Advertisement

ಮೇಕೆದಾಟು: ಶೀಘ್ರ ಬಿಎಸ್‌ವೈ ಜತೆ ದೆಹಲಿಗೆ ಭೇಟಿ

12:28 PM Sep 15, 2020 | Suhan S |

ರಾಮನಗರ/ಕನಕಪುರ: ಮೇಕೆದಾಟು ಯೋಜನೆಗೆ ಶೇ.92 ಅರಣ್ಯ ಬಳಕೆಯಾಗಲಿದ್ದು ಯೋಜನೆಗೆ ಅನು ಮೋದನೆ ನೀಡುವಂತೆ ಇದೇ ಬುಧವಾರ ಅಥವಾ ಗುರುವಾರ ಕೇಂದ್ರ ಅರಣ್ಯ ಸಚಿವರಾದ ಪ್ರಕಾಶ್‌ ಜಾವೇಡ್ಕರ್‌, ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಅವರನ್ನು ಸಿಎಂ ಬಿಎಸ್‌ವೈ ಅವರೊಡನೆ ಭೇಟಿ ಮಾಡಿ ಒತ್ತಡ ಹೇರುವುದಾಗಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದರು.

Advertisement

ಕನಕಪುರ ತಾಲೂಕಿನ ಒಂಟಿಗುಂಡ್ಲು ಬಳಿ ಮೇಕೆ ದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆಗುರಿತಿಸಿರುವ ಸ್ಥಳ ಪರಿಶೀಲನೆ ನಂತರಸುದ್ದಿಗಾರರೊಂದಿಗೆ ಮಾತನಾಡಿದರು.

ಪರಿಷ್ಕೃತ ಪ್ರಸ್ತಾವನೆ: ಕೇಂದ್ರ ಸಚಿವರ ಭೇಟಿಗೆ ಈಗಾಗಲೇ ಸಮಯಾವಕಾಶ ಕೇಳಲಾಗಿದೆ. ಮೇಕೆದಾಟು ಯೋಜನೆಗೆ ಸುಮಾರು ಶೇ.97 ಅರಣ್ಯ ಬಳಕೆಯಾಗುತ್ತಿದೆ. ಈ ಸಂಬಂಧ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಯೋಜನೆ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಅನುಮತಿ ನೀಡುವಂತೆ ಒತ್ತಾಯಿಸುವೆ. ಅಲ್ಲದೇ, ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ತಮಿಳುನಾಡಿನ ಮನವೊಲಿಸಬೇಕು: ಈ ಯೋಜನೆಗೆ ತಮಿಳುನಾಡು ರಾಜ್ಯ ಕ್ಯಾತೆ ತೆಗೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಾವೇರಿ ನ್ಯಾಯಾಧೀಕರಣ ಘೋಷಿಸಿರುವ ಪ್ರಮಾಣದ ನೀರನ್ನು ಆ ರಾಜ್ಯಕ್ಕೆ ಹರಿಸಿ, ಹೆಚ್ಚುವರಿ ನೀರನ್ನು ಜಲಾಶಯದಲ್ಲಿ ಹಿಡಿದಿಟ್ಟುಕೊಳ್ಳುವುದು ಯೋಜನೆ ಮೂಲ ಉದ್ದೇಶ. ವಾರ್ಷಿಕ ತಮಿಳುನಾಡಿಗೆ ಹರಿಯಬೇಕಾದ ನೀರಿನ ಪ್ರಮಾಣ ಹರಿಸಲು ಈ ಯೋಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ವಿರೋಧ ಸಹಜ: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿಕೊಂಡಿದೆ. ಶೀಘ್ರ ನಮ್ಮ ಸರ್ಕಾರ ವಕೀಲರ ಮೂಲಕ ಉತ್ತರಕೊಡುವುದಾಗಿ, ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸುವುದಾಗಿ ಪ್ರತಿಕ್ರಿಯಿಸದರು.ಮೇಲಾಗಿಮುಂದಿನವರ್ಷ ತಮಿಳುನಾಡಿನಲ್ಲಿ ಚುನಾವಣೆ ಎದುರಾಗುವುದರಿಂದ ಮೇಕೆದಾಟು ಯೋಜನೆಗೆ ವಿರೋಧ ಸಹಜ ಎಂದರು.

Advertisement

ಮನವರಿಕೆ: ಮೇಕೆದಾಟು ಯೋಜನೆಯಿಂದ ನೈಸರ್ಗಿಕವಾಗಿ ತನಗೆ ದೊರೆಯುತ್ತಿದ್ದ ನೀರಿಗೆ ತೊಂದರೆಯಾಗಲಿದೆ (ಕಾವೇರಿ ಟ್ರಿಬ್ಯುನಲ್‌ ಅವಾರ್ಡ್‌ ನೀರಿನ ಪ್ರಮಾಣ ಹೊರತುಪಡಿಸಿ) ಎಂದು ತಮಿಳುನಾಡು ಸರ್ಕಾರ ವಾದಮಂಡಿಸಿದೆ ಎಂದು ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು,ಆರಾಜ್ಯ ತನ್ನ ಹಿತದೃಷ್ಟಿಯಿಂದ ಮಾತನಾಡುತ್ತಿವೆ. ಆದರೆ,ನಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ನಾವು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಇಲ್ಲಿನ ನೀರಿನ ಅವಶ್ಯಕತೆಯನ್ನು ಆ ರಾಜ್ಯದ ಜಲಸಂಪನ್ಮೂಲ ಇಲಾಖೆ ಎಇಇಯಿಂದ ಹಿಡಿದು ಮುಖ್ಯಮಂತ್ರಿಗಳ ‌ವರೆಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಮೇಕೆದಾಟು ವಿಚಾರ‌ದಲ್ಲಿ ತಾವು ತಮಿಳುನಾಡು ಸರ್ಕಾರದೊಡನೆ ಮಾತನಾಡಲೂ ಸಿದ್ಧವೆಂದರು.

ಕೃಷಿಗೆ ಬಳಕೆ ಮಾಡಲ್ಲ: ಕಾವೇರಿ ನದಿ ಉಗಸ್ಥಾನ ದಿಂದ ಇಲ್ಲಿಗೆ (ಮೇಕೆದಾಟು) 350 ಕಿ.ಮೀ. ದೂರವಿದೆ. ರಾಜ್ಯಕ್ಕೆ ಸಲ್ಲಬೇಕಾದ ಸಾಕಷ್ಟು ನೀರು ಹೀಗೆ ಹರಿದು ಹೋಗುತ್ತಿದೆ. ಕುಡಿಯುವ ನೀರು:ಇಲ್ಲಿಂದ ಮೆಟ್ರೋ ಜಲಾಶಯ 90ಕಿ.ಮೀ. ದೂರವಿದೆ. ಮೇಕೆದಾಟು ಸಮತೋಲನ ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವ ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಲ್ಲದೇ, ಬೆಂಗಳೂರು ನಗರಕ್ಕೆ 4.75 ಟಿಎಂಸಿನೀರು ಇಲ್ಲಿಂದ ಪೂರೈಕೆ ಮಾಡಬಹುದು. ಬೆಂಗಳೂರು ನಗರದ ಮುಂದಿನ 30 ವರ್ಷಗಳ ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ಅಗತ್ಯವಾಗಿದೆ ಎಂದರು. ಈ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next