೇಲ್ದೊಡ್ಡಿ ಅವರು ಜಿಲ್ಲೆಯ ರೈತರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಯುವಕರನ್ನು ಕೃಷಿಯತ್ತ ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಪ್ರಶಾಂತ ಹೊಳಸಮುದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next