Advertisement

ಮೇಘಾಲಯ ಗಣಿ ಕಾರ್ಮಿಕರ ರಕ್ಷಣೆಗೆ ವಾಯುಪಡೆ ಎಂಟ್ರಿ

12:30 AM Dec 29, 2018 | |

ಶಿಲ್ಲಾಂಗ್‌: ನೀರು ತುಂಬಿರುವ 370 ಅಡಿ ಆಳದ ಗಣಿಯೊಳಗೆ 15 ಮಂದಿ ಕಾರ್ಮಿಕರು ಸಿಲುಕಿ, ಶನಿವಾರಕ್ಕೆ ಸರಿಯಾಗಿ 16 ದಿನ ತುಂಬಿದೆ. ಅವರ ರಕ್ಷಣೆಗಾಗಿ ನಿರಂತರ ಪ್ರಯತ್ನ ನಡೆಯುತ್ತಿದ್ದು, ಶುಕ್ರವಾರ ಭಾರತೀಯ ವಾಯುಪಡೆಯ ಎಂಟ್ರಿಯಾಗಿದೆ.

Advertisement

ಗಣಿಯೊಳಗಿಂದ ನೀರನ್ನು ಹೊರತೆಗೆಯಲು ಅತ್ಯಧಿಕ ಶಕ್ತಿಯ 20 ಪಂಪ್‌ಗ್ಳನ್ನು ವಾಯುಪಡೆಯ ವಿಮಾನದ ಮೂಲಕ ತರಲಾಗಿದೆ. ಒಡಿಶಾದಿಂದ ಬಂದಿರುವ ಅಗ್ನಿಶಾ ಮಕ ತಂಡವು ನೀರು ತುಂಬಿರುವಂಥ ಕಲ್ಲಿದ್ದಲು ಗಣಿಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ಕೌಶಲ್ಯ ಪ್ರಯೋಗಿಸಲಿದೆ. ಹಲವು ಹೈಟೆಕ್‌ ಸಲಕರಣೆಗಳು ಹಾಗೂ ಗ್ಯಾಜೆಟ್‌ಗಳನ್ನೂ ಬಳಸಲಿದೆ. ಮೊದಲು ಆ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸಿ, ನಂತರ ಕಾರ್ಯಾಚರಣೆಗೆ ಯೋಜನೆ ಸಿದ್ಧಪಡಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕ ಸಾಮರ್ಥ್ಯದ ಪಂಪ್‌ಗ್ಳು ಇಲ್ಲದ ಕಾರಣ ಸೋಮವಾರದಿಂದಲೂ ನೀರು ಹೊರತೆಗೆಯುವ ಕಾರ್ಯ ನಡೆದೇ ಇಲ್ಲ. ಕಿರ್ಲೋಸ್ಕರ್‌ ಪಂಪ್ಸ್‌ನ ಪರಿಶೀಲನಾ ತಂಡ ಹಾಗೂ ಕೋಲ್‌ ಇಂಡಿಯಾ ಸಂಸ್ಥೆಯ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಗಣಿಯಿಂದ ಬರುತ್ತಿದೆ ಕೆಟ್ಟ ವಾಸನೆ: 15 ದಿನಗಳ ಹಿಂದೆಯೇ ಕಾರ್ಮಿಕರು ಒಳಗೆ ಸಿಲುಕೊಂಡಿದ್ದು, ಡಿ.25ರಿಂದ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಹೀಗಾಗಿ, ಈಗ ಹೊರತೆಗೆಯುತ್ತಿರುವ ನೀರಿನಲ್ಲಿ ಕೆಟ್ಟ ವಾಸನೆ ಬರುತ್ತಿದ್ದು, ಕಾರ್ಮಿಕರು ಮೃತಪಟ್ಟು ಅವರ ದೇಹ ಕೊಳೆತುಹೋಗಲು ಆರಂಭಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

ಆಗಿದ್ದೇನು?: 4 ವರ್ಷಗಳ ಹಿಂದೆಯೇ ಗಣಿಗಾರಿಕೆಗೆ ಎನ್‌ಜಿಟಿ ನಿಷೇಧ ಹೇರಿದ್ದರೂ, ಗಣಿಗಾರಿಕೆ ಮಾತ್ರ ಅವ್ಯಾ ಹತವಾಗಿ ನಡೆಯುತ್ತಲೇ ಇತ್ತು. ಡಿ.13ರಂದು ಮೇಘಾ ಲಯದ ಪೂರ್ವ ಜೈಂತಿಯಾ ಪ್ರದೇಶದಲ್ಲಿ ಕಾರ್ಮಿಕರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು. ಪಕ್ಕದಲ್ಲೇ ನದಿಯೊಂದಿದ್ದು, ಅದರ ನೀರು ಏಕಾಏಕಿ ಗಣಿಯೊಳಗೆ ತುಂಬಿಕೊಂಡು, ಪ್ರವಾಸ ಸ್ಥಿತಿ ಸೃಷ್ಟಿಯಾಯಿತು. ಹೀಗಾಗಿ, ಕಾರ್ಮಿಕರಿಗೆ ಹೊರಬರಲು ಸಾಧ್ಯವಾಗಲಿಲ್ಲ. 

Advertisement

21: ವಾಯುಪಡೆ ವಿಮಾನ ದಲ್ಲಿ ಸ್ಥಳಕ್ಕೆ ಧಾವಿಸಿರುವ ಒಡಿಶಾ ಅಗ್ನಿಶಾಮಕ ಸಿಬ್ಬಂದಿಯ ಸಂಖ್ಯೆ

150 ವರ್ಷಗಳಿಂದಲೂ ನಡೆಯುತ್ತಿರುವ ಗಣಿಗಾರಿಕೆ.

1,600 ಲೀಟರ್‌  ಪ್ರತಿಯೊಂದು ಪಂಪ್‌ ಒಂದು ನಿಮಿಷದಲ್ಲಿ ಹೊರತೆಗೆಯುವ ನೀರಿನ ಪ್ರಮಾಣ

15: ಗಣಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕರು
370 ಅಡಿ: ಆಳದಲ್ಲಿ ಸಿಲುಕಿರುವ 15 ಮಂದಿ
20:  ಗಣಿಯಲ್ಲಿರುವ ನೀರು ಹೊರ ತೆಗೆಯಲು ಬಳಸಲಾಗುವ ಹೈಪವರ್‌ ಪಂಪ್‌ಗ್ಳ ಸಂಖ್ಯೆ
64 ಕೋಟಿ ಟನ್‌ ಮೇಘಾಲಯ ದಲ್ಲಿರುವ ಗಣಿ ಸಂಪತ್ತು

ಹಿಂದಿನ ಘಟನೆಗಳು
2014, ಫೆಬ್ರವರಿ:
ಗಾರೋ ಹಿಲ್ಸ್‌ನಲ್ಲಿ ಅಕ್ರಮ ಗಣಿಯ ಒಂದು ಭಾಗ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರ ಸಾವು
2013, ಡಿಸೆಂಬರ್‌:  ಜೈಂತಿಯಾ ಹಿಲ್ಸ್‌ನಲ್ಲಿ ಕಾರ್ಮಿಕರನ್ನು ಗಣಿಯೊಳಕ್ಕೆ ಕೊಂಡೊಯ್ಯುತ್ತಿದ್ದ ಯಂತ್ರದ ಕೇಬಲ್‌ ತುಂಡಾಗಿ ಐವರು ಕಾರ್ಮಿಕರು ಬಲಿ
2012, ಜುಲೈ: ಗಾರೋ ಹಿಲ್ಸ್‌ನಲ್ಲಿ ಭೂಮಿಯಡಿಯ ಹಳ್ಳವೊಂದರ ನೀರು ಗಣಿಯಲ್ಲಿ ತುಂಬಿದ ಪರಿಣಾಮ, ನೀರಲ್ಲಿ ಮುಳುಗಿ 15 ಕಾರ್ಮಿಕರು ಸಾವು

Advertisement

Udayavani is now on Telegram. Click here to join our channel and stay updated with the latest news.

Next