“ಜೊತೆಜೊತೆಯಲಿ’ ಧಾರಾವಾಹಿಯಿಂದ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. “ಅನು ಸಿರಿಮನೆ’ ಪಾತ್ರದಲ್ಲಿ ಮೇಘಾ ಶೆಟ್ಟಿ ಅವರನ್ನು ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ಇದರಿಂದಬೇಸರವಾಗಿದ್ದು ಸುಳ್ಳಲ್ಲ. ಆದರೆ,ಈಗ ಆ ಗೊಂದಲ ಬಗೆಹರಿದಿದೆ.
ಅನು ಸಿರಿಮನೆ-ಈ ಹೆಸರನ್ನು ಕಿರುತೆರೆ ಪ್ರಿಯರು ಖಂಡಿತಾ ಕೇಳಿರುತ್ತಾರೆ. “ಜೊತೆ ಜೊತೆಯಲಿ’ ಧಾರಾವಾಹಿಯ ಅನು ಸಿರಿಮನೆ ಪಾತ್ರದ ಮೂಲಕ ಬೆಳಕಿಗೆ ಬಂದು, ಅಷ್ಟೇ ಬೇಗನೇ ಖ್ಯಾತರಾದವರು ಮೇಘಾ ಶೆಟ್ಟಿ. ಆದರೆ, ಇತ್ತೀಚೆಗೆ ಕಿರುತೆರೆ ಅಭಿಮಾನಿಗಳಿಗೆ ನಿರಾಸೆಯಾಗುವಂತಹ ಸುದ್ದಿಯೊಂದು ಹರಿದಾಡಿತ್ತು. ಅದೇನೆಂದರೆ “ಜೊತೆಜೊತೆಯಲಿ’ ಧಾರಾವಾಹಿಯಿಂದ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬುದು.
“ಅನು ಸಿರಿಮನೆ’ ಪಾತ್ರದಲ್ಲಿ ಮೇಘಾ ಶೆಟ್ಟಿ ಅವರನ್ನು ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ಇದರಿಂದ ಬೇಸರವಾಗಿದ್ದು ಸುಳ್ಳಲ್ಲ. ಆದರೆ,ಈಗ ಆ ಗೊಂದಲ ಬಗೆಹರಿದಿದೆ. “ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಮುಂದುವರೆಯುತ್ತಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಬಾಲಿವುಡ್ ನಟಿ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ
ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ ಮೇಘಾ ಶೆಟ್ಟಿ, “ಕಳೆದ ನಾಲ್ಕೈದು ದಿನಗಳಿಂದ ನಾನು ‘ಜೊತೆಜೊತೆಯಲಿ’ ಧಾರಾವಾಹಿಯಿಂದ ಹೊರಗೆ ಬಂದಿದ್ದೇನೆ ಎಂಬಸುದ್ದಿ ಹರಿದಾಡಿತ್ತು.ಆದರೆ, ಈಗ ನಾನು ಆ ವಿಚಾರಕ್ಕೆ ಸ್ಪಷ್ಟನೆ ನೀಡುತ್ತೇನೆ. ನಾನು”ಜೊತೆಜೊತೆಯಲಿ’ ಧಾರಾವಾಹಿ ಮುಗಿಯುವವರೆಗೂ ಅದರಲ್ಲಿ ಮುಂದುವರೆಯುತ್ತೇನೆ. ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತೇನೆ. ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಗೊಂದಲಗಳು ಸಹಜ. ಅದೇ ರೀತಿ ನನ್ನ ಕುಟುಂಬದಲ್ಲೂ ಗೊಂದಲಗಳಿತ್ತು. ಈಗ ಆ ಗೊಂದಲಗಳು ಬಗೆಹರಿದಿವೆ. ಧಾರಾವಾಹಿಯಲ್ಲಿ ಮುಂದುವರೆಯುತ್ತೇನೆ. ಆ ಧಾರಾವಾಹಿ ನನಗೆ ಸಾಕಷ್ಟು ಹೆಸರು ಕೊಟ್ಟಿದೆ. ಅಭಿಮಾನಿಗಳ ಪ್ರೀತಿಗೆ ಕಾರಣವಾಗಿದೆ’ ಎನ್ನುವ ಮೂಲಕ ಗೊಂದಲಕ್ಕೆ ತೆರೆಎಳೆದಿದ್ದಾರೆ ಮೇಘಾ ಶೆಟ್ಟಿ.
ಸದ್ಯ ಮೇಘಾ ಶೆಟ್ಟಿ ಹಿರಿತೆರೆಗೂಕಾಲಿಟ್ಟಿದ್ದು, ಗಣೇಶ್ ನಾಯಕರಾಗಿರುವ “ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇನ್ನೊಂದೆರಡು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದಾರೆನ್ನಲಾಗಿದೆ.