Advertisement

ವಲಸೆ ಬಂದಿದ್ದ ಟ್ರಂಪ್‌ ಮಾವನಿಗೆ ಪೌರತ್ವ

07:34 AM Aug 11, 2018 | |

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಪತ್ನಿ ಮೆಲಾನಿಯಾ ಟ್ರಂಪ್‌ ತಂದೆ ಹಾಗೂ ತಾಯಿಗೆ ಚೈನ್‌ ಮೈಗ್ರೇಶನ್‌ ಪ್ರೋಗ್ರಾಮ್‌ ಮೂಲಕ ಅಮೆರಿಕದ ಪೌರತ್ವ ಲಭ್ಯವಾಗಿದೆ. ಆದರೆ ಈ ಚೈನ್‌ ಮೈಗ್ರೇಶನ್‌ ವ್ಯವಸ್ಥೆಯನ್ನು ಟ್ರಂಪ್‌ ಹಿಂದಿನಿಂದಲೂ ವಿರೋಧಿಸುತ್ತಿದ್ದರು. ಮೆಲಾನಿಯಾ ಪಾಲಕರಾದ ವಿಕ್ಟರ್‌ ಮತ್ತು ಅಮಲ್ಜಿಯಾ ನಾವ್ಸ್‌ ಸ್ಲೊವೇನಿಯಾ ಮೂಲದವರಾಗಿದ್ದು, ಗ್ರೀನ್‌ ಕಾರ್ಡ್‌ ಪಡೆದು ಅಮೆರಿಕದಲ್ಲಿ ವಾಸಿಸುತ್ತಿದ್ದರು.

Advertisement

ಮೆಲಾನಿಯಾ 2001ರಲ್ಲಿ ಮಾಡೆಲಿಂಗ್‌ಗಾಗಿ ವೀಸಾ ಪಡೆದು ಅಮೆರಿಕಕ್ಕೆ ಆಗಮಿಸಿದ್ದರು. 2006 ರಲ್ಲಿ ಅಮೆರಿಕ ಪೌರತ್ವವನ್ನು ಪಡೆದರು. ಮೆಲಾನಿ ಯಾರಿಂದ ಪ್ರಾಯೋಜಿತರಾಗಿ ವಿಕ್ಟರ್‌ ಹಾಗೂ ಅಮಲ್ಜಿಯಾ ಕೂಡ ಗ್ರೀನ್‌ ಕಾರ್ಡ್‌ ಪಡೆದಿದ್ದರು. ಗ್ರೀನ್‌ ಕಾರ್ಡ್‌ ಪಡೆದ ನಂತರ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವ್ಯವಸ್ಥೆಯನ್ನು ಅಮೆರಿಕದಲ್ಲಿ ಚೈನ್‌ ಮೈಗ್ರೇಶನ್‌ ಎಂದು ಕರೆಯಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next