Advertisement

ಹತ್ತೂ ವಿಕೆಟ್‌ ಹಾರಿಸಿದ ಮೇಘಾಲಯ ಸ್ಪಿನ್ನರ್‌

10:31 PM Nov 06, 2019 | Team Udayavani |

ಕೋಲ್ಕತಾ: ಮೇಘಾಲಯದ ಸ್ಪಿನ್ನರ್‌ ನಿರ್ದೇಶ್‌ ಬೈಸೋಯ ಇನ್ನಿಂಗ್ಸ್‌ ಒಂದರ ಹತ್ತೂ ವಿಕೆಟ್‌ ಉರುಳಿಸಿದ ಸಾಧನೆಗೈದಿದ್ದಾರೆ. ನಾಗಾಲ್ಯಾಂಡ್‌ ವಿರುದ್ಧ ನಡೆದ ಅಂಡರ್‌-16 ವಿಜಯ್‌ ಮರ್ಚಂಟ್‌ ಟ್ರೋಫಿ ಪಂದ್ಯದ ಮೊದಲ ದಿನದಾಟದಲ್ಲಿ ಅವರು 51 ರನ್‌ ವೆಚ್ಚದಲ್ಲಿ 10 ವಿಕೆಟ್‌ ಹಾರಿಸಿ ಜಿಮ್‌ ಲೇಕರ್‌, ಅನಿಲ್‌ ಕುಂಬ್ಳೆ ಸಾಲಿನಲ್ಲಿ ಕಾಣಿಸಿಕೊಂಡರು.

Advertisement

ಮೂಲತಃ ಮೀರತ್‌ನವರಾದ ನಿರ್ದೇಶ್‌ ಬೈಸೋಯ ಮೇಘಾಲಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 21 ಓವರ್‌ ಎಸೆದ ಅವರು 10 ಓವರ್‌ಗಳನ್ನು ಮೇಡನ್‌ ಮಾಡಿದ್ದರು. ಬೈಸೋಯ ದಾಳಿಗೆ ಕುಸಿದ ನಾಗಾಲ್ಯಾಂಡ್‌ 113 ರನ್ನಿಗೆ ಆಲೌಟ್‌ ಆಯಿತು.

“ಅನಿಲ್‌ ಕುಂಬ್ಳೆ 10 ವಿಕೆಟ್‌ ಉರುಳಿಸಿದ ವೇಳೆ ನಾನಿನ್ನೂ ಹುಟ್ಟಿರಲಿಲ್ಲ. ಆದರೆ ಈ ಸಾಧನೆ ಬಗ್ಗೆ ಕೇಳಿದ್ದೆ. ಕ್ರಿಕೆಟ್‌ನಲ್ಲಿ ಇಂಥದೇ ಏನಾದರೊಂದು ಸಾಧನೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಅದು ಇಷ್ಟು ಬೇಗ, ಈ ರೀತಿಯಲ್ಲಿ ನನಸಾಗುತ್ತದೆಂದು ನಾನು ಎಣಿಸಿರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ ನಿರ್ದೇಶ್‌ ಬೈಸೋಯ.

Advertisement

Udayavani is now on Telegram. Click here to join our channel and stay updated with the latest news.

Next