Advertisement
ಕಾರ್ಯಕರ್ತರ ಜತೆಗೆ ಆಯೋಜಿಸಿದ್ದ “ಮೇರಾ ಬೂತ್ ಸಬ್ ಸೆ ಮಜಬೂತ್’ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಸುಪ್ರೀತ್ ಭಂಡಾರಿ ಜತೆ ಮಾತನಾಡಿ ಈ ಸೂಚನೆ ನೀಡಿದರು. ಪ್ರತಿ ಬೂತ್‌ನಲ್ಲೂ ಮಹಿಳಾ ಮತದಾರರು ನಿರ್ಣಾಯಕರು. ಅವರನ್ನು ತಲುಪಲು ಕರ್ನಾಟಕದಲ್ಲಿ ನಡೆಸಿರುವ ಕಾರ್ಯ ಯೋಜನೆ ಏನೆಂದು ಪ್ರಶ್ನಿಸಿ, ಮೆಹಂದಿ ಅಭಿಯಾನ ನಡೆಸುವಂತೆ ಸಲಹೆ ನೀಡಿದರು. ಜತೆಗೆ ಉಡುಪಿ ಜತೆಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲಕು ಹಾಕಿದ ಮೋದಿ, ದ್ವಾರಕೆ ಹಾಗೂ ಉಡುಪಿಯ ನಂಟನ್ನು ಕಾರ್ಯಕರ್ತರಿಗೆ ವಿವರಿಸಿದರು.
ವೊಲಿಸಿ. ಬೇಸಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗುತ್ತಿದೆ. ಬೆಳಗ್ಗೆ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
Related Articles
ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇದ್ದು, ಪ್ರತಿ ಬೂತ್‌ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು. ಇದು ಗೆಲುವಿನ ನಮ್ಮನ್ನು ಕಡೆಗೆ ಕರೆದೊಯ್ಯಲಿದೆ. ಕರ್ನಾಟಕದಲ್ಲಿ ನಾವು ಆಡಳಿತದಲ್ಲಿ ಇಲ್ಲದಿದ್ದರೂ ಭೇದಭಾವ ಮಾಡಿಲ್ಲ ಎಂದ ಪ್ರಧಾನಿ, ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು ಎಂದು ಪ್ರಶ್ನಿಸಿದರು.
Advertisement
ಬಿಜೆಪಿ ಸರಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. “ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ. ಬೂತ್ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿದಿನದ ಕೆಲಸ ಮುಗಿದ ಬಳಿಕ ಸೇರಬೇಕು. ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿದೆ ಎಂದೂ ತಿಳಿಸಿದರು.ಮೈಸೂರಿನ ರಾಜೇಶ್, ಶಿವಮೊಗ್ಗದ ಸರಳಾ, ಬೆಳಗಾವಿಯ ಶ್ರುತಿ ಆಪ್ಟೆàಕರ್, ಉಡುಪಿಯ ಸುಪ್ರೀತ್ ಭಂಡಾರಿ ಜತೆ ಸಂವಾದ ನಡೆಯಿತು.