Advertisement

ದಿಲ್ಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್

09:55 AM Feb 21, 2020 | keerthan |

ಹೊಸದಿಲ್ಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಟ್ರಂಪ್ ಪತ್ನಿ, ಅಮೇರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ದಿಲ್ಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.

Advertisement

ಇದೇ ತಿಂಗಳ 24 ಮತ್ತು 25ರಂದು ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ 25ರಂದು ಮೆಲೆನಿಯಾ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಮೆಲಾನಿಯಾ ಅವರು ಬಹುತೇಕ ದಕ್ಷಿಣ ದಿಲ್ಲಿಯ ಶಾಲೆಗೆ ಭೇಟಿ ನೀಡುವ ಸಾಧ್ಯತೆಯಿದೆ.

ದಿಲ್ಲಿ ಸರ್ಕಾರ ಅಲ್ಲಿನ ಶಾಲೆಗಳಲ್ಲಿ ಒತ್ತಡ ನಿವಾರಣೆಗೆ ಸಂತೋಷ ಸೂತ್ರಗಳನ್ನು ಅಳವಡಿಸಿತ್ತು. ಧ್ಯಾನ, ವಿಶ್ರಾಂತಿ ಮತ್ತು ಹೊರಾಂಗಣ ಚಟುವಟಿಕೆಗಳು ಇದರಲ್ಲಿದೆ. ಎರಡು ವರ್ಷಗಳ ಹಿಂದೆ ಸಚಿವ ಮನೀಶ್ ಸಿಸೋಡಿಯಾ ಈ ಕಾರ್ಯಕ್ರಮವನ್ನು ಆರಂಭಿಸಿದ್ದರು. ಮೆಲಾನಿಯಾ ಟ್ರಂಪ್ ಅವರು ದಿಲ್ಲಿಯ ಈ “ಸಂತೋಷದ ತರಗತಿ’’ಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಡೊನಾಲ್ಡ್ ಟ್ರಂಪ್ ನಿಯೋಗ ದಿಲ್ಲಿಯ ಹೈದರಾಬಾದ್ ಹೌಸ್ ನಲ್ಲಿ ಮಾತುಕತೆ ನಡೆಸುವ ವೇಳೆಯಲ್ಲಿ ಮೆಲಾನಿಯಾ ಶಾಲೆಗೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next