Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಮತ್ತು ಕಾವೇರಿ ನದಿ ಸೇರುವ ಸಂಗಮದಿಂದ 3.5 ಕಿ.ಮೀ. ದೂರದ ತಗ್ಗು ಪ್ರದೇಶದಲ್ಲಿ ಕನಕಪುರ ತಾಲೂಕಿನ ಮಹಾಲಿ ಗ್ರಾಮದ ಸಮೀಪ ಕಾವೇರಿ ನದಿ ಕಣಿವೆಯೇ ಮೇಕೆದಾಟು ಯೋಜನೆ ಸ್ಥಳ. ಇದು ಸಮುದ್ರ ಮಟ್ಟಕ್ಕಿಂತ 349 ಮೀಟರ್ ಎತ್ತರದಲ್ಲಿದ್ದು, ಅಣೆಕಟ್ಟೆ ಕಟ್ಟಲು ಸೂಕ್ತವಾದ ಸ್ಥಳವಾಗಿದೆ ಎಂದರು.
Related Articles
Advertisement
ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳ – ಕಾವೇರಿ ನ್ಯಾಯಾಧೀಕರಣ ಮತ್ತು ಸುಪ್ರೀಂಕೋರ್ಟಿನ ತೀರ್ಪಿನಂತೆ ವಾರ್ಷಿಕ 177 ಟಿಎಂಸಿ ನೀರನ್ನು ತಿಂಗಳುವಾರು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗಿದೆ. ಕಾವೇರಿ ಜಲ ವಿವಾದ ನ್ಯಾಯಾಧೀಕರಣದ ತೀರ್ಪಿನಂತೆ ಕರ್ನಾಟಕ ರಾಜ್ಯದ ನೀರಿನ ಬಳಕೆ ಪಾಲು 285 ಟಿಎಂಸಿ. ಆದರೆ ಅಷ್ಟು ನೀರು ಸಂಗ್ರಹದ ವ್ಯವಸ್ಥೆ ಕರ್ನಾಟಕದಲ್ಲಿ ಇಲ್ಲ. ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕರ್ನಾಟಕ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವುದು ಅನಿವಾರ್ಯ.
ಇದರಿಂದ ನೀರಿನ ಸಂಗ್ರಹ ಮಾಡಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಕರ್ನಾಟಕದ ಪಾಲಿನನೀರಿನ್ನು ಬೆಂಗಳೂರು ಮಹಾ ನಗರ ಹಾಗೂ ರಾಮನಗರ ಜಿಲ್ಲೆ ಕುಡಿಯುವ ನೀರಿಗೆ ಬಳಸಿಕೊಳ್ಳಬಹುದು ಎಂದು ನೀರಾವರಿ ತಜ್ಞ ಪೊ›.ಬಿ.ಈ.ಯೋಗೇಂದ್ರ ತಿಳಿಸಿದರು.