Advertisement

ಕನ್ನಡತಿ ಮೇಘನಾ ದ.ಭಾರತದ ಮೊದಲ ಯುದ್ಧ ವಿಮಾನ ಪೈಲಟ್‌

06:30 AM Jun 17, 2018 | Team Udayavani |

ಚಿಕ್ಕಮಗಳೂರು: ಆಗಸದಲ್ಲಿ “ನಾರಿ ಶಕ್ತಿ ಪ್ರದರ್ಶನ’ಕ್ಕೆ ಮತ್ತೂಂದು ಕಿರೀಟ ಸೇರ್ಪಡೆಯಾಗಿದೆ. ಮೇಘನಾ ಶಾನು ಭೋಗ್‌ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6ನೇ ಯುದ್ಧ ವಿಮಾನದ ಮಹಿಳಾ ಪೈಲಟ್‌ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.

Advertisement

ಭಾರತೀಯ ವಾಯುದಳದ ತರಬೇತಿ ಪಡೆದು ಆಂಧ್ರದ ಭೀಂಡಗಲ್‌ನಲ್ಲಿ ಶನಿವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಯುದ್ಧ ವಿಮಾನದ ಮಹಿಳಾ ಪೈಲಟ್‌ ಆಗುವ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.
ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ನ್ಯಾಯವಾದಿ ಎಂ.ಕೆ. ರಮೇಶ್‌ ಹಾಗೂ ಉಡುಪಿ ಗ್ರಾಹಕ ಕೌನ್ಸಿಲ್‌ನ ಅಧ್ಯಕ್ಷೆ ಶೋಭಾ ಅವರ ಪುತ್ರಿ ಮೇಘನಾ ಅಪರೂಪದ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯದ ಹೆಸರನ್ನು ದೇಶಮಟ್ಟದಲ್ಲಿ ಬೆಳಗಿದ್ದಾಳೆ.

ನಗರ ಹೊರವಲಯದಲ್ಲಿರುವ ಮಹರ್ಷಿ ವಿದ್ಯಾಮಂದಿರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಮೇಘನಾ, 5ರಿಂದ 12ನೇ ತರಗತಿವರೆಗೆ ಬ್ರಹ್ಮಾವರದ ಲಿಟ್ಲ ರಾಕ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಓದಿದ್ದಾರೆ. ನಂತರ ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಎಂಜಿನಿಯರಿಂಗ್‌ ಓದುತ್ತಿದ್ದಾಗಲೇ ಅಡ್ವೆಂಚರ್‌ ಕ್ಲಬ್‌ ಸ್ಥಾಪಿಸಿ ಸ್ನೇಹಿತರೊಂದಿಗೆ ಸಾಹಸಮಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. 20ನೇ ವರ್ಷದಲ್ಲೇ ಮೊಟ್ಟ ಮೊದಲ ಬಾರಿಗೆ ಏಕಾಂಗಿಯಾಗಿ ಪ್ಯಾರಾ ಗ್ಲೆ„ಡಿಂಗ್‌ ನಡೆಸಿದ್ದಳು.

ದಿಕ್ಕು ಬದಲಾಯ್ತು: ಆಕಾಶಕ್ಕೆ ಏಕಾಂಗಿಯಾಗಿ ಏರಿದಾಗಲೇ ಮೇಘನಾಗೆ ತಾನು ಅಸಾಮಾನ್ಯವಾದುದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಚಿಗುರೊಡೆದಿತ್ತು. ಗೋವಾ ಬೀಚ್‌ನಲ್ಲಿ ಪ್ಯಾರಾ ಗ್ಲೆ„ಡರ್‌ನಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಜಿಗಿದಾಗ ನೋಡುಗರೆಲ್ಲ ಹುಬ್ಬೇರಿಸಿದ್ದರು. ಆ ಸಮಯದಲ್ಲಿ ತನ್ನಲ್ಲಿರುವ ಧೈರ್ಯ ಅರಿತ ಮೇಘನಾ ತಮ್ಮ ಸಾಹಸದ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಸಾಧನೆ ಮಾಡಲು ನಿರ್ಧರಿಸಿದರು. ಸಾಹಸಿ ಮೇಘನಾಗೆ ಮೊದಲ ಅವಕಾಶ ತೆರೆದುಕೊಂಡಿದ್ದು 2016ರ ಜೂನ್‌ನಲ್ಲಿ. ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಮಹಿಳಾ ಫೈಲೆಟ್‌ ಗಳಿಗೂ ಅವಕಾಶ ಎಂಬ ವಾಯುದಳದ ಪ್ರಕಟಣೆ ಅವರ ಬದುಕನ್ನೇ ಬದಲಿಸಿತು. ತಕ್ಷಣ ಏರ್‌ಫೋರ್ಸ್‌ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿ ಉತ್ತೀರ್ಣರಾದರು. ಆಂಧ್ರದ ಭೀಂಡಿಗಲ್‌ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಪ್ರವೇಶ ದೊರೆಯಿತು.

Advertisement

ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡ ಮೇಘನಾ ಭಾರತೀಯ ವಾಯು ದಳ ಸೇರಿದ್ದಾರೆ. ಸಾಹಸ ಪ್ರವೃತ್ತಿಯ ಮೇಘನಾ ಕೊನೆಗೂ ಯುದ್ಧವಿಮಾನ ಏರಲು ಸನ್ನದ್ಧರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next