Advertisement

ಗ್ಲಾಮರಸ್‌ ಲುಕ್‌ ನಲ್ಲಿ ಮೇಘಾ ಶೆಟ್ಟಿ ಫೋಟೋಶೂಟ್‌

06:23 PM Aug 12, 2023 | Team Udayavani |

“ಜೊತೆ ಜೊತೆಯಲಿ’ ಸೀರಿಯಲ್‌ ಮೂಲಕ ಅನು ಸಿರಿಮನೆಯಾಗಿ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ನಟಿ ಮೇಘಾ ಶೆಟ್ಟಿ ಈಗ ಪೂರ್ಣ ಪ್ರಮಾಣದಲ್ಲಿ ಹಿರಿತೆರೆಯತ್ತ ಚಿತ್ತ ಹರಿಸಿದ್ದಾರೆ. ಈಗಾಗಲೇ ಗಣೇಶ್‌ ಜೊತೆ “ತ್ರಿಬಲ್‌ ರೈಡಿಂಗ್‌’, ಡಾರ್ಲಿಂಗ್‌ ಕೃಷ್ಣ ಜೊತೆ “ದಿಲ್‌ ಪಸಂದ್‌’ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ, ಸದ್ಯ “ಆಪರೇಷನ್‌ ಲಂಡನ್‌ ಕೆಫೆ’, “ಕೈವ’ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Advertisement

ಸಿನಿಮಾದ ಜೊತೆ ಜೊತೆಯಲ್ಲಿಯೇ ಸೋಶಿಯಲ್‌ ಮೀಡಿಯಾಗಳಲ್ಲೂ ಸದಾ ಆ್ಯಕ್ಟೀವ್‌ ಆಗಿರುವ ಮೇಘಾ ಶೆಟ್ಟಿ, ಆಗಾಗ್ಗೆ ಹೊಸ ಲುಕ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡು ಅದನ್ನು ಸೋಶಿಯಲ್‌ ಮೀಡಿಯಾದ ತಮ್ಮ ಅಕೌಂಟ್‌ನಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮೇಘಾ ಶೆಟ್ಟಿ ಅಂಥದ್ದೇ ಫೋಟೋಶೂಟ್‌ ನ ಒಂದಷ್ಟು ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ತಾನು ಶೇರ್‌ ಮಾಡಿರುವ ಫೋಟೋಗಳಲ್ಲಿ ಕರ್ಲಿ ಹೇರ್‌ ಸ್ಟೈಲಿನಲ್ಲಿ ಕಪ್ಪು ಬಣ್ಣದ ಶಾರ್ಟ್‌ ಡ್ರೆಸ್‌ ಧರಿಸಿ, ಕ್ಯಾಮೆರಾ ಕಣ್ಣಿಗೆ ಸ್ಟೈಲ್‌ ಆಗಿ ಪೋಸ್‌ ನೀಡಿರುವ ಮೇಘಾ ಶೆಟ್ಟಿ, ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ. ಸದ್ಯ ಮೇಘಾ ಶೆಟ್ಟಿ ಶೇರ್‌ ಮಾಡಿರುವ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಬೋಲ್ಡ್ ಆಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಈ ಫೋಟೋಗಳು ವೈರಲ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next