Advertisement
* ನಿಮ್ಮ ಪಾತ್ರ ಹೇಗಿದೆ?ತುಂಬಾ ಅದ್ಭುತ ಪಾತ್ರವದು. ಕವಿರಾಜ್ ಸರ್, ಕಥೆ ಮತ್ತು ಪಾತ್ರದ ಬಗ್ಗೆ ಹೇಳುತ್ತಿದ್ದಂತೆಯೇ,ಒಪ್ಪಿಕೊಂಡೆ. ಅದೊಂದು ಚಾಲೆಂಜಿಂಗ್ ರೋಲ್. ಈವರೆಗೆ ಮಾಡದೇ ಇರುವಂತಹ ಪಾತ್ರ. ನೋಡಿದವರು ಖಂಡಿತ ಎಂಜಾಯ್ ಮಾಡ್ತಾರೆ.
ಅದೊಂದು “ಕಾಳಿ’ ತರಹದ ಪಾತ್ರ. ಒಂದರ್ಥದಲ್ಲಿ ಕಾಳಿ ಅಂದುಕೊಂಡರೂ ತಪ್ಪಿಲ್ಲ. ಕಥೆಯಲ್ಲಿ ಕಾಳಿ ಇದ್ದಂತೆ. ಕನ್ನಡ ಮೇಷ್ಟ್ರು ಒಬ್ಬರ ವಿರುದ್ಧವಾಗಿ ಇರುವ ಪಾತ್ರವದು. ಇಂಗ್ಲೀಷ್ ತುಂಬ ಓದಿಕೊಂಡವಳು. ಒಂದು ರೀತಿಯ ಹೈಫೈ ಹುಡುಗಿ. ಈಗಿನ ಟ್ರೆಂಡ್ ಸ್ಟೋರಿ. ಕನ್ನಡದವರಾಗಿದ್ದೂ ಇಂಗ್ಲೀಷ್ ವ್ಯಾಮೋಹ ಬೆಳೆಸಿಕೊಂಡಂತವಳು. ತನ್ನ ಮಗುವಿಗೂ ಇಂಗ್ಲೀಷ್ ಕಲಿಸಬೇಕು, ಆ ಶಾಲೆನೇ ಬೇಕೆಂಬ ಆಸೆ ಪಡುವ ಪಾತ್ರ. ಹಾಗಾಗಿ ಅದು ಕಾಳಿಯಂತೆ ಕಾಣುತ್ತೆ. * ಜಗ್ಗೇಶ್ ಜೊತೆ ಮೊದಲ ಸಿನ್ಮಾ ಏನನ್ನಿಸುತ್ತೆ?
ಈ ಹಿಂದೆ ಎರಡ್ಮೂರು ಅವಕಾಶ ಬಂದರೂ, ಮಾಡಲಿಲ್ಲ. ಈ ಕಥೆ, ಪಾತ್ರ ಇಷ್ಟವಾಯ್ತು. ಅದರಲ್ಲೂ ಜಗ್ಗೇಶ್ ಇರ್ತಾರೆ ಅಂದಾಗ ಅವಕಾಶ ಮಿಸ್ ಮಾಡ್ಕೊಬಾರದು ಅನಿಸಿತು. ಸೆಟ್‌ನಲ್ಲಿ ಜಗ್ಗೇಶ್ ಸರ್ ಇದ್ದರೆ ಹಾಸ್ಯಕ್ಕೆ ಕೊರತೆ ಇರುತ್ತಿರಲಿಲ್ಲ. ಅವರು ಬುದ್ಧಿವಂತ ನಟರು. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದವರು. ಹಾಗಾಗಿ ಎಲ್ಲಾ ತಾಂತ್ರಿಕತೆ ಅವರಿಗೆ ಗೊತ್ತು. ಒಂದೇ ಟೇಕ್‌ಗೆ ಫಿನಿಶ್ ಮಾಡುವ ಕಲಾವಿದರು. ಅವರಿಂದ ಸಾಕಷ್ಟು ಕಲಿತಿದ್ದೇನೆ. ಏನೋ ತೋಚದೇ ಹೋದಾಗ ಜಗ್ಗೇಶ್ ಅವರು ಸಹಾಯ ಮಾಡುತ್ತಿದ್ದರು.
Related Articles
ನನ್ನ ಪಾತ್ರಕ್ಕೆ ಇಲ್ಲಿ ಸಾಕಷ್ಟು ಜಾಗವಿದೆ. ಸಮಾಜವನ್ನು ಪ್ರತಿನಿಧಿಸುವ ಪಾತ್ರ ಅಂದುಕೊಳ್ಳಿ. ಈ ಸಿನಿಮಾ ಹಿಂದಿನ, ಮುಂದಿನ ಜನರೇಷನ್ ಎಲ್ಲದ್ದಕ್ಕೂ ಸೂಟ್ ಆಗುವ ಕಥೆ. ಶಿಕ್ಷಣ ವಿಷಯದಲ್ಲಿ ಸಾಕಷ್ಟು ಅಂಶಗಳನ್ನು ತೋರಿಸಲಾಗಿದೆ. ಮಕ್ಕಳ ಮೇಲೆ ಓದುವ ಒತ್ತಡ, ಪೋಷಕರ ಮೇಲೆ ಬೀಳುವ ಒತ್ತಡ, ಕನ್ನಡ ಭಾಷೆ ಪ್ರೀತಿ, ಇಂಗ್ಲೀಷ್ ವ್ಯಾಮೋಹ ಎಲ್ಲವೂ ಒಳಗೊಂಡಿದೆ. ಇದು ಮಕ್ಕಳಿಂದ ಹಿಡಿದು ಎಲ್ಲಾ ವರ್ಗದವರು ನೋಡುವ ಸಿನಿಮಾ.
Advertisement
* ಹಾಗಾದರೆ, ಕನ್ನಡಮಯ ಅನ್ನಿ?ಕನ್ನಡ ಭಾಷೆಗೆ ಇಲ್ಲಿ ಆದ್ಯತೆ ನೀಡಲಾಗಿದೆ ನಿಜ. ಆದರೆ, ಅದರ ಜೊತೆಯಲ್ಲಿ ಮುಖ್ಯವಾಗಿ ಇಂಗ್ಲೀಷ್ ಜಸ್ಟ್ ಲಾಂಗ್ವೇಜ್ ನಾಟ್ ಎ ನಾಲೆಡ್ಜ್ ಎಂಬುದನ್ನು ಹೇಳಲಾಗಿದೆ. ಶಿಕ್ಷಣದ ವ್ಯವಸ್ಥೆ ಹೇಗೆಲ್ಲಾ ಇರುತ್ತೆ ಎಂಬುದಕ್ಕೂ ಇಲ್ಲಿ ಉತ್ತರವಿದೆ. * ಮೇಷ್ಟ್ರುಗೆ ಸಾಕಷ್ಟು ಹಿಂಸೆ ಕೊಡ್ತೀರಾ?
ಹಾಗೇನೂ ಇಲ್ಲ. ಜಗ್ಗೇಶ್ ಸರ್ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ. ಅವರ ಪಾತ್ರಕ್ಕೆ ವಿರುದ್ಧವಾಗಿರುವ ಪಾತ್ರವಷ್ಟೇ ನನ್ನದು. ಚಿತ್ರ ನೋಡಿದವರಿಗೆ ಎಲ್ಲವೂ ಅರ್ಥವಾಗುತ್ತೆ.