ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಅನಂತ್‌ನಾಗ್ ಜಿಲ್ಲೆಗೆ ಹೋಗದಂತೆ ತಡೆಯುವ ಸಲುವಾಗಿ ಮಂಗಳವಾರ ಗೃಹಬಂಧನದಲ್ಲಿ ಇರಿಸಲಾಗಿದೆ.
ಈ ಬಗ್ಗೆ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ನಾನು ಏ.6ರಂದು ಅನಂತ್‌ನಾಗ್ ಜಿಲ್ಲೆಯಲ್ಲಿ ಹಲ್ಲೆಗೊಳಗಾದ ಕಾಶ್ಮೀರಿ ಪಂಡಿತರ ಮನೆಗೆ ಭೇಟಿ ನೀಡುವವಳಿದ್ದೆ. ಅಲ್ಲಿಗೆ ನಾನು ಭೇಟಿ ನೀಡಬಾರದು, ಸತ್ಯ ಹೊರಬರಬಾರದು ಎಂಬ ಕಾರಣಕ್ಕೆ ಸರ್ಕಾರ ನನ್ನನ್ನು ಗೃಹಬಂಧನದಲ್ಲಿ ಇರಿಸಿದೆ’ ಎಂದು ಅವರು ಟ್ವಿಟರ್‌ನಲ್ಲಿ ದೂರಿದ್ದಾರೆ.
ಇದನ್ನೂ ಓದಿ:ಗೋವಾ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಿಲ್ಲ: ಸಿಎಂ ಸಾವಂತ್ ಸ್ಪಷ್ಟನೆ
ಆದರೆ ಮೆಹಬೂಬಾ ಅವರ ಸುರಕ್ಷತೆ ಕಾರಣಗಳಿಂದ ಗೃಹಬಂಧನ ಮಾಡಿದ್ದಾಗಿ ಸ್ಥಳೀಯ ಆಡಳಿತ ತಿಳಿಸಿದೆ.