Advertisement

‘ಆಪರೇಶನ್‌ ಲಂಡನ್‌ ಕೆಫೆ’ ಮೇಲೆ ಮೇಘಾ ನಿರೀಕ್ಷೆ

01:31 PM Aug 06, 2023 | Team Udayavani |

ಇತ್ತೀಚೆಗಷ್ಟೇ “ಜೊತೆ ಜೊತೆಯಲಿ…’ ಧಾರಾವಾಹಿ ಮುಗಿಸಿ ಹೊರಬಂದಿರುವ ನಟಿ ಮೇಘಾ ಶೆಟ್ಟಿ, ಈಗ ಪೂರ್ಣ ಪ್ರಮಾಣದಲ್ಲಿ ಹಿರಿತೆರೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

Advertisement

ಸದ್ಯ ಮೇಘಾ ಶೆಟ್ಟಿ “ಆಪರೇಶನ್‌ ಲಂಡನ್‌ ಕೆಫೆ’ ಎಂಬ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸು ತ್ತಿದ್ದು, ಇತ್ತೀಚೆಗೆ ಮೇಘಾ ಶೆಟ್ಟಿ ಸಿನಿಮಾದಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ.

ಕನ್ನಡ ಜೊತೆಗೆ ಮರಾಠಿ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ “ಆಪರೇಶನ್‌ ಲಂಡನ್‌ ಕೆಫೆ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರಿಗೆ ಕವೀಶ್‌ ಶೆಟ್ಟಿ ನಾಯಕನಾಗಿ ಜೋಡಿಯಾಗುತ್ತಿದ್ದಾರೆ.

“ಇಂಡಿಯನ್‌ ಫಿಲಂ ಫ್ಯಾಕ್ಟರಿ’ ಮತ್ತು “ದೀಪಕ್‌ ರಾಣೆ ಫಿಲಂಸ್‌’ ಲಾಂಛನ ದಡಿಯಲ್ಲಿ ವಿಜಯ್‌ ಕುಮಾರ್‌ ಶೆಟ್ಟಿ ಹವರಾಲ್‌ ರಮೇಶ್‌ ಕೊಠಾರಿ ಮತ್ತು ದೀಪಕ್‌ ರಾಣೆ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿ ಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next