Advertisement

ಮೇಕೆದಾಟು: ಕಾಂಗ್ರೆಸ್ ಹೊಣೆಗೇಡಿತನದ ಸಾಕ್ಷ್ಯ ಬಿಡುಗಡೆ; ಕಾರಜೋಳ

03:20 PM Jan 01, 2022 | Team Udayavani |

ಬೆಂಗಳೂರು: ಅಂದು ಕೃಷ್ಣೆಗೆ (ಕೂಡಲ ಸಂಗಮ) ಇಂದು ಕಾವೇರಿಗೆ (ಮೇಕೆದಾಟು) ಸಿಕ್ಕಅವಕಾಶವನ್ನು ವ್ಯರ್ಥ್ಯಗೊಳಿಸಿ ಅರ್ಥಹೀನ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಿತ್ರರು ಅಧಿಕಾರದಲ್ಲಿ ಇದ್ದಾಗ ಮೇಕೆದಾಟು ಕುರಿತು ಹೊಣೆಗೇಡಿತನಕ್ಕೆ ಸಾಕ್ಷ್ಯ ನಮ್ಮಲ್ಲಿದೆ. ಕಾದು ನೋಡಿ. ಕೆಲವೇ ದಿನಗಳಲ್ಲಿ ಸ್ಪೋಟಕ ಮಾಹಿತಿ ಹೊರಹಾಕುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸೌಧದಲ್ಲಿ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಇದೆಲ್ಲವೂ ರಾಜ್ಯದ ಹಿತದೃಷ್ಠಿಯಿಂದ ಮತ್ತು ರಾಜ್ಯದ ಜನತೆಗೆ ಸತ್ಯ ಗಮನಕ್ಕೆ ತರುವುದಕ್ಕಾಗಿ ಎಂದು ಸಚಿವರು ವಿವರಿಸಿದ್ದು, . ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಮತ್ತು ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ. ಜನವರಿ 7, 2013 ರಿಂದ ಜನವರಿ 14, 2013ರವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ರಾಜಕೀಯ ಗಿಮಿಕ್ ಮಾಡಿದ್ದರು ಎಂದು ಟೀಕಿಸಿದರು.

2013ರಲ್ಲಿ ಪಾದಯಾತ್ರೆ ಮಾಡಿದರು. ಕೂಡಲ ಸಂಗಮದಲ್ಲಿ ನಾವು ಮುಳುಗಿ ಎದ್ದು ಪಾಪ ಕಳೆಯಲಿ ಅಂತ ಪೂಜೆ ಮಾಡುತ್ತೇವೆ ಎಂದು ಪವಿತ್ರ ಸ್ಥಳದಲ್ಲಿ ಆಣೆ ಮಾಡಿದರು.ನಮಗೆ ಅಧಿಕಾರ ಕೊಡಿ, ಕೊಟ್ಟರೆ 15ಲಕ್ಷ ಎಕರೆ ಭೂಮಿ ನೀರಾವರಿ ಮಾಡುತ್ತೇವೆ ಎಂದು. 7,728 ಕೋಟಿ ಖರ್ಚು ಮಾಡಿದರು. ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದರು ಎಂದು ಕಿಡಿ ಕಾರಿದರು.

ಅಂದು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ನಡುವೆ ನಡೆದ ಪೈಪೋಟಿ ಪಾದಯಾತ್ರೆ. ಅಧ್ಯಕ್ಷ ಪರಮೇಶ್ವರ್ ಹಿಂದಿಕ್ಕಿ, ನಾನು ಸಿಎಂ‌ ಆಗಬೇಕು ಎಂದು ಸಿದ್ದರಾಮಯ್ಯ ನಡುವೆ ನಡೆದ ಪೈಪೋಟಿ ನಡೆದಿತ್ತು. ಈಗ ಮೇಕೆದಾಟು ಯೋಜನೆ ಕೂಡ ಅಂತದ್ದೇ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿ.ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೂಡ ಅದೇ ಅಧಿಕಾರಕ್ಕೆ ಪೈಪೋಟಿ ಮಾಡುತ್ತಿದ್ದಾರೆ ಎಂದರು.

ಅವರು ಅಧಿಕಾರದಲ್ಲಿ ಇದ್ದಾಗ ಹೊಣಗೇಡಿತನ ಮಾಡಿದ ವಿಚಾರ ಬಿಚ್ಚಿಡುತ್ತೇನೆ. ಕೆಲವೇ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

Advertisement

ನಾನು ಯಾರ ವಯಕ್ತಿಕ ವಿಚಾರ ಮಾತನಾದುವುದಿಲ್ಲ.ಕಾಂಗ್ರೆಸ್ ಹೊಣಗೇಡಿತನ ಬಗ್ಗೆ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಸಿಂದಗಿ ಉಪಚುನಾವಣೆ ಸಂದರ್ಭದಲ್ಲಿ ಒಂದು ಮಾತು ಹೇಳಿದರು. ಸಮಾಜವಾದಿ ವಿಚಾರ ಹಾಗೂ ಹಿಂದುಳಿದ ನಾಯಕರು, ಇಂದು ಪ್ರತಿಪಕ್ಷ ನಾಯಕರೂ ಆಗಿದ್ದಾರೆ.ದಲಿತರ ಬಗ್ಗೆ ತಮ್ಮ ಮಾತಿನ ಮೂಲಕ ಒಂದು ಮಾತು ಹೇಳಿದ್ದರು, ಹೊಟ್ಟೆ ಪಾಡಿಗಾಗಿ ರಮೇಶ್ ಜಿಗಜಿಣಗಿ ಹಾಗೂ ಕಾರಜೋಳ ಹೋದರು ಎಂದು, ಎಲ್ಲಾ ಜಾತಿ ಒಟ್ಟಿಗೆ ತೆಗೆದಯಕೊಂಡು ಹೋಗುವ ನಾಯಕ ಅಂತ ನಾನು ತಿಳಿದಿದ್ದೆ. ಮುಂದಿನ ದಿನಗಳಲ್ಲಿ ದಲಿತರು ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡಲಿದ್ದಾರೆ.ದಲಿತರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಬಾರದು ಎಂದರು.

ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಕಡತ ಯಜ್ಞ ಮಾಡದೇ ಕಾಲಹರಣ ಮಾಡುವುದು, ವಿರೋಧಪಕ್ಷದಲ್ಲಿ ಬಂದಾಗ ಅನಗತ್ಯವಾದ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್ ನವರ ಜಾಯಮಾನ ಎಂದು ಸಚಿವರು ವ್ಯಂಗ್ಯವಾಡಿದರು. ತಾವು ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಮತ್ತು ಜನಹಿತದ ಕೆಲಸಗಳನ್ನು ವಿಳಂಬದ್ರೋಹದ ಮೂಲಕ ಮುಂದೂಡಿ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ ಎಂದು ಸಚಿವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next